“ಸೋನಿಯಾ ಅಳಿಯನಿಂದ ಬೆಂಗಳೂರಲ್ಲೂ ಭೂಕಬಳಿಕೆ’
Team Udayavani, Jan 11, 2017, 3:45 AM IST
ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲುದಾರರಾಗಿರುವ ಬಿಲ್ಡರ್ ಸಂಸ್ಥೆಯೊಂದು ಬೆಂಗಳೂರಲ್ಲಿ ಭಾರೀ ಗೋಲ… ಮಾಲ… ನಡೆಸಿದ್ದು, 250 ಕೋಟಿ ರೂ. ಬೆಲೆಯ ಸರ್ಕಾರಿ ಜಮೀನನ್ನು ಕಬಳಿಕೆ
ಮಾಡಿರುವುದರ ಜತೆಗೆ ಇಬ್ಬರು ಕಾರ್ಮಿಕರ ಸಾವನ್ನು ಮುಚ್ಚಿ ಹಾಕಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ಮತ್ತು ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಥಣಿಸಂಸ್ರ ಬಳಿ: ರಾಬರ್ಟ್ ವಾದ್ರಾ ಪಾಲುದಾರಿಕೆ ಸಂಸ್ಥೆಯ ಅವ್ಯವಹಾರಗಳ ಕುರಿತು ಮಂಗಳವಾರ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ರಮೇಶ್, ಯಲಹಂಕ ವಲಯದಲ್ಲಿ ನಾಗವಾರ ಥಣಿಸಂದ್ರ ರಸ್ತೆಯಲ್ಲಿ ಭಾರತೀಯ ಸಿಟಿ ಟೌನ್‌ಶಿಪ್ ನಿರ್ಮಾಣಕ್ಕಾಗಿ 250 ಕೋಟಿ ರೂ. ಮೌಲ್ಯದ 106.01 ಎಕರೆ ಸರ್ಕಾರಿ ಜಾಗವನ್ನು ಭೂಕಬಳಿಕೆ ಮಾಡಿರುವ ಹಿಂದೆ ವಾದ್ರಾ ಅವರ ಪಾತ್ರವಿದೆ.
ಸರ್ಕಾರ ಮತ್ತು ಬಿಬಿಎಂಪಿ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸಹಕರಿಸಿವೆ. ಜಿಗ್ಮಾ ಲ್ಯಾಂಡ್ ಡೆವಲಪರ್, ಭಾರತೀಯ ಸಿಟಿ ಡೆವಲಪರ್, ನಿಕೋ ಹೋಮ್ಸ್ ಎಂಬ ವಿವಿಧ ಹೆಸರಗಳ ರಿಯಲ್ ಎಸ್ಟೇಟ್ ಸಂಸ್ಥೆಯ ಹೆಸರಲ್ಲಿ ರಾಬರ್ಟ್ ವಾದ್ರಾ ಪಾಲುದಾರರಾಗಿದ್ದಾರೆ ಎಂದರು.
ಅಧಿಕಾರಿಗಳು ಶಾಮೀಲು ರಾಜಕಾಲವೆಯನ್ನು ಮುಚ್ಚಿಹಾಕಿ ನಿರ್ಬಂಧಿತ ಪ್ರದೇಶವನ್ನು ಕಬಳಿಕೆ ಮಾಡಿದ್ದಾರೆ. ಈ ಸಂಸ್ಥೆಯ 106 ಎಕರೆ ಪ್ರದೇಶವನ್ನು ಖಾತೆ ಮಾಡಿಕೊಡುವ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಾಬರ್ಟ್‌ವಾದ್ರಾ ಪಾಲುದಾರಿಕೆ ಸಂಸ್ಥೆಯ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದರು.
ವಾದ್ರಾ ಷೇರು ಎಷ್ಟು?
ಥಣಿಸಂದ್ರದಲ್ಲಿ ಭಾರತೀಯ ಸಿಟಿ ಡೆವಲಪರ್ ಪ್ರ„ವೇಟ್ ಲಿಮಿಟೆಡ್ ನಿರ್ಮಾಣ ಮಾಡಲಾಗುತ್ತಿರುವ ಟೌನ್‌ಶಿಪ್‌ನಲ್ಲಿ ವಾದ್ರಾ
ಯೋಜನೆಯ 10,600 ಷೇರುಗಳ ಪೈಕಿ 10 ಸಾವಿರ ಷೇರುಗಳನ್ನು ಬೇನಾಮಿ ಹೆಸರಿನಲ್ಲಿ ಹೊಂದಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.