ಹೈಕೋರ್ಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಡ್ಜ್ ಹುದ್ದೆಗಳು ಖಾಲಿ
Team Udayavani, Jan 14, 2017, 9:37 AM IST
ಹೊಸದಿಲ್ಲಿ: ನ್ಯಾಯಾಧೀಶರ ನೇಮಕಾತಿ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವೆ ತಿಕ್ಕಾಟಗಳು ನಡೆದ ಬೆನ್ನಲ್ಲೇ, ನ್ಯಾಯಾಲಯಗಳ ದುಃಸ್ಥಿತಿ ಬಿಚ್ಚಿಡುವ ವರದಿಯೊಂದನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಅದರ ಪ್ರಕಾರ, ದೇಶದ 24 ಹೈಕೋರ್ಟ್‌ಗಳಲ್ಲಿ ಶೇ.44ರಷ್ಟು ನ್ಯಾಯಾಧೀಶರು ಮಾತ್ರವೇ ಕಾರ್ಯ ನಿರ್ವಹಿಸಿದ್ದಾರೆ. ಬರೋಬ್ಬರಿ 40.54 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ.
“ಭಾರತೀಯ ನ್ಯಾಯಾಂಗ ವಾರ್ಷಿಕ ವರದಿ 2015-16’ರಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ. ಕಳೆದ ವರ್ಷ ಜೂ.30ರ ಅಂಕಿ-ಅಂಶಗಳ ಪ್ರಕಾರ, ಹೈಕೋರ್ಟ್ ಗಳಲ್ಲಿ ಒಟ್ಟು 1079 ನ್ಯಾಯಾಧೀಶರ ಹುದ್ದೆಗಳು ಇದ್ದು, ಆ ಪೈಕಿ 608 ಜಡ್ಜ್ಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ 62 ಜಡ್ಜ್ ಹುದ್ದೆಗಳು ಮಂಜೂರಾಗಿದ್ದರೂ, 27 ನ್ಯಾಯಾ ಧೀಶರು ಮಾತ್ರ ಕಾರ್ಯನಿರ್ವಹಿಸುತ್ತಿ ದ್ದಾರೆ. 2,56,509 ಪ್ರಕರಣಗಳು ಬಾಕಿ ಉಳಿ ದಿವೆ. ದೇಶದಲ್ಲೇ ಅತಿ ಹೆಚ್ಚು 9.24 ಲಕ್ಷ ಪ್ರಕರಣಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಕಾಯುತ್ತಿವೆ. ಈ ಪೈಕಿ 3 ಲಕ್ಷ ಪ್ರಕರಣಗಳು 10 ವರ್ಷಕ್ಕಿಂತ ಹಳೆಯದಾಗಿವೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.