ಸಮೂಹ ರಂಗಕಲ್ಪನೆಯಲ್ಲಿ ಮೂಡಿಬಂದ ನೃತ್ಯ ಚೌಕಟ್ಟಿನ ಮಯೂರ ಧ್ವಜ


Team Udayavani, Jan 13, 2017, 3:45 AM IST

11-KALA-4.jpg

ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲೊಂದು ವಿಶಿಷ್ಟ ರಂಗ ಪ್ರಯೋಗ ನೆರೆದ ಶ್ರೋತೃವರ್ಗಕ್ಕೆ ವಿಶೇಷಾನುಭವ ನೀಡಿತು. ಕಳೆದ ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಭಿನ್ನ ರಂಗ ಪ್ರಯೋಗಗಳ ಮೂಲಕ ಉಡುಪಿಯ ಸಾಂಸ್ಕೃತಿಕ ವಲಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಸಮೂಹವು ಉಡುಪಿ ಅಮ್ಮುಂಜೆಯ ಗುರು ವಿ| ಭವಾನಿ ಶಂಕರ್‌ ಅವರ ಶ್ರೀ ಭ್ರಾಮರಿ ನಾಟ್ಯಾಲಯದ ಸಹಯೋಗದೊಂದಿಗೆ ಮಯೂರ ಧ್ವಜ ನೃತ್ಯ ರೂಪಕವನ್ನು ಅನಾವರಣಗೊಳಿಸಿತ್ತು. ಜೈಮಿನಿ ಭಾರತವೆಂದೇ ಪ್ರಚಲಿತದಲ್ಲಿರುವ ಕವಿ ಲಕ್ಷ್ಮೀಶ ರಚಿಸಿದ ಮೂಲ ಮಹಾಭಾರತ ಷಟ³ದಿ ಕಾವ್ಯದಿಂದ ಕಥಾವಸ್ತುವನ್ನು ಆರಿಸಿಕೊಂಡ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯರು, ತನ್ನ ಪ್ರಯೋಗದ ಮೊದಲ ಪ್ರಯತ್ನದಲ್ಲೇ ಸಾರ್ಥಕ್ಯವನ್ನು ಕಂಡರು ಎಂದರೆ ಅತಿಶಯೋಕ್ತಿಯಾಗಲಾರದು.

ಯಕ್ಷಗಾನದಲ್ಲಿ ಮಯೂರ ಧ್ವಜ ಆಖ್ಯಾನವನ್ನು ಆಸ್ವಾದಿಸಿ, ಅದಕ್ಕೆ ಒಗ್ಗಿಕೊಂಡ ಪ್ರೇಕ್ಷಕವರ್ಗವನ್ನು ಅದರಿಂದಾಚೆಗೆ ಸೆಳೆದು ಶಾಸ್ತ್ರೀಯ ನೃತ್ಯ ಚೌಕಟ್ಟಿನ ಭಾವಪೂರ್ಣ ಅಭಿವ್ಯಕ್ತಿಯ ಕಥಾನಿರೂಪಣೆಯ ನೃತ್ಯರೂಪಕದತ್ತ ಕರೆತರುವುದು ಸಾಹಸವೇ ಸರಿ. ಅಂತಹ ಸಾಹಸದಲ್ಲಿ ರಂಗ ನಿರ್ದೇಶಕರು, ನೃತ್ಯ ನಿರ್ದೇಶಕರು, ಸಾಮೂಹಿಕವಾಗಿ ಎಲ್ಲ ಕಲಾವಿದರು ಮೊದಲ ಪ್ರಯತ್ನದಲ್ಲೇ  ಗರಿಷ್ಠ ಸಾಧನೆ ಮಾಡಿದ್ದಾರೆ. 

ಮೂಲತಃ ಮನಮುಟ್ಟುವಂತೆ ಸಾಗುವ ಕಥಾನಕವನ್ನು ರಂಗನಿರ್ದೇಶಕರು ಮೂಲ ಅಂತಃಸತ್ವಕ್ಕೆ ಧಕ್ಕೆಯಾಗದಂತೆ ರಂಗ ಪ್ರಯೋಗಕ್ಕಾಗಿಯೇ ಸಿದ್ಧಪಡಿಸಿದ ರಂಗ ಕೃತಿ ಮತ್ತು ರಂಗಪ್ರಸ್ತುತಿಯಿಂದ ಇನ್ನಷ್ಟು ಪರಿಣಾಮಕಾರಿಯಾಗಿಸಿದ್ದಾರೆ. ಕಥೆಯಲ್ಲಿ ಬರುವ ಪುರಾಣದ ರೂಪಕಗಳಾದ ಸೈನಿಕರು, ಕುದುರೆಗಳನ್ನು ನೃತ್ಯಕಲಾವಿದರು ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದು ರೂಪಕದ ಹೆಚ್ಚುಗಾರಿಕೆ. ಸೂತ್ರಧಾರನಾಗಿ ಕಥೆಯ ಹಂದರವನ್ನು ಹೆಣೆಯುತ್ತಾ, ಕಥಾನಾಯಕನಾಗಿಯೂ ಅಭಿನಯದಲ್ಲಿ ಸ್ವತಃ ಮಯೂರಧ್ವಜನೇ ತೋರಿಬರುವುದು ರೂಪಕದ ವಿಶೇಷತೆ. 

ಬಂಧುಹತ್ಯಾ ದೋಷದ ಪ್ರಾಯಶ್ಚಿತ್ತಕ್ಕಾಗಿ ಪಾಂಡವರಿಂದ ಅಶ್ವಮೇಧ ಯಾಗದ ಸಂಕಲ್ಪ, ದಿಗ್ವಿಜಯಕ್ಕೆ ಹೊರಟ ಪಾಂಡವ ಸೈನ್ಯ, ಮಣಿಪುರದ ರಾಜಪುತ್ರ ತಾಮ್ರಧ್ವಜನ ನೇತೃತ್ವದಲ್ಲಿ ಹೊರಟ ಮಯೂರಧ್ವಜನ ಎಂಟನೆಯ ಅಶ್ವಮೇಧ ಯಾಗದ ಕುದುರೆ, ಅದಕ್ಕೆ ಎದುರಾಗಿ ಬಂದ ಪಾಂಡವರ ಅಶ್ವಮೇಧದ ಕುದುರೆ,  ರಾಜಪುತ್ರನ ವೀರಾವೇಶದ ಪ್ರತಿಭಟನೆ, ಪಾಂಡವರ ಕುದುರೆಯನ್ನು ಹಿಡಿದು ತಂದು ತಂದೆ ಮಯೂರಧ್ವಜನ ಸಮ್ಮುಖದಲ್ಲಿ ನಿಲ್ಲಿಸಿದ ಪರಿ, ಬಂಧನಕ್ಕೊಳಗಾದ ಕೃಷ್ಣಾರ್ಜುನರು  ತಪ್ಪಿಸಿಕೊಂಡು ಮಾಯಾವೇಷದಿಂದ ಬ್ರಾಹ್ಮಣರಾಗಿ ಭಕ್ತ ಮಯೂರಧ್ವಜನಲ್ಲಿ ತಮ್ಮ ಸಂಕಷ್ಟಗಳನ್ನು ನಿವೇದಿಸಿಕೊಳ್ಳುವುದು, ಸಿಂಹದ ಬಾಯಿಯಿಂದ ಮಗನ ರಕ್ಷಣೆಗೆ ದೊರೆಯಲ್ಲಿ ಮೊರೆ, ಮಗನ ವಿಮೋಚನೆಗೆ ಮಯೂರ ಧ್ವಜನ ಅರ್ಧ ದೇಹಕ್ಕಾಗಿ ಬೇಡಿಕೆ,  ಮಾರುವೇಷದ ಭಗವಂತನಿಂದ ಮಯೂರಧ್ವಜನ ದೇಹ ಛೇದನದ ಪರೀಕ್ಷೆ, ಮಯೂರಧ್ವಜನ ಭಕ್ತಿಯ ಪರಾಕಾಷ್ಠೆಗೆ ಮಾರುಹೋದ ಶ್ರೀಕೃಷ್ಣ, ಶ್ರೀಕೃಷ್ಣಾನುಗ್ರಹ ಈ ಎಲ್ಲ ಭಾಗಗಳನ್ನು ನೃತ್ಯ ವಿಸ್ತಾರದಲ್ಲಿ ಮನೋಜ್ಞವಾಗಿ ಪ್ರಸ್ತುತಪಡಿಸಿದ ರೀತಿ ಶ್ರೋತೃವರ್ಗವನ್ನು ಮಂತ್ರಮುಗ್ಧ ಗೊಳಿಸಿತ್ತು. ಸವಿಗೆ ಸವಿ ಸೇರಿದಂತೆ, ಭಕ್ತಿಗೆ ಮಯೂರ ಧ್ವಜನ ಭಕ್ತಿಯೂ ಸೇರುವುದನ್ನು ಅಭಿವ್ಯಕ್ತಪಡಿಸಿದ ರೀತಿ ಸೊಗಸಾಗಿತ್ತು. ನೃತ್ಯದ ಚೌಕಟ್ಟಿನೊಳಗೆ ಸಾಗಿ ಬಂದ ರೂಪಕದಲ್ಲಿ ಕಥೆಯ ಅಂತರಾಳವನ್ನು ತಳಸ್ಪರ್ಶಿಯಾಗಿ ಚಿತ್ರಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಉದ್ಯಾವರ ಮಾಧವ ಆಚಾರ್ಯರು ಹೊರಹೊಮ್ಮಿಸಿದ ಭಾವಪೂರ್ಣ ಮಾತುಗಳು, ಭಾವುಕವಾದ ಉದ್ಘೋಷಗಳು ರೂಪಕವನ್ನು ಅರ್ಥೈಸಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದವು. 

ಮಯೂರಧ್ವಜನಾಗಿ ಗುರು ವಿ| ಭವಾನಿ ಶಂಕರ ಅವರ ಪ್ರಬುದ್ಧ ರಸಾಭಿವ್ಯಕ್ತಿ ರೂಪಕದ ಘನತೆಯನ್ನು ಹೆಚ್ಚಿಸಿತ್ತು. ಅವರ ಭಾÅಮರಿ ನಾಟ್ಯಾಲಯ ವಿದ್ಯಾರ್ಥಿಗಳ ಸಮೂಹ ಒಡನಾಟದ ಪಾತ್ರ ನಿರ್ವಹಣೆ ಪೂರಕವಾಗಿತ್ತು. ನೃತ್ಯ ನಿರ್ದೇಶಕಿ, ಮಂಗಳೂರಿನ ಗುರು ನಾದನೃತ್ಯದ ವಿ| ಭ್ರಮರಿ ಶಿವಪ್ರಕಾಶ್‌ ಅವರ ಖಚಿತವಾದ ನಟುವಾಂಗ, ಸಮರ್ಥ ನೃತ್ಯ ನಿರ್ದೇಶನಕ್ಕೆ ರಂಗ ಚಲನೆಯ ಲವಲವಿಕೆಯು ಸಾಕ್ಷಿ ಯಾಗಿತ್ತು. ವಿ| ವಿನುತಾ ಆಚಾರ್ಯ ಹಾಡುಗಾರಿಕೆಯಿಂದ ವಿಶೇಷ ಕಳೆ ನೀಡಿದರು. ಮೃದಂಗ ವಾದನದಲ್ಲಿ ವಿ| ದೇವೇಶ ಭಟ್‌, ತಬಲಾ ಸಾಥ್‌ನಲ್ಲಿ ವಿ| ಮಾಧವ ಆಚಾರ್ಯ, ಪಿಟೀಲಿನಲ್ಲಿ ವಿ| ಶರ್ಮಿಳಾ ರಾವ್‌, ಕೊಳಲು ವಾದನದಲ್ಲಿ ಮಾ| ಚೇತನ್‌ ಮತ್ತು ವಸ್ತ್ರಾಲಂಕಾರದಲ್ಲಿ ಬಾಷಾ ಆರ್ಟ್ಸ್ ಅವರ ಪರಿಪೂರ್ಣ ಸಹಕಾರ ಒಟ್ಟಂದದಲ್ಲಿ ರೂಪಕದ ಪ್ರಸ್ತುತಿಯ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸಿತ್ತು.

ಸುಬ್ರಹ್ಮಣ್ಯ ಬಾಸ್ರಿ ಕೆ. ಎಸ್‌.

ಟಾಪ್ ನ್ಯೂಸ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.