ಅಮೆರಿಕದಲ್ಲಿ ಮತ್ತೆ ಮೂಡಿದ ಗೆಜ್ಜೆಯ ಹೆಜ್ಜೆ


Team Udayavani, Jan 13, 2017, 3:45 AM IST

11-KALA-1.jpg

ದೂರ ದೇಶ ಅಮೆರಿಕದಲ್ಲಿರುವ ಕನ್ನಡಿಗರು ಈ ಮಣ್ಣಿನ ಕಲೆಯನ್ನು ಕಲಿತು ಪ್ರದರ್ಶಿಸುವ ಪ್ರಯತ್ನ ಮಾಡುತ್ತಲೇ ಬಂದಿ¨ªಾರೆ. ಬಣ್ಣ ಹಚ್ಚಿ, ಯಕ್ಷಗಾನ ಆಹಾರ್ಯ ತೊಟ್ಟು ಹೆಜ್ಜೆ ಹಾಕಿ ಪ್ರೇಕ್ಷಕರಿಗೆ ಮುದಕೊಟ್ಟ ಇತ್ತೀಚಿನ ಸಾರ್ಥಕ ಶ್ರಮದ ನೋಟ ಇಲ್ಲಿದೆ. 

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 2016ರ ಕಾರ್ಯಕಾರಿ ಮತ್ತು ಮನರಂಜನಾ ಸಮಿತಿಗಳು ರಾಜ್ಯದ ಜಾನಪದ ಕಲೆಗಳ ಪರಿಣತರನ್ನು ಕರೆಸಿ ಅವರಿಂದ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ಕರ್ನಾಟಕದ ಜಾನಪದ ಕಲೆಗಳನ್ನು ಕಲಿಯಲು ಅವಕಾಶ ಕಲ್ಪಿಸಿದ್ದವು. ಈ ಯೋಜನೆಯ ಅಂಗವಾಗಿ ಯಕ್ಷಗಾನ ಕಲಾವಿದ ರಾದ ಉಡುಪಿಯ ಕೆ. ಜೆ. ಗಣೇಶ್‌ ಮತ್ತು ಎ. ಪಿ. ಪಾಠಕ್‌ ಅವರ ಸಾರಥ್ಯದಲ್ಲಿ ನಾಲ್ಕು ವಾರಗಳ ಯಕ್ಷಗಾನ ತರಬೇತಿ ಶಿಬಿರವನ್ನು ನ. 6ರಿಂದ ಡಿ.4, 2016ರವರೆಗೆ ನಡೆಸಲಾಯಿತು. ಯಕ್ಷಗಾನವನ್ನು ನೋಡುತ್ತಲೇ ಬೆಳೆದು ಬಂದವರಿಗೆ ಯಕ್ಷಗಾನದ ಕುರಿತು ಒಲವು ಸಹಜ. ಆದರೆ ಈ ಯಕ್ಷಗಾನ ಕಲೆಗೆ ಹೊಸಬರಾಗಿದ್ದೂ ಅದರ ವೇಷ ಭೂಷಣ ಮತ್ತು ನಡೆಗೆ ಮನಸೋತ ಅನೇಕ ಕನ್ನಡಿಗರು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು ಶಿಬಿರದ ವಿಶೇಷ. ಶಿಬಿರಾರ್ಥಿಗಳಿಗೆ ತಾಳದ ನಡೆಯನ್ನು ಕಲಿಸುವುದರ ಮೂಲಕ ಪ್ರಾರಂಭಿಸಿ, ಶಿಬಿರಾರ್ಥಿಗಳು ನಾಲ್ಕು ಪ್ರದರ್ಶನಗಳನ್ನು ನೀಡುವುದರೊಂದಿಗೆ ಯಕ್ಷಗಾನ ತರಬೇತಿ ಶಿಬಿರ ಮುಕ್ತಾಯವಾಯಿತು. ಕನ್ನಡ ಕೂಟದ ದೀಪೋತ್ಸವ ಕಾರ್ಯಕ್ರಮದಲ್ಲಿ ಜಾಂಬವತಿ ಕಲ್ಯಾಣ ಹಾಗೂ ಸ್ಯಾನ್‌ ಬೊÅನೋ ಸನಾತನ ಮಂದಿರದಲ್ಲಿ ಪಂಚವಟಿ ಹಾಗೂ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಯೂನಿವರ್ಸಿಟಿ ಬಕ್ಲಿìಯಲ್ಲಿ ಸೀತಾಪಹಾರ ಎಂಬ ಯಕ್ಷಗಾನ ಪ್ರದರ್ಶನಗಳನ್ನು ಕಲಾವಿದರು ನೀಡಿದರು. 

70ರ ದಶಕದಲ್ಲಿಯೇ ಕರ್ನಾಟಕದ ಕರಾವಳಿಗೆ ಬಂದು, ಯಕ್ಷಗಾನದಲ್ಲಿ ಸಂಶೋಧನೆ ನಡೆಸಿದ ಮಾರ್ಥಾ ಆ್ಯಸ್ಟನ್‌ ಬಕ್ಲಿìಯಲ್ಲಿ ಸೀತಾಪಹರಣವನ್ನು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿ ದರು. ಕೆ. ಜೆ. ಗಣೇಶ್‌ ಮತ್ತು ಎ. ಪಿ. ಪಾಠಕ್‌ ಅವರ ಹಿಮ್ಮೇಳವನ್ನು ಪ್ರಶಂಸಿಸಿದರು. 

ಡಿಸೆಂಬರ್‌ 4ರಂದು ಕೊನೆಯ ಪ್ರದರ್ಶನವಾಗಿ ಸನಾತನ ಧರ್ಮ ಕೇಂದ್ರದಲ್ಲಿ ಪಂಚವಟಿ ಮತ್ತು ರಾವಣ ವಧೆ ಎಂಬ ಪ್ರಸಂಗಗಳಿದ್ದವು. ಚೆಂಡೆ ವಾದಕರಾಗಿ ಕರ್ಕಿ ಆನಂದ ಹಾಸ್ಯಗಾರರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಕಿರೀಟವಿಟ್ಟಂತಾಯಿತು. ಈ ಕಾರ್ಯಕ್ರಮ ನೂರಾರು ಸಭಿಕರ ಪ್ರಶಂಸೆಗೆ ಪಾತ್ರವಾಯಿತು. ವಿ| ಗಜಾನನ ಜೋಷಿ ಅವರ ಇಚ್ಛೆಯಂತೆ ಕುಮಾರಸ್ವಾಮಿ ಜೋಷಿಯವರು ಯಕ್ಷಗಾನ ತರಬೇತಿ ನೀಡಿದ ಕೆ. ಜೆ. ಗಣೇಶರಿಗೆ “ಯಕ್ಷಕಲಾ ಭಾಸ್ಕರ’ ಹಾಗೂ ಎ. ಪಿ. ಪಾಠಕರಿಗೆ “ನಾದ ಶಶಾಂಕ’ ಎಂಬ ಬಿರುದುಗಳನ್ನು ನೀಡಿ ಸಮ್ಮಾನಿಸಿದರು. ಬಕ್ಲಿì ವಿವಿಯಲ್ಲಿ ಪ್ರದರ್ಶನವನ್ನು ವಿದ್ವಾಂಸ ಪ್ರೊ| ರಾಬರ್ಟ್‌ ಗೋಲ್ಡ್‌ಮನ್‌ ಆಯೋಜಿಸಿದ್ದರು. ಅತಿಥಿ ಕಲಾವಿದರಾಗಿ ಆಗಮಿಸಿ ಜಾಂಬವಂತನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ ರಾಜೇಂದ್ರ ಕೆದ್ಲಾಯ ಮತ್ತು ಬಕ್ಲಿìಯಲ್ಲಿ ರಾವಣನ ಪಾತ್ರವನ್ನು ಅತಿ ಉತ್ತಮ ರೀತಿಯಲ್ಲಿ ನಿರ್ವಹಿಸಿದ ಆದಿತ್ಯ ಸೀತಾರಾಂ ಪ್ರಶಂಸೆಗೆ ಪಾತ್ರರಾದರು. ಅಮೆರಿಕದಲ್ಲಿ ಮತ್ತೂಮ್ಮೆ ಯಕ್ಷಪತಾಕೆ ಹಾರಿಸಿದ ಕೆ. ಜೆ. ಗಣೇಶ್‌ ಮತ್ತು ಎ. ಪಿ. ಪಾಠಕ್‌ ಅವರಿಗೆ ಅಭಿನಂದನೆಗಳು. 

ಹೊರನಾಡಿನಲ್ಲಿದ್ದು ತಮ್ಮ ಕಲೆಯ ಬೇರನ್ನು ಮರೆಯದೆ ಚಿಗುರುತ್ತಿರುವ ಕ್ಯಾಲಿಫೋರ್ನಿಯ ಯಕ್ಷಗಾನ ಕಲಾಸಕ್ತರ ತುಡಿತವನ್ನು ಮೆಚ್ಚಲೇ ಬೇಕು. ಕಲೆ-ಕಲಾವಿದರ ಕ್ಷೇಮಚಿಂತನೆಗೆ ತೊಡಗಿಸಿಕೊಂಡ ಉಡುಪಿ ಯಕ್ಷಗಾನ ಕಲಾರಂಗವನ್ನು ಸದಾ ಪ್ರೋತ್ಸಾಹಿ ಸುವ ಈ ತಂಡ ತನ್ನ ಗಳಿಕೆಯ ಒಂದು ಮೊತ್ತವನ್ನು ಸಂಸ್ಥೆಗೆ ನೀಡುತ್ತಾ ಬಂದಿರುವುದು ಕಲೆಯ ಕುರಿತ ಅವರ ಕಾಳಜಿಯ ದ್ಯೋತಕವಾಗಿದೆ.

ವಸುಧಾ ಹೆಗಡೆ

ಟಾಪ್ ನ್ಯೂಸ್

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

naa ninna bidalaare movie releasing on Nov 29

Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್‌ ಬಂತು: ನ.29ಕ್ಕೆ ಸಿನಿಮಾ ತೆರೆಗೆ

police-ban

Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.