![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 12, 2017, 3:45 AM IST
ಉಡುಪಿ: ಮಣಿಪಾಲ ಟಿ.ಎ. ಪೈ ಮ್ಯಾನೇಜೆ¾ಂಟ್ ಇನ್‌ಸ್ಟಿಟ್ಯೂಟ್ ಮಲ್ಪೆ ಕಡಲ ಕಿನಾರೆಯಲ್ಲಿ ರವಿವಾರ ಆಯೋಜಿಸಿದ ಕ್ವಿಜ್ ಆನ್ ಬೀಚ್ ಸ್ಪರ್ಧೆಯಲ್ಲಿ ಸಿಂಗಾಪುರದ ನೇಶನಲ್ ವಿ.ವಿ., ಗುವಾಹಟಿ ವಿ.ವಿ.,ಮಣಿಪಾಲ ಎಂಐಟಿ ಮೊದಲ ಮೂರು ಬಹುಮಾನ ಪಡೆದಿವೆ.
ನಾಲ್ಕು ತಿಂಗಳಲ್ಲಿ ದೇಶದ ಎಂಟು ನಗರ, ದುಬೈ ಮತ್ತು ಸಿಂಗಾಪುರದಲ್ಲಿ ಆನ್‌ಲೈನ್‌ನಲ್ಲಿ ಅರ್ಹರಾದ ಸುಮಾರು 2,000 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇವುಗಳಲ್ಲಿ ಶ್ರೇಷ್ಠ 26 ತಂಡಗಳು ಮಣಿಪಾಲಕ್ಕೆ ಬಂದು ಅಂತಿಮ ಸ್ಪರ್ಧೆ ಎದುರಿಸಿದವು. ಇವುಗಳಲ್ಲಿ ರೂರ್ಕೆಲಾ ಎನ್‌ಐಟಿ, ಲಖನೌ ಐಐಎಂ, ಬೆಂಗಳೂರು ಕ್ರೈಸ್ಟ್ ವಿ.ವಿ., ಗುವಾಹಟಿ ವಿ.ವಿ., ಮಣಿಪಾಲದ ಎಂಐಟಿ, ಸೋನೆಪತ್‌ನ ಅಶೋಕಾ ವಿ.ವಿ., ಸಿಂಗಾಪುರದ ಎನ್‌ಯುಎಸ್, ಪಿಲಾನಿ ಬಿಟ್ಸ್ ದುಬೈ ಈ ಎಂಟು ತಂಡಗಳನ್ನು ಆಯ್ಕೆ ಮಾಡಲಾಯಿತು. ಇವುಗಳಲ್ಲಿ ಸಿಂಗಾಪುರದ ಶಿವಮ್ ಭಾರದ್ವಾಜ್, ರೋಹನ್ ನಾಯ್ಡು ಪ್ರಥಮ, ಗುವಾಹಟಿಯ ಜ್ಯೋತಿಷ್ ಕಾಲಿಟ, ಕುಮಾರ್ ಶಿವಮ್ ದ್ವಿತೀಯ, ಮಣಿಪಾಲ ಎಂಐಟಿಯ ಶೈಲೇಶ್ ಶ್ರೀರಾಮ್, ನಬಿಲ್ ಶಿವ ತೃತೀಯ ಸ್ಥಾನ ಪಡೆದರು. ಈ ಮೂರು ತಂಡಗಳಿಗೆ ಕ್ರಮವಾಗಿ 6 ಲ. ರೂ., 3 ಲ. ರೂ., 1 ಲ. ರೂ. ನಗದು ಬಹುಮಾನ ನೀಡಲಾಯಿತು.
ಟ್ಯಾಪ್ಮಿ ನಿರ್ದೇಶಕ ಡಾ| ಗುರುರಾಜ್ ಕಿದಿಯೂರು ವಿಶೇಷ ಉಪನ್ಯಾಸ ನೀಡಿದರು. ಜರ್ಮನಿ ಬರ್ಲಿನ್‌ನ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್‌ಮೆಂಟ್ ನಿರ್ದೇಶಕ ಡಾ| ಜರ್ಡ್ ಇಗೆಂಝರ್ ಬಹುಮಾನ ವಿತರಿಸಿದರು.
You seem to have an Ad Blocker on.
To continue reading, please turn it off or whitelist Udayavani.