27,000 ಗಡಿ ದಾಟಿದ ಮುಂಬಯಿ ಶೇರು, ನಿಫ್ಟಿ 8,300ರ ಎತ್ತರಕ್ಕೆ
Team Udayavani, Jan 11, 2017, 11:25 AM IST
ಮುಂಬಯಿ : ಏಶ್ಯನ್ ಶೇರುಮಾರುಕಟ್ಟೆಗಳಲ್ಲಿನ ತೇಜಿಯನ್ನು ಅನುಸರಿಸಿ ಮುನ್ನಡೆ ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 151 ಅಂಕಗಳ ಏರಿಕೆಯನ್ನು ದಾಖಲಿಸಿ 27,000 ಅಂಕಗಳ ಗಡಿ ದಾಟುವಲ್ಲಿ ಸಫಲವಾಗಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡ 8,300 ಅಂಕಗಳ ಗಡಿಯನ್ನು ದಾಟಿ ಮುಂದಕ್ಕೆ ನೆಗೆದಿದೆ.
ಇಂದು ಮಧ್ಯಾಹ್ನ 11.30ರ ಹೊತ್ತಿಗೆ ಸೆನ್ಸೆಕ್ಸ್ 131.99 ಅಂಕಗಳ ಮುನ್ನಡೆಯೊಂದಿಗೆ 27,031.55 ಅಂಕಗಳ ಮಟ್ಟದಲ್ಲಿ ಹಾಗೂ ನಿಫ್ಟಿ 49 ಅಂಕಗಳ ಏರಿಕೆಯೊಂದಿಗೆ 8,337.60 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ನಿನ್ನೆ ಮಂಗಳವಾರದ ವಹಿವಾಟಿನಲ್ಲಿ 173.01 ಅಂಕಗಳ ಉತ್ತಮ ಏರಿಕೆಯನ್ನು ಕಂಡಿದ್ದ ಸೆನ್ಸೆಕ್ಸ್ ಇಂದು ಬುಧವಾರ ಮೆಟಲ್, ಕ್ಯಾಪಿಟಲ್ ಗೂಡ್ಸ್ ಮತ್ತು ಬ್ಯಾಂಕ್ ಶೇರುಗಳ ಬಲದಲ್ಲಿ ತೇಜಿಯನ್ನು ಕಂಡಿತು. ಎಚ್ ಡಿ ಎಫ್ ಸಿ ಉಭಯ ಕಂಪೆನಿಗಳೊಂದಿಗೆ ಐಸಿಐಸಿಐ ಬ್ಯಾಂಕ್ ಇಂದಿನ ಮುನ್ನಡೆಗೆ ಸಾಥ್ ನೀಡಿದವು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್ ನ ಹ್ಯಾಂಗ್‌ಸೆಂಗ್ ಶೇ.0.74, ಜಪಾನಿನ ನಿಕ್ಕಿ ಶೇ.0.36ರ ಏರಿಕೆಯನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ಕಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.