ಮೂಡಬಿದರೆ ಕಿರಣ್‌ಭಟ್‌ಗೆ ತಾಂತ್ರಿಕ ಆಸ್ಕರ್ ಪ್ರಶಸ್ತಿ
Team Udayavani, Jan 11, 2017, 11:30 AM IST
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಕಿರಣ್ ಭಟ್ ಹಾಲಿವುಡ್ ಜಗತ್ತಿನ ಸಿನಿಮಾ ಕ್ಷೇತ್ರದಲ್ಲಿನ ವಿಶಿಷ್ಟ ತಾಂತ್ರಿಕ ಸಾಧನೆ ಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ.11ಕ್ಕೆ ಅಮೆರಿಕದಲ್ಲಿ ಪ್ರಶಸ್ತಿ ಪ್ರದಾನ ನಡೆಯ ಲಿದೆ. ಕಿರಣ್ ಭಟ್ ಅಭಿವೃದ್ಧಿಗೊಳಿಸಿದ “ಐಎಲ್‌ಎಂ ಫೇಸಿಯಲ್ ಪರ್ ಫಾರ್ಮೆನ್ಸ್-ಕ್ಯಾಪcರ್ ಸಾಲ್ವಿಂಗ್ ಸಿಸ್ಟಮ್’ಗಾಗಿ ಆಸ್ಕರ್ ಲಭಿಸಿದೆ. ಇವರ ತಂತ್ರಜ್ಞಾನವನ್ನು ಸ್ಟಾರ್‌ವಾರ್-7, ವಾರ್‌ಕ್ರಾಫ್ಟ್, ಎವೆಂಜರ್, ಸ್ಟಾರ್‌ವಾರ್ ರೋಗ್-1 ಮುಂತಾದ ಹಾಲಿವುಡ್ ಚಿತ್ರಗಳಲ್ಲಿ ಬಳಸಲಾಗಿದೆ.
41ರ ಹರೆಯದ ಕಿರಣ್ ಭಟ್ ಅಭಿವೃದ್ಧಿಗೊಳಿಸಿದ “ಐಎಲ್‌ಎಂ ಫೇಸಿಯಲ್ ಪರ್‌ಫಾರ್ಮೆನ್ಸ್-ಕ್ಯಾಪರ್ ಸಾಲ್ವಿಂಗ್ ಸಿಸ್ಟಮ್’ಗಾಗಿ ಆಸ್ಕರ್ ಲಭಿಸಿದೆ. ಕಾಲ್ಪನಿಕ ಅಥವಾ ಜತೆಯಲ್ಲಿಲ್ಲದ ಪಾತ್ರಗಳನ್ನು ನೈಜರೂಪದಲ್ಲಿ ತೋರಿಸುವ
ಇವರ ತಂತ್ರಜ್ಞಾನ ಸ್ಟಾರ್‌ವಾರ್-7, ವಾರ್ ಕ್ರಾಫ್ಟ್, ಎವೆಂಜರ್, ಸ್ಟಾರ್‌ವಾರ್ ರೋಗ್ -1 ಮುಂತಾದ ಹಾಲಿವುಡ್ ಚಿತ್ರಗಳಲ್ಲಿ ಬಳಕೆಯಾಗಿದೆ. ಈ ಸಾಧನೆಯನ್ನು ಗುರುತಿಸಿರುವ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್, ಫೆ. 11ರಂದು ಬೆವೆರ್ಲಿ ವಿಲ್‌ಶೈರ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಮಾಡುತ್ತಿದೆ. ಈವರೆಗೆ 7
ಮಂದಿ ಭಾರತೀಯರು ಮಾತ್ರ ಆಸ್ಕರ್‌ಗೆ ಪಾತ್ರರಾಗಿದ್ದಾರೆ.
ಕಡಂದಲೆಯವರು:
ಪ್ರಸ್ತುತ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಕೈಗಾರಿಕಾ ಉದ್ಯಮಿಯಾಗಿರುವ ಕಿರಣ್ ಭಟ್, ಡಿಜಿಟಲ್ ಕ್ಯಾಮೆರಾ ಮೂಲಕವೇ ಮುಖ ಭಾವಗಳನ್ನು ಪರಿಷ್ಕರಿಸುವ ತಂತ್ರಜ್ಞಾನವನ್ನು ಹಾಲಿವುಡ್ ಜಗತ್ತಿಗೆ ನೀಡಿದ್ದಾರೆ. ಕಿರಣ್
ಭಟ್ ಅವರ ತಂದೆ ಮೂಡಬಿದಿರೆ ಸಮೀಪದ ಕಡಂದಲೆ ಶ್ರೀನಿವಾಸ ಭಟ್. ತಾಯಿ ಕಲ್ಯಾಣಪುರ ಮೂಲದ
ಜಯಶ್ರೀ. ಭಟ್ ಅವರ ಮೂಲ ಕುಟುಂಬ ಕಡಂದಲೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಕೈಂಕರ್ಯ ನಿರ್ವಹಿಸುತ್ತಿತ್ತು. ಭಟ್ ಅವರು 15 ವರ್ಷ ವಿಪ್ರೋದಲ್ಲಿದ್ದರು.
ಪಿಲಾನಿಯ ಬಿರ್ಲಾ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಆ್ಯಂಡ್ ಎಂಜಿನಿಯರಿಂಗ್
ಪದವಿ ಪಡೆದು, ಅಮೆರಿಕದ ಕಾರ್ನೆಗಿ ಮೆಲನ್ ವಿ.ವಿ.ಯಲ್ಲಿ ಕಂಪ್ಯೂಟರ್ ಸೈನ್ Õನಲ್ಲಿ ಡಾಕ್ಟರೇಟ್ ಪಡೆದರು. ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ, ಬಳಿಕ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ತನ್ನದೇ ಆದ ತಾಂತ್ರಿಕ ಸಂಸ್ಥೆ ಸ್ಥಾಪಿಸಿದರು. ಆರು ವರ್ಷಗಳ ಹಿಂದೆ, ತನ್ನ ಸಹೋದ್ಯೋಗಿಗಳ ಜತೆ ಐಎಲ್‌ಎಂ ತಂತ್ರಜ್ಞಾನ ನಿರ್ಮಿಸಿದ್ದು, ಇದು ಹಾಲಿವುಡ್ ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿತು. ಭಟ್ ಅವರ ಪತ್ನಿ ಮುಂಬಯಿಯ ಪಾಯಲ್ ಅವರು ಕೂಡ ಡಾಕ್ಟರೇಟ್ ಪಡೆದವರು.
ಭಾರತದಲ್ಲೂ ಬಳಕೆ?: ಕಿರಣ್ ಭಟ್ ಅವರು ಆವಿಷ್ಕರಿಸಿದ ತಂತ್ರಜ್ಞಾನ ಸದ್ಯ ಹಾಲಿವುಡ್‌ನಲ್ಲಿ ಬಳಕೆಯಲ್ಲಿದೆ. ಆದರೆ ಈ ತಂತ್ರಜ್ಞಾನವನ್ನು ಭಾರತೀಯ ಚಲನಚಿತ್ರರಂಗಕ್ಕೂ ಪರಿಚಯಿಸುವ ಇರಾದೆ ಕಿರಣ್ ಅವರಲ್ಲಿದೆ. ಈ
ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಒಂದೆರಡು ವರ್ಷಗಳಲ್ಲಿ ಭಾರತೀಯ ಚಿತ್ರರಂಗಕ್ಕೂ ಬರಲಿದೆ ಎನ್ನುತ್ತಾರೆ ಭಟ್
ಕುಟುಂಬದವರು.
*ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.