ಪುಷ್‌ತೂನಿಗರ ಒಕ್ಕಲೆಬ್ಬಿಸಿ ಪಾಕ್ ಉಗ್ರ ಶಿಬಿರ, ಅಣ್ವಸ್ತ್ರ ಮಾರಾಟ
Team Udayavani, Jan 14, 2017, 4:18 PM IST
ಇಸ್ಲಾಮಾಬಾದ್ : ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ತೀವ್ರ ಇರಿಸು ಮುರಿಸು ಉಂಟು ಮಾಡುವ ಹೊಸ ಕಳವಳಕಾರಿ ವಿದ್ಯಮಾನವೊಂದರಲ್ಲಿ ಪಾಕ್ ಸೇನೆ ನಿರಾಶ್ರಿತ ಪುಷ್‌ತೂನ್ ವಲಸಿಗರ ಶಿಬಿರಗಳನ್ನು ಬಲವಂತದಿಂದ ತೆರವುಗೊಳಿಸಿ ಅಲ್ಲಿ ಉಗ್ರರ ಶಿಬಿರಗಳನ್ನು ನಿರ್ಮಿಸಲು ಯತ್ನಿಸುತ್ತಿದೆ ಎಂದು ಅಫ್ಘಾನಿಸ್ಥಾನದಲ್ಲಿರುವ ಪುಷ್‌ತೂನ್ ಕಾರ್ಯಕರ್ತ ಉಮರ್ ಖಟ್ಟಕ್ ಆರೋಪಿಸಿದ್ದಾರೆ.
ಪಾಕಿಸ್ಥಾನದ ಸ್ವಾತ್ ಮತ್ತು ವಝೀರಿಸ್ತಾನದದಲ್ಲಿ ಪಾಕ್ ಸೈನಿಕರು ಪುಷ್‌ತೂನ್ ವಲಸಿಗರ ಅನೇಕ ಮನೆ ಹಾಗೂ ಶಿಬಿರಗಳನ್ನು ಬಲವಂತದಿಂದ ನಾಶಪಡಿಸುತ್ತಿದ್ದಾರೆ; ಅವರ ಹೆಂಗಸರು ಹಾಗೂ ಹೆಣ್ಣು ಮಕ್ಕಳನ್ನು ಬಲವಂತದಿಂದ ಒಯ್ದು ಅವರನ್ನು ಲಾಹೋರ್‌ನಲ್ಲಿ ಲೈಂಗಿಕ ಗುಲಾಮರನ್ನಾಗಿ ಶೋಷಿಸುತ್ತಿದ್ದಾರೆ ಎಂದು ಉಮರ್ ಖಟ್ಟಕ್ ದೂರಿದ್ದಾರೆ.
ಪಾಕ್ ಸೇನೆಯ ಈ ಪೈಶಾಚಿಕ ಕಾರ್ಯಾಚರಣೆಯನ್ನು ಅತ್ಯಂತ ವಿನಾಶಕಾರಿ ಎಂದು ಹೇಳಿರುವ ಖಟ್ಟಕ್, ಪಾಕ್ ಸೈನಿಕರು ಅಸಂಖ್ಯ ಪುಷ್‌ತೂನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪಾಕಿಸ್ಥಾನ ನಮ್ಮ ವಿರುದ್ಧ ಅಣ್ವಸ್ತ್ರಗಳನ್ನು ಬಳಸಬಹುದು; ಏಕೆಂದರೆ ಅದು ಅಣ್ವಸ್ತ್ರಗಳ ಕಾಳಸಂತೆಯಾಗಿದೆ; ಅದು ತನ್ನಲ್ಲಿನ ಅಣ್ವಸ್ತ್ರಗಳನ್ನು ಪುಂಡ ದೇಶಗಳಿಗೆ ಅಕ್ರಮವಾಗಿ ಮಾರುತ್ತಿದೆ ಎಂದು ಖಟ್ಟಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.