ಜಾಹೀರಾತು ದಂಡ ವಸೂಲಿ ಮಾರ್ಗಸೂಚಿ ಪ್ರಶ್ನಿಸಿದ ಅರ್ಜಿ ವಜಾ
Team Udayavani, Jan 14, 2017, 11:52 AM IST
ಬೆಂಗಳೂರು: ನಿಯಮ ಉಲ್ಲಂಘಿಸಿ ಜಾಹೀರಾತು ಹಾಗೂ ಹೋರ್ಡಿಂಗ್ಗಳ ಅಳಡಿಸುವುದನ್ನು ನಿಯಂತ್ರಿಸಲು ಮತ್ತು ನಿಯಮ ಬಾಹಿರವಾಗಿ ಜಾಹೀರಾತು ಅಳವಡಿಸುವವರಿಂದ ದಂಡ ವಸೂಲಾತಿಗೆ ನಿರ್ದಿಷ್ಟ ಮಾರ್ಗಸೂಚಿ ರಚಿಸುವಂತೆ ಬಿಬಿಎಂಪಿಗೆ ಏಕಸದಸ್ಯ ಪೀಠ ಮಾಡಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ವಜಾಗೊಳಿಸಿದೆ.
ಶ್ಯಾಮ್ ಶೈನ್ ಔಟ್ಡೋರ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ.ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿತು. ನಿಯಮ ಉಲ್ಲಂಘಿಸಿ ಜಾಹೀರಾತು ಹಾಗೂ ಹೋರ್ಡಿಂಗ್ಗಳ ಅಳಡಿಕೆ ಮಾಡಿದವರಿಂದ ಜಾಹೀರಾತು ತೆರಿಗೆ ಮತ್ತು ದಂಡ ಸಂಗ್ರಹಿಸುವ ಸಂಬಂಧ ನಿರ್ದಿಷ್ಟ ಮಾರ್ಗಸೂಚಿ ರಚಿಸುವಂತೆ ಹೈಕೋರ್ಟ್ ಡಿ.5ರಂದು ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿತ್ತು.
ಅದರಂತೆ ವೇಳೆ ದಂಡ ವಿಧಿಸಿ ಮಾರ್ಗಸೂಚಿ ರಚಿಸಿ, ನಗರದಲ್ಲಿ ಅಕ್ರಮವಾಗಿ ಜಾಹೀರಾತು ಹಾಗೂ ಹೋರ್ಡಿಂಗ್ ಅಳವಡಿಕೆ ಸಂಬಂಧಿಸಿದಂತೆ 5,507 ಡಿಮಾಂಡ್ ನೋಟಿಸ್ ನೀಡಿ, 33.19 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸಲು ಆಯುಕ್ತರು ಉದ್ದೇಶಿಸಿದ್ದರು. ಅಲ್ಲದೆ , ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ 2,439 ಹೋರ್ಡಿಂಗ್ಗಳ ಪೈಕಿ 1,841 ಹೋರ್ಡಿಂಗ್ಗಳನ್ನು ತೆರವುಗೊಳಿಸಿ, ಒಟ್ಟು 24.98 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು.
ಇದರಿಂದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಶ್ಯಾಮ್ ಶೈನ್ ಔಟ್ಡೋರ್ ಕಂಪನಿ, ಕರ್ನಾಟಕ ನಗರ ಪೌರ ನಿಗಮ ಕಾಯ್ದೆ-1976ರ ಅನ್ವಯ ಜಾಹೀರಾತು ತೆರಿಗೆಗೆ ದಂಡ ಅಥವಾ ಬಡ್ಡಿ ವಿಧಿಸಲು ಅವಕಾಶವಿಲ್ಲ ಎಂದು ದೂರಿತ್ತು. ಆದರೆ, ಈ ಕುರಿತು ಏಕಸದಸ್ಯ ಪೀಠಕ್ಕೆ ಮೊರೆ ಹೋಗುವಂತೆ ಸೂಚಿಸಿದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.