ರೋಜರ್‌ ಫೆಡರರ್‌ ಮರಳಿ ಅಂಕಣದಲ್ಲಿ: ಫೀನಿಕ್ಸ್‌ನಂತೆ ಎದ್ದು ಬರ್ತಾರಾ?


Team Udayavani, Jan 14, 2017, 2:26 PM IST

555.jpg

ರಫೆಲ್‌ ನಡಾಲ್‌ ವೃತ್ತಿಪರ ಟೆನಿಸ್‌ನಲ್ಲಿ ಆವರಿಸಿಕೊಳ್ಳುವ ಮುನ್ನ ಸ್ವಿರ್ಜರ್‌ಲ್ಯಾಂಡ್‌ನ‌ ರೋಜರ್‌ ಫೆಡರರ್‌ ಆಟ ಹತ್ತು ಹಲವು ದಂತಕತೆಗಳನ್ನು ಸೃಷ್ಟಿಸಿತ್ತು. ಈಗ ರಜನೀಕಾಂತ್‌ ಕುರಿತು ಫ್ಯಾಂಟಸಿ ಕತೆ ಹರಿಬಿಟ್ಟಂತೆ ಆಗ ಫೆಡರರ್‌ ಆಟದ ಬಗ್ಗೆ ಪುಂಖಾನುಪುಂಖವಾಗಿ ಕತೆಗಳು ಅನುರಣಿಸುತ್ತಿದ್ದವು. ಸುಮ್ಮನೆ ಒಂದೆರಡು ಉದಾಹರಣೆಗಳನ್ನು ನೋಡಿ….

ಟೆನಿಸ್‌ ಬೇರೆ, ಫೆಡರರ್‌ ಬೇರೆ!
ಇವಾನ್‌ ಲುಬೆjಸಿಕ್‌ರ ತಲೆ ಬಿಸಿಯಾಗಿತ್ತು. ಆಗಷ್ಟೇ ನಾಸಾªಕ್‌-100 ಓಪನ್‌ ಟೂರ್ನಿಯಲ್ಲಿ ರೋಜರ್‌ ಫೆಡರರ್‌ಗೆ 7-6, 7-6, 7-6ರಲ್ಲಿ ಸೋಲು ಕಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಪತ್ರಕರ್ತರು ರ್ಯಾಕೆಟ್‌ನಿಂದ ಚೆಂಡು ಬಾರಿಸುವಂತೆ ರಪ ರಪ ಪ್ರಶ್ನೆ ಕೇಳುತ್ತಿದ್ದರು.

ಲುಬೆjಸಿಕ್‌ ಅಪರೂಪಕ್ಕೆ ತಣ್ಣಗಿದ್ದರು. ತುಂಬಾ ಸ್ಪಷ್ಟ ಪದಗಳಲ್ಲಿ ವಿವರಿಸುತ್ತಿದ್ದರು, “ನೋಡಿ, ಇಲ್ಲಿ ನಾವೆಲ್ಲರೂ ಆಡುವುದು ಒಂದೇ ಆಟ, ಅದು ಟೆನಿಸ್‌. ಹಾಗಿರುವಾಗ ನೀವು ನಮ್ಮಲ್ಲಿ ವ್ಯತ್ಯಾಸ ಏನು ಹುಡುಕುತ್ತೀರಿ? ಅಷ್ಟೇಕೆ, ನಾವೆಲ್ಲ ಟೆನಿಸ್‌ ಆಟಗಾರರು ಇನ್ನೂ ಒಂದು ಸಾಮಾನ್ಯ ಆಂಶವನ್ನು ಹೊಂದಿದ್ದೇವೆ. ಏನು ಗೊತ್ತೇ? ಸಿಂಪಲ್‌, ನಾವೆಲ್ಲರೂ ರೋಜರ್‌ ಫೆಡರರ್‌ ಎದುರು ಸೋಲುತ್ತೇವೆ!’

ಫೆಡರರ್‌ರನ್ನು ಸೋಲಿಸಬಹುದು!
ಇದೊಂದು ಹಳೆ ಕತೆ. ರೋಜರ್‌ ಫೆಡರರ್‌ ಬರೋಬ್ಬರಿ 36 ಹುಲ್ಲಿನಂಕಣದ ಪಂದ್ಯಗಳಲ್ಲಿ ಸತತವಾಗಿ ಗೆದ್ದಿದ್ದರು. ಇನ್ನೊಂದು ರೀತಿ ಹೇಳುವುದಾದರೆ, 2003ರಿಂದ ಈ ಅಂಕಣದಲ್ಲಿ ಸೋಲು ಕಂಡಿರಲಿಲ್ಲ. ಉಳಿದ ಕಡೆಯೂ ಅವರ ಆಟ ಅದ್ಭುತವಾಗಿತ್ತು. ಫ್ರೆಂಚ್‌, ಆಸ್ಟ್ರೇಲಿಯನ್‌ನ ಗ್ರಾನ್‌ಸ್ಲಾಂ ಹಿನ್ನಡೆಯ ಹೊರತೂ ಅವರು ವಿಶ್ವದ ನಂ.1 ಎನ್ನಿಸಿದ್ದರು. ಈ ಸಂದರ್ಭದಲ್ಲಿ ವಿಂಬಲ್ಡನ್‌ ಫೈನಲ್‌ನಲ್ಲಿ ರೋಜರ್‌ರಿಗೆ ಸೋತ ಅಮೇರಿಕದ ಆ್ಯಂಡಿ ರಾಡಿಕ್‌ ಮಾತ್ರ ಫೆಡರರ್‌ನ್ನು ಮಣಿಸುವ ಸರಳ ಉಪಾಯವನ್ನು ಬಯಲುಗೊಳಿಸಿದರು. ಏನು ಗೊತ್ತೇ? ಫೆಡರರ್‌ರ ಎದುರು ಟೆನಿಸ್‌ ಬಿಟ್ಟು ಬೇರೆ ಆಟದ ಸ್ಪರ್ಧೆಗಿಳಿಯುವುದು! ಇವತ್ತು 35 ವರ್ಷ ರೋಜರ್‌ ಫೆಡರರ್‌ 17 ಗ್ರಾನ್‌ಸ್ಲಾಂ ಪ್ರಶಸ್ತಿಗಳ ಜೊತೆ ಈ ಕ್ಷೇತ್ರದ ಹತ್ತು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2012ರ ನಂತರ ಅವರಿಗೆ ಗ್ರಾನ್‌ಸ್ಲಾಂ ಗೆಲ್ಲಲಾಗಿಲ್ಲ. ಅಷ್ಟಕ್ಕೇ ಕಳಪೆ ಫಾರಂನಲ್ಲಿದ್ದಾರೆಯೇ ಎಂದು ಹೇಳುವುದೂ ಕಷ್ಟ. ಪುಣ್ಯಾತ್ಮ 2014, 15ರಲ್ಲಿ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ್ದರು. 2015ರಲ್ಲಿ ಯುಎಸ್‌ ಓಪನ್‌ನಲ್ಲೂ ಅವರೇ ರನ್ನರ್‌ ಅಪ್‌. ಅದು ಬಿಡಿ, 17 ಗ್ರಾನ್‌ಸ್ಲಾಂ ಹೊರತಾಗಿ ಸತತ 10 ಗ್ರಾನ್‌ಸ್ಲಾಂ ಫೈನಲ್‌ ಆಡಿರುವುದು, 40 ಸೆಮಿಫೈನಲ್‌ ಪ್ರದರ್ಶನ, 8ರ ಘಟ್ಟವನ್ನು 48 ಬಾರಿ ಮುಟ್ಟಿರುವುದು ಉಳಿದವರಿಗೆ ಮೌಂಟ್‌ ಎವರೆಸ್ಟ್‌! 302 ವಾರಗಳ ಕಾಲ ಅರ್ಥಾತ್‌ ಸರಿಸುಮಾರು ಆರು ವರ್ಷ ಕಾಲ ಅಗ್ರಕ್ರಮಾಂಕದಲ್ಲಿ ವಿರಾಜಮಾನವಾಗಿದ್ದದು, ಅದರಲ್ಲೂ 237 ವಾರ ಅಲಿಯಾಸ್‌ ಹತ್ತಿರ 4 ವಷ‌ì ಅಗ್ರಪಟ್ಟದಲ್ಲಿ ನಿರಂತರವಾಗಿ ವಿಜೃಂಭಿಸಿದ್ದು ಸಾಮಾನ್ಯ ಮಾತಲ್ಲ. ಮೂರು ಬಾರಿ ವರ್ಷದ ಎಲ್ಲಾ ನಾಲ್ಕು ಗ್ರಾನ್‌ ಸ್ಲಾಂಗಳ ಫೈನಲ್‌ನಲ್ಲಿ ಆಡಿದ್ದು, ಅಂತಿಂತ ಸಾಧನೆಯಲ್ಲ. ಫೆಡರರ್‌ ಕುರಿತಾಗಿ ಆರೋಗ್ಯಕರ ಪ್ರತಿಕ್ರಿಯೆಗಳು ವ್ಯಕ್ತವಾದುದು ಆ ಕಾಲದಲ್ಲಿಯೇ. 

ಸೋಲುವ ಫೆಡರರ್‌ ಕಣ್ಣಿಗೆ ಆಗಿಬರದು!
2014ರ ನಂತರ ಫೆಡರರ್‌ರ ಫಾರಂ ಬಿದ್ದುಹೋಗಿದೆ. ಮುಖ್ಯವಾಗಿ, ವರ್ಷಗಳ ಉರುಳುವಿಕೆಯ ನಂತರ ಪ್ರತಿಭೆಗೆ ಆತನ ದೇಹವೇ ಮಾತು ಕೇಳುವುದಿಲ್ಲ. ಸಚಿನ್‌ ತೆಂಡುಲ್ಕರ್‌ ಅವರನ್ನೇ ಉದಾಹರಣೆಯನ್ನಾಗಿಟ್ಟುಕೊಳ್ಳಿ ಅಥವಾ ವೀರೇಂದ್ರ ಸೆಹ್ವಾಗ್‌ ಹೆಸರು ತೆಗೆದುಕೊಳ್ಳಿ. ಒಮ್ಮೆಗೆ ಮೊದಲ ಸುತ್ತಿನಿಂದಲೇ ಫೆಡರರ್‌ ಸೋಲುವುದನ್ನು ನಾವು ಕಾಣದಿದ್ದರೂ ಕ್ವಾರ್ಟರ್‌ ಫೈನಲ್‌ ಪ್ರದರ್ಶನ, ಅಲ್ಲೊಂದು ಇಲ್ಲೊಂದು ಸೆಮಿಫೈನಲ್‌ ಪ್ರದರ್ಶನ ಈ ಚಾಂಪಿಯನ್‌ಗೆ ಸರಿ ಹೋಗದ್ದು. ಎಷ್ಟೋ ಬಾರಿ ಫೆಡರರ್‌ರ ಅಭಿಮಾನಿಗಳಿಗೇ. ಈ ಅಪ್ರತಿಮ ಕಾಲದ ತಾಳ್ಮೆಯನ್ನು ಪರೀಕ್ಷಿಸದೆ ನಿವೃತ್ತಿ ಘೋಷಿಸಬಾರದೇ ಎಂದುಕೊಂಡಿದ್ದು ಸುಳ್ಳಲ್ಲ.

ಅಗ್ರಕ್ರಮಾಂಕದ ಮಾತು ಆಕಡೆಯಿರಲಿ, ಫೆಡರರ್‌ಇವತ್ತಿನ ಎಟಿಪಿ ರ್ಯಾಕಿಂಗ್‌ ಮೊದಲ 15ರಲ್ಲೂ ಇಲ್ಲ. ಗ್ರಾನ್‌ಸ್ಲಾಂ ಭಾಷೆಯಲ್ಲಿ ಈತ ಶ್ರೇಯಾಂಕಿತ ಆಟಗಾರ ಅಲ್ಲ. ಟಾಪ್‌ 16 ಆಟಗಾರರನ್ನು ಮಾತ್ರ ಸೀಡೆಡ್‌ ಎಂದು ಪರಿಗಣಿಸುತ್ತಾರೆ ಮತ್ತು ಅವರಿಗೆ ಒಂದು ಮಟ್ಟಿನ ಅನುಕೂಲಕರ ಡ್ರಾವನ್ನು ನಿಗದಿಪಡಿಸುತ್ತಾರೆ. ರೋಜರ್‌ ಫೆಡರರ್‌ ಈಗ ಎಟಿಪಿ 17ನೇ ಕ್ರಮಾಂಕ ಹೊಂದಿದ್ದಾರೆ. 2016ರ ದ್ವಿತೀಯಾರ್ಧದಲ್ಲಿ ಫೆಡರರ್‌ ಗಾಯಾಳುವಾದುದರಿಂದ ರ್ಯಾಕೆಟ್‌ ಕೂಡ ಹಿಡಿದಿರಲಿಲ್ಲ.

ಊಹೂn, ಈ ಅಸಲಿ ಕ್ರೀಡಾಳುಗಳ ಸಮಸ್ಯೆಯೇ ಇದು. ಅವರು ಸುಲಭಕ್ಕೆ ಅಂಕಣ ಬಿಟ್ಟು ತೆರಳರು. ಕಪಿಲ್‌ದೇವ್‌ ಹಾಗೆ ಮಾಡಿದ್ದರು. ಮಾರ್ಟಿನಾ ನವ್ರಾಟಿಲೋವಾ ಮಾಡಿದ್ದೂ ಅದೇ. ಸಚಿನ್‌ ಮಾಡಿದ್ದಿನ್ನೇನು? ಮೊನ್ನೆ ರೋಜರ್‌ ಫೆಡರರ್‌ ಎಡಮೊಣಕಾಲಿನ ಸರ್ಜರಿ ಮಾಡಿಸಿಕೊಂಡು ಫಿಟ್‌ ಆಗಿ ಮರಳಿದವರು ಹೇಳಿದ್ದು, ಇನ್ನೂ ನನ್ನಲ್ಲಿ ಒಂದು, ಎರಡು ಅಥವಾ ಮೂರೇ ಗ್ರಾನ್‌ಸ್ಲಾಂ ಗೆಲ್ಲುವ ಶಕ್ತಿ ಉಳಿದಂತಿದೆ!

ಸವಾಲು ಎಂಬ ಕಡಿದಾದ ಪರ್ವತ!
ರೋಜರ್‌ ಫೆಡರರ್‌ಗೆ ಈಗ ಫ್ರೆಶ್‌ ಆದ ಕಾಲುಗಳು ಇರುವುದು ನಿಜ. ಅವರ ಛಲ ಪ್ರಶ್ನಾತೀತ. ಆದರೆ ಗೆಲುವಿನ ಸಾಧ್ಯತೆ ಮತ್ತು ಅತ್ತಲಿನ ಹಾದಿ ದುರ್ಗಮ. ಬರಲಿರುವ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಫೆಡರರ್‌ಗೆ ಸಿಕ್ಕಿರುವುದು 17ನೇ ಶ್ರೇಯಾಂಕ. ಫೆಡರರ್‌ ಜೊತೆ ರಫೆಲ್‌ ನಡಾಲ್‌ ಕೂಡ ಕುಸಿತದ ಹಾದಿಯಲ್ಲಿದ್ದರು ಎಂಬುದು ಸತ್ಯವಾದರೂ ಈ ಇಬ್ಬರೇ ಮೂರನೇ ಸುತ್ತಿನ ವೇಳೆಯೇ ಮುಖಾಮುಖೀಯಾಗಬಹುದು. ನೋವಾಕ್‌ ಜೋಕೋವಿಚ್‌, ಇವತ್ತಿನ ಫೇವರಿಟ್‌ ಆ್ಯಂಡಿ ಮರ್ರೆ ಅಂತವರು ಹಾದಿಗೆ ಮುಳ್ಳಾಗಬಹುದು. 18ನೇ ಗ್ರಾನ್‌ಸ್ಲಾಂ ಎಂಬುದು ಮರೀಚಿಕೆಯಾಗಿಬಿಡಬಹುದು.

ರೋಜರ್‌-ಹಾಜರ್‌!
ಗ್ರಾನ್‌ಸ್ಲಾಂ ವೇಳೆ ಲಾಕರ್‌ ರೂಂ ಆಟಗಾರರಿಂದ ಗಿಜಿಗುಡುತ್ತಿರುತ್ತದೆ. ಆಟಗಾರರು ಪರಸ್ಪರ ಮಿಲನಗೊಳ್ಳುವ ಕ್ಷಣಗಳನ್ನು ವಿವರಿಸುವುದೇ ಸಂಭ್ರಮ. ಆಸ್ಪತ್ರೆ ಹಾಗಲ,ಅದು ಒಂಟಿ ಬವಣೆ. ಭೇಟಿಗೂ ಹಲವು ನಿರ್ಬಂಧ. ಅಂತಹ ಪರಿಸ್ಥಿತಿ ಟೆನಿಸ್‌ ಆಟಗಾರ ಜೇಮ್ಸ್‌ ಬ್ಲೇಕ್‌ಗೆ ಬಂದಿತ್ತು. ಅವರ ಕುತ್ತಿಗೆಯ ಗಾಯದಿಂದಾಗಿ ಹಾಸಿಗೆ ಬಿಟ್ಟೇಳುವಂತಿರಲಿಲ್ಲ. ಲಾಕರ್‌ ರೂಂ ಸ್ನೇಹಿತರಾರೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಆಗ ಬಂತು ಪುಟ್ಟ ಸಂದೇಶ, “ನಾವು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ನಿಜಕ್ಕೂ ತಮ್ಮನ್ನು ಅದಷ್ಟು ಬೇಗ ಅಂಕ‌ಣದಲ್ಲಿ ನೋಡಲಿಚ್ಛಿಸುತ್ತೇವೆ!’ ಸಾಧ್ಯವಿದ್ದರೆ ಬ್ಲೇಕ್‌ ಜಿಗಿದು ಹಾರಾಡುತ್ತಿದ್ದರೇನೋ. ಅವತ್ತು ನೂರಾರು ಟೆನಿಸ್‌ ಸಹ ಆಟಗಾರರಲ್ಲಿ ಬ್ಲೇಕ್‌ಗೆ ಬಂದದ್ದು ಏಕೈಕ ಸಂದೇಶ. ಕಳಿಸಿದ್ದು ಯಾರು ಗೊತ್ತೆ? ರೋಜರ್‌ ಫೆಡರರ್‌!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.