ಕೇರಳಕ್ಕೆ ಸಾಗಿಸುತ್ತಿದ್ದ 50 ಎಮ್ಮೆ ರಕ್ಷಣೆ
Team Udayavani, Jan 12, 2017, 12:06 PM IST
ಕುದೂರು: ಸೋಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಮಂಗಲದಿಂದ ಕೇರಳದ ಕಸಾಯಿಖಾನೆಗೆ ಎರಡು ಕ್ಯಾಂಟರ್ನಲ್ಲಿ ಕೊಂಡೊಯ್ಯುತ್ತಿದ್ದ 50ಕ್ಕೂ ಹೆಚ್ಚು ಎಮ್ಮೆಗಳನ್ನು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮತ್ತು ಕುದೂರು ಪೊಲೀಸರು ಹಿಂಬಾಲಿಸಿ ಸೋಲೂರು ಚೆಕ್ಪೋಸ್ಟ್ ಬಳಿ ಅಡ್ಡಗಟ್ಟಿ ಎಮ್ಮೆಗಳನ್ನು ರಕ್ಷಿಸಿದ್ದಾರೆ.
ಎಮ್ಮೆಗಳನ್ನು ಅಡ್ಡಾದಿಡ್ಡಿ ತುಂಬಿ ಕಾಲುಗಳನ್ನು ಕಟ್ಟಿಹಾಕಿ ಅಕ್ರಮವಾಗಿ ಸಾಗಿಸುತ್ತಿತ್ತು. ಇದನ್ನು ಸೋಲೂರು ಚೆಕ್ಪೋಸ್ಟ್ ಮೂಲಕ ನಾಗಮಂಗಲದಿಂದ ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಪ್ರಾಣಿ ದಯಾ ಸಂಘ ಕಾರ್ಯಕರ್ತರು ತಿಳಿಸಿದ್ದಾರೆ. ಪ್ರಾಣಿ ದಯಾ ಸಂಘದ ಶಾಮ್ ಪ್ರತಿಕ್ರಿಯಿಸಿ, ಸರ್ಕಾರ ಕಸಾಯಿ ಖಾನೆಗೆ ಎಮ್ಮೆ ,ಹಸು, ಕರುಗಳನ್ನು ಮಾರಾಟ ಮಾಡುವುದನ್ನು ಮೊದಲು ತಡೆಯಬೇಕು ಗ್ರಾಮಗಳಲ್ಲಿಯೇ ಪಶುಸಂಗೋಪನೆಗೆ ಉತ್ತೇಜನ ನೀಡುವ ಕಾರ್ಯರೂಪಿಸಬೇಕು ಎಂದು ತಿಳಿಸಿದರು.
ಪ್ರಾಣಿ ದಯಾ ಸಂಘದ ಕವಿತಾ ಮಾತನಾಡಿ. ಕುಣಿಗಲ್, ಮಾಗಡಿ, ಕುದೂರು ಮೂಲಕ ತಮಿಳುನಾಡು ಮತ್ತು ಕೇರಳಕ್ಕೆ ಹಸು, ಎಮ್ಮೆಗಳನ್ನು ನಿತ್ಯ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ ಎಂದು ಹೇಳಿದರು. ಪೊಲೀಸರು ಮೈಸೂರಿನ ಗೋಶಾಲೆಗೆ ಕಳುಹಿಸಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.