ಹನಿಟ್ರ್ಯಾಪ್‌


Team Udayavani, Jan 15, 2017, 3:50 AM IST

haney.jpg

ಇದು ಹನಿಟ್ರ್ಯಾಪ್‌ ಕೇಸು” ಸೈಬರ್‌ ಪೊಲೀಸ್‌ ಸ್ಟೇಷನ್ನಿನ ಇನ್ಸ್‌ಪೆಕ್ಟರ್‌ ದೀಪಕ್‌ ಉದ್ಗರಿಸಿದರು. ಸೋಹನ್‌ ಜ್ಯುವೆಲ್ಲರ್ಸ್‌ನ ಏರ್‌ ಕಂಡೀಶನ್‌x ಶೋರೂಮಿನ ಮಾಲೀಕ  ಸೋಹನ್‌ಲಾಲ್‌ ಕೊಠಡಿಯಲ್ಲಿ ಕುಳಿತಿದ್ದರು ದೀಪಕ್‌. 
“”ಬಟ್‌ ಸರ್‌, ನಾನು ಟ್ರ್ಯಾಪ್‌ ಆಗಿಲ್ಲ. ನನಗೆ ಗೊತ್ತಿಲ್ಲದೆ ಇಪ್ಪತ್ತು ಲಕ್ಷ ಮೋಸದಿಂದ ಎಗರಿಸಿ¨ªಾರೆ” ಸೋಹನ್‌ಲಾಲ್‌ ಆಕ್ಷೇಪಿಸಿದ.

“”ನೀವು ಹಾಗಂದುಕೊಂಡಿದ್ದೀರಿ. ಇಲ್ಲಿ ನೋಡಿ ನೀವೇ ಬರೆದು ಸೈನ್‌ ಮಾಡಿದ ಚೆಕ್ಕಿನ ಫೋಟೋ ಕಾಪಿ. ಇದು ಫೋರ್ಜರಿ ಅಲ್ಲ. ನೀವೇ ಒಪ್ಪುತ್ತಿದ್ದೀರಿ. ಆಕೆ ತುಂಬ ಸುಂದರಳಾಗಿದ್ದಳು, ನಿಮಗೆ ಸಂತೋಷವಾಗುವಂತೆ ಮಾತಾಡಿ¨ªಾಳೆ, ಸಲುಗೆ ತೆಗೆದುಕೊಂಡಿ¨ªಾಳೆ. ನಿಮ್ಮ ನಡುವೆ ನಡೆದಿರಬಹುದಾದಕ್ಕೆ ನೀವು ಕಾಣಿಕೆಯಾಗಿ ಇಪ್ಪತ್ತು ಲಕ್ಷದ ಚೆಕ್ಕು ಕೊಟ್ಟಿದ್ದೀರಿ. ಅದನ್ನಾಕೆ ಎನ್‌ಕ್ಯಾಶ್‌ ಮಾಡ್ಕೊಂಡಿ¨ªಾಳೆ”
ದೀಪಕ್‌ ಮಾತು ಗಡುಸಾಗಿತ್ತು.

“”ನನ್ನನ್ನು ನಂಬಿ ಸಾರ್‌. ಆಕೆಯನ್ನು ನಾನು ದುರುಪಯೋಗ ಮಾಡಿಕೊಂಡಿಲ್ಲ. ನಾನು ಅಂತ ವ್ಯಕ್ತಿಯಲ್ಲ , ಸಂಭಾವಿತ. ವಯಸ್ಸಿಗೆ ಬಂದ ಮಗಳಿ¨ªಾಳೆ. ಸಮಾಜದಲ್ಲಿ ಗೌರವವಿದೆ. ಅಂಥವನು ಈ ಅಪರಿಚಿತಳ ಜೊತೆ ಚೆÇÉಾಟವಾಡಿ ಅದಕ್ಕೆ ಪ್ರತಿಫ‌ಲವಾಗಿ ಹಣ ಕೊಟ್ಟಿಲ್ಲ. ಪ್ಲೀಸ್‌! ಆ ಸಮಯದಲ್ಲಿ ನನ್ನ ಆಫೀಸಿನಲ್ಲಿ ಸಿಸಿ ಟಿವಿ ಆನ್‌ ಆಗಿತ್ತು. ನೋಡಿ ಅದರ ಪ್ಲೇಬ್ಯಾಕ್‌”

ಸೇs… ಸೋಹನ್‌ಲಾಲ್‌ ತನ್ನ ಉದ್ಯೋಗಿಗೆ ಸನ್ನೆ ಮಾಡಿದ. ಆತ ಟಿವಿಯನ್ನು ಆನ್‌ ಮಾಡಿದ.
ಆಕೆ ಸುಂದರಿ ಎನ್ನುವುದರಲ್ಲಿ ಸಂದೇಹವೇ ಇರಲಿಲ್ಲ. ಹೆಚ್ಚು ಸ್ಪಷ್ಟತೆಯಿಲ್ಲದ ಸಿಸಿ ಟಿವಿ ಕ್ಯಾಮರಾದಲ್ಲೂ ಆಕೆ ಚೆನ್ನಾಗಿ ಕಾಣುತ್ತಿದ್ದಳು. ವಯಸ್ಸು ಇಪ್ಪತ್ತೆçದಿರಬಹುದು. ಗಂಡಸರನ್ನು ಆಕರ್ಷಿಸುವ ವಿದ್ಯೆಯಲ್ಲಿ ಪರಿಣತಿ ಹೊಂದಿರುವ ಹಾವಭಾವ. ನಡಿಗೆಯಲ್ಲಿ ಅತಿಯೆನಿಸದ ಅವಳ ಲಾಸ್ಯ, ಒನಪು, ವಯ್ನಾರ ಬೆರಗುಗೊಳಿಸುವಂತಿತ್ತು. ಆಕೆಯ ಜೊತೆಗೊಬ್ಬ ಗಂಡಸು. ಆತ ಸುಮಾರು ಮೂವತ್ತರವನು, ದೃಢಕಾಯ. ಗಂಟು ಮುಖ. ಒಂದು ರೀತಿಯ ಅಸಡ್ಡೆ ಎನ್ನಬಹುದಾದ ಭಾವನೆ ಮುಖದ ಮೇಲೆ. ಇಬ್ಬರೂ ಪಕ್ಕಪಕ್ಕದÇÉೇ ನಡೆಯುತ್ತ ಬಂದರು. ಸೋಹನ್‌ ಟೇಬಲ್ಲಿನೆದುರು ನಿಂತರು. ಆಕೆ ಮೋಹಕವಾಗಿ ನಕ್ಕು ಸೋಹನ್‌ ಕೈಗೆ ಒಂದು ಕಾರ್ಡು ಕೊಟ್ಟಳು.
ಆ ಕಾರ್ಡಿನಿಂದ ಏನೋ ಒಂದು ಬಗೆಯ ಸುವಾಸನೆಯಿತ್ತು. ಆಕೆ, “”ನಾವು ಕುಳಿತುಕೊಳ್ಳಬಹುದೆ?” ಎಂದಳು. “”ಕೂರಿ” ಎಂದು ಹೇಳಿದೆ.
ಸೋಹನ್‌ಲಾಲ್‌ ಮಧ್ಯದಲ್ಲಿ ಮಾತಾಡಿದರು.
“”ನೆಕ್ಸ್ಟ್” ಎಂದರು ದೀಪಕ್‌. 

ಈಗ ಇನ್ನೊಂದು ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದುದು ಮೂಡಿತು. ಅದು ಒಂದು ಪಾರ್ಶ್ವದಿಂದ ಚಿತ್ರೀಕರಿಸಿದ್ದು. ಆಕೆ ಒಂದು ಫೈಲನ್ನು ಸೋಹನ್‌ ಕೈಗ್‌ ಕೊಟ್ಟಳು. ಸೋಹನ್‌ ಅದನ್ನು ತೆರೆದು ಓದುತ್ತಿದ್ದರು. ಆಕೆಯ ಜೊತೆ ಬಂದವನು ತನ್ನ ಕೈಲಿದ್ದ ಮೊಬೈಲಿನಲ್ಲಿ ತಲ್ಲೀನನಾಗಿದ್ದ. ಒಮ್ಮೊಮ್ಮೆ ಸೋಹನ್‌ ಮುಖವನ್ನೂ ಆಕೆಯ ಮುಖವನ್ನೂ ಸರದಿಯಂತೆ ನೋಡುತ್ತಿದ್ದ. ಆಕೆ ಎಡಬಿಡದೆ ಮಾತಾಡುತ್ತಲೇ ಇದ್ದಳು. ಸೋಹನ್‌ ಫೈಲು ಮುಚ್ಚಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದರು. ಹಾವಾಡಿಗ ಪುಂಗಿ ಊದುವಾಗ ಹೆಡೆಯಾಡಿಸುವ ನಾಗರಹಾವಿನಂತೆ‌ ತಲೆಯಾಡಿಸುತ್ತಿದ್ದರು. ಕೆಲವು ನಿಮಿಷ‌‌ಗಳ ನಂತರ ತಮ್ಮ ಟೇಬಲ್‌ ಡ್ರಾಯರಿನಿಂದ ಚೆಕ್‌ಬುಕ್‌ ತೆಗೆದು ಬರೆದು ಸೈನ್‌ ಮಾಡಿದರು. ಒಂದಿಷ್ಟೂ ಹಿಂದೆಮುಂದೆ ಯೋಚಿಸಿದಂತಿರಲಿಲ್ಲ. ಅತಿ ವಿಶ್ವಾಸದ ವ್ಯಕ್ತಿಯೊಬ್ಬರಿಗೆ ಕೊಡುತ್ತಿರುವಂತೆ ಚೆಕ್ಕನ್ನು ಆಕೆಯ ಕೈಗೆ ಕೊಟ್ಟರು. ಆಕೆ ಇನ್ನೂ ಮಾತಾಡುತ್ತಲೇ ಇದ್ದಳು. ಆಕೆಯ ಮುಖದಲ್ಲಿ ಅಚ್ಚಳಿಯದ ನಗುವಿತ್ತು. ಆಕೆ ಸೋಹನ್‌ನ ಕೈಕುಲುಕಿದಳು, ಆಗಲೂ ಮಾತಾಡುತ್ತಿದ್ದಳು. ಆಕೆ ಎದ್ದ ನಂತರ ಆ ಗಂಡಸು ಕೂಡ ಎದ್ದ. ತನ್ನ ಮೊಬೈಲಿನಲ್ಲಿ ಏನೋ ಮಾಡುತ್ತಲೇ ಇದ್ದ. ನಂತರ ಅವರಿಬ್ಬರೂ ಬಂದ ರೀತಿಯÇÉೇ ಹಿಂತಿರುಗಿದರು. ಸೋಹನ್‌ ಅವರಿಬ್ಬರನ್ನೇ ನೋಡುತ್ತಾ ನಿಂತಿದ್ದರು-ಕುಳಿತುಕೊಳ್ಳಬೇಕೆನ್ನುವುದನ್ನೂ ಮರೆತು! ಸಿಸಿ ಟಿವಿ ಅವರು ನಿಂತಿರುವುದನ್ನೇ ತೋರಿಸುತ್ತಿತ್ತು. ಇನ್ನೊಂದು ತುಣುಕಿನಲ್ಲಿ ಅವರಿಬ್ಬರೂ ಬಾಗಿಲಿಂದಾಚೆ ಹೋದದ್ದು ಕಾಣಿಸಿತು. 

“”ನೋಡಿ ಸರ್‌, ಇಷ್ಟೇ ನಡೆದದ್ದು. ಅದಾದ ಮೇಲೆ ನಾನಾಕೆಯನ್ನು ನೋಡೇ ಇಲ್ಲ. ಇನ್ನು ಅವಳೊಂದಿಗೆ ಸಲುಗೆ ಬೆಳೆಸುವುದೆಲ್ಲಿಂದ ಬಂತು. ಆಕೆ ನನ್ನ ಆಫೀಸಿನಲ್ಲಿದ್ದುದು ಕೇವಲ ಹತ್ತೇ ನಿಮಿಷ”
“”ನೀವೇ ಚೆಕ್‌ ಬರೆದುಕೊಟ್ಟಿದ್ದೀರಿ. ಮೋಸವಾಗಿದೆ ಎಂದೂ ಹೇಳ್ತಿದ್ದೀರಿ? ಹೇಗೆ ಮೋಸವಾಗಿದೆ ಹೇಳಿ”
“”ಸರ್‌, ಅವರು ಯಾರೋ ನನಗೆ ಗೊತ್ತಿಲ್ಲ. ಅವರು ಬಂದಿದ್ದು ಗೊತ್ತು ಅಷ್ಟೆ. ಆಕೆ ನನ್ನ ಕೈಗೆ ಕಾರ್ಡು ಇಟ್ಟಿದ್ದು ನೆನಪಿದೆ. ಆಮೇಲಿನದು ಯಾವುದೂ ನೆನಪಿಲ್ಲ. ಅವರ ನನ್ನ ನಡುವೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರವೂ ಇಲ್ಲ. ಈ ಸಿಸಿ ಟಿವಿ ನೋಡಿದ ಮೇಲೆ ನನಗೆ, ನಾನೇ ಚೆಕ್ಕು ಬರೆದು ಕೊಟ್ಟಿದ್ದು ಗೊತ್ತಾಗಿದ್ದು”
“”ತುಂಬಾ ವಿಚಿತ್ರವಾಗಿದೆ ಸೇs…. ಚೆಕ್‌ ಬರೆದದ್ದು ನಿಮಗೇ ಅರಿವಿಲ್ಲ ಅಂದರೆ ಹೇಗೆ? ಹೋಗಲಿ, ಅವರು ಹಣ ಡ್ರಾ ಮಾಡಿದ್ದು ನಿಮಗೆ ಎಷ್ಟು ಹೊತ್ತಿನಲ್ಲಿ ಗೊತ್ತಾಗಿದ್ದು?” ದೀಪಕ್‌ ಕೇಳಿದರು.

“”ಅವರು ಬಂದಾಗ ಟೈಮು ಹನ್ನೊಂದಾಗಿತ್ತು. ನನಗೆ ಹಣ ಡ್ರಾ ಆಗಿದೆ ಅಂತ ಗೊತ್ತಾಗಿದ್ದು ಹನ್ನೆರಡೂವರೆಗೆ”
“”ಅಲ್ಲಿಯವರೆಗೂ ನಿಮಗೆ ಅನುಮಾನ ಬರಲಿಲ್ಲವೆ?”
“”ಅಲ್ಲಿಯವರೆಗೂ ನಾನು ಏನು ಮಾಡ್ತಿ¨ªೆ ಅನ್ನೋದು ನನಗೇ ಗೊತ್ತಿಲ್ಲ. ಬ್ಯಾಂಕ್‌ ಮ್ಯಾನೇಜರ್‌ ಫೋನು ಮಾಡಿದ್ದರು. ಅದನ್ನು ನಾನು ರಿಸೀವ್‌ ಮಾಡಿಲ್ಲ, ಏಕೆಂದರೆ, ಅದರ ಅರಿವೂ ನನಗಿರಲಿಲ್ಲ. ನನ್ನ ಕೆಲಸದವರೊಬ್ಬರು ಬಂದು ಎಚ್ಚರಿಸಿದಾಗಲೇ ನನಗೆ ನೆನಪು ಬಂದದ್ದು!”

“”ಅಂದರೆ… ಪ್ರಜ್ಞೆ ತಪ್ಪಿತ್ತಾ?”
“”ಇಲ್ಲ… ಎಚ್ಚರವಾಗಿ¨ªೆ… ಆದರೆ ಮಂಕು ಕವಿದಿತ್ತು”
ದೀಪಕ್‌ ಒಂದು ಕ್ಷಣ ಸೋಹನ್‌ ಹೇಳಿದ್ದನ್ನ ಮೆಲುಕು ಹಾಕಿದರು. 
“”ನಿಮ್ಮನ್ನ ಎಚ್ಚರಿಸಿದವರು ಯಾರು ಕರೆಯಿರಿ…”
ಸೋಹನ್‌ ಬೆಲ್‌ ಮಾಡಿದರು. ಆಚೆಯಿಂದ ಒಬ್ಬ ಕೆಲಸಗಾರ ಬಂದ.
“”ಮದನ್‌ಗೆ ಬರೋಕೆ ಹೇಳು”
“”ಈ ಮದನ್‌ ಯಾರು?”
“”ನನ್ನ ತಂಗಿ ಮಗ. ಇÇÉೇ ಐದು ವರ್ಷದಿಂದ ಕೆಲಸ ಕಲೀತಾ ಇ¨ªಾನೆ”
ಸೋಹನ್‌ ವಿವರಿಸುವಾಗಲೇ ಮದನ್‌ ಬಂದ.
“”ಕ್ಯಾ ಮಾಮಾಜೀ”

“”ಬೇಟಾ… ಬೆಳಿಗ್ಗೆ ನೀನು ಬಂದು ನನ್ನ ಎಚ್ಚರಿಸಿದಾಗ, ನಾನು ಏನು ಮಾಡ್ತಿ¨ªೆ ಹೇಳು”
“”ಪತ್ತರ್‌ ಥರಾ ನಿಂತಿದ್ರಿ. ಬಾಗಿಲ ಕಡೆ ನೋಡ್ತಾ ಇದ್ರಿ. ಎಷ್ಟೊತ್ತಿಂದ ನಿಂತಿದ್ರೋ ಗೊತ್ತಿಲ್ಲ. ಆ ಪಾರ್ಟಿ ಬಂದು ಹೋದ್ಮೇಲೆ ನಿಮ್ಮ ಚೇಂಬರೊಳಕ್ಕೆ ಯಾರೂ ಬಂದಿಲ್ಲ”
ದೀಪಕ್‌ ಆಸಕ್ತಿಯಿಂದ ಕೇಳಿದರು. 

“”ಅವರನ್ನು ಸೇs…ನ ನೋಡೋಕೆ ಬಿಟ್ಟಿದ್ದು ಯಾರು?”
“”ನಾನೇ ಸರ್‌”
“”ಯಾವ ಕಾರಣಕ್ಕೆ ನೋಡೋಕೆ ಬಿಟ್ರಿ?”
“”ಚಿನ್ನದ ಬಿಸ್ಕೆಟ್‌ ಇವೆ. ಮಾರಬೇಕು ಅಂದರು”
“”ಸರಿ, ಒಳಗೆ ಬಂದು ತಮ್ಮನ್ನು ಹೇಗೆ ಪರಿಚಯಿಸಿಕೊಂಡರು?”

“”ಒಳಗೆ ಬಂದವರಲ್ಲಿ ಆ ಯುವತಿ ನಕ್ಕು ಕೈಕುಲುಕಿ ವಿಸಿಟಿಂಗ್‌ ಕಾರ್ಡು ಕೊಟ್ಟದ್ದಷ್ಟೇ ನನಗೆ ನೆನಪು. ಅದರಲ್ಲಿನ ಸುವಾಸನೆಗೆ ಮಂಕು ಕವಿದಂತಾಯಿತು. ಇನ್ಯಾವುದೂ ನನಗೆ ಗೊತ್ತಿಲ್ಲ. ಸಿಸಿ ಟಿವಿ ರೆಕಾರ್ಡಿಂಗ್‌ ನೋಡಿದಾಗಲೇ ನಾನು ಏನೇನು ಮಾಡಿದೆ ಅನ್ನೋದು ಗೊತ್ತಾಗಿದ್ದು”

“”ಆ ವಿಸಿಟಿಂಗ್‌ ಕಾರ್ಡು ಎಲ್ಲಿ?”
“”ಅದನ್ನು ವಾಪಸು ತೆಗೆದುಕೊಂಡು ಹೋಗಿ¨ªಾರೆ. ಅದು ಸಿಸಿ ಟಿವಿಯಲ್ಲಿ ಕಾಣಿಸುತ್ತೆ”
“”ಓ.ಕೆ. ಸೇs… ಸೋಹನ್‌ಲಾಲ್‌, ಇನ್ನು ಸ್ವಲ್ಪ ಹೊತ್ನಲ್ಲಿ ನಮ್ಮ ಆಫೀಸಿನವರು ಬರ್ತಾರೆ ಅವರು ಈ ಟಿವಿಯಲ್ಲಿ ರೆಕಾರ್ಡ್‌ ಆಗಿರೋದನ್ನ ಕಾಪಿ ಮಾಡ್ಕೊಂಡು ಹೋಗ್ತಾರೆ. ನಾವು ಇನ್ವೆಸ್ಟಿಗೇಟ್‌ ಮಾಡ್ತೀವಿ”
ದೀಪಕ್‌ ಎದ್ದರು.

“”ಸಾರ್‌, ನನ್ನ ಹಣ ವಾಪಸು ಸಿಗುತ್ತಾ?”
“”ಎಲ್ಲ ಕಳೂÅ ಒಂದಲ್ಲ ಒಂದ್ಸಲ ಸಿಕ್ಕಿಹಾಕಿಕೊಳ್ಳಲೇಬೇಕು” ನಗುತ್ತ ಎದ್ದು ಹೊರಟರು.
ಸೈಬರ್‌ ಕ್ರೆçಮ್‌ ತಾಂತ್ರಿಕ ಸಿಬ್ಬಂದಿ ಸೋಹನ್‌ ಜ್ಯುವೆಲ್ಲರ್ಸ್‌ ಮುಟ್ಟುವ ಹೊತ್ತಿಗೆ ಹನಿಟ್ರ್ಯಾಪ್‌ ವಿಷಯ ಮಾಧ್ಯಮಗಳಿಗೆ ಸಿಕ್ಕಿ ಅದು ದೊಡ್ಡ ಸುದ್ದಿಯಾಗಿತ್ತು. ರಾಜ್ಯದಾದ್ಯಂತವಷ್ಟೇ ಅಲ್ಲದೆ ರಾಷ್ಟ್ರೀಯ ಚಾನಲ್ಲುಗಳಲ್ಲೂ ಪ್ರಸಾರವಾಗಿತ್ತು. ಮೀಡಿಯಾದವರು ದೀಪಕ್‌ ಸಂದಶ‌ìನಕ್ಕೆ ದುಂಬಾಲು ಬಿದ್ದಿದ್ದರು. ದೀಪಕ್‌ ಅವರಿಗೆ ಚುಟುಕು ಅವಕಾಶವಿತ್ತಿದ್ದರು.

ದೀಪಕ್‌ ಬಹಳ ಮುತುವರ್ಜಿಯಿಂದ ಪೊಲೀಸ್‌ ನೆಟ್‌ವರ್ಕಿನಲ್ಲಿ ಸುದ್ದಿ ಹರಡಿದರು. ಈ ಸಂಬಂಧ ಯಾವುದೇ ರೀತಿಯ ಸುದ್ದಿ ಸಿಕ್ಕರೂ ತಕ್ಷಣವೇ ತಿಳಿಸುವಂತೆ ಮನವಿ ಮಾಡಿದ್ದರು. ಅದು ಪ್ರಸಾರವಾದ ಹತ್ತೇ ನಿಮಿಷದಲ್ಲಿ ಚೆನ್ನೈ ಸೈಬರ್‌ ಪೊಲೀಸರಿಂದ ಒಂದು ಕಾಲ್‌ ಬಂತು. ಕಾರ್ತಿಕೇಯನ್‌ ಎಂಬ ಎಸ್‌ಐ ದೀಪಕ್‌ ಜೊತೆ ಮಾತಾಡಿದರು. ಸೋಹನ್‌ಗೆ ಮೋಸ ಮಾಡಿ ಇಪ್ಪತ್ತು ಲಕ್ಷ ಲಪಟಾಯಿಸಿದ ಆ ಇಬ್ಬರು ಚೆನ್ನೈನಲ್ಲಿ ಜಾಲ ಬೀಸಿದ್ದರು. ಅಲ್ಲಿಯೂ ಒಂದು ಪ್ರತಿಷ್ಠಿತ ಒಡವೆ ಅಂಗಡಿಯಿಂದ ಇಪ್ಪತ್ತು ಲಕ್ಷ ಲಪಟಾಯಿಸಿದ್ದರು. ಅಲ್ಲಿಯೂ ಅಪರಾಧದ ವಿಧಾನ ಬೆಂಗಳೂರಿನಲ್ಲಿ ನಡೆದಂತೆಯೇ ಆಗಿತ್ತು! ಎರಡಕ್ಕೂ ಸಾಮ್ಯ! ಎರಡನ್ನೂ ಮಾಡಿದವರು ಅವರೇ! ಒಂದೇ ದಿನದಲ್ಲಿ ಎರಡು ಕಡೆ. ಬೆಳಿಗ್ಗೆ ಹನ್ನೊಂದಕ್ಕೆ ಬೆಂಗಳೂರು. ಸಂಜೆ ಚೆನ್ನೈ!

ಮನೆಗೆ ಹೋಗಬೇಕೆಂದಿದ್ದ ದೀಪಕ್‌ ಮನಸ್ಸು ಬದಲಾಯಿಸಿದರು. ಕಾರ್ತಿಕೇಯನ್‌ ಹೆಚ್ಚು ವಿವರ ತಿಳಿಸಲಿಲ್ಲ. ಆಗಷ್ಟೇ ಅಪರಾಧ ನಡೆದಿದ್ದು ಅದರ ವಿವರವನ್ನು ಇನ್ನೂ ಸಂಗ್ರಹಿಸುತ್ತಿದ್ದರು. ವಿಚಾರಣೆ ನಡೆಯುತ್ತಿತ್ತು. ಕೇಂದ್ರೀಯ ನೆಟ್‌ವರ್ಕಿನಲ್ಲಿ ದೀಪಕ್‌ ಪ್ರಸರಿಸಿದ್ದ ಮಾಹಿತಿ ನೋಡಿ ಕಾರ್ತಿಕೇಯನ್‌ ತಕ್ಷಣ ಸ್ಪಂದಿಸಿದ್ದರು. “ಬೆಳಿಗ್ಗೆ ಹನ್ನೊಂದಕ್ಕೆ ಬೆಂಗಳೂರು, ಸಂಜೆ ಏಳಕ್ಕೆ ಚೆನ್ನೈ ! ಬೆಂಗಳೂರಿನಿಂದ ಚೆನ್ನೈಗೆ ಅವರು ವಿಮಾನದÇÉೇ ತಲುಪಿರಬೇಕು’. ತಕ್ಷಣ ದೀಪಕ್‌ ಏರ್‌ಪೋರ್ಟ್‌ ಪೊಲೀಸಿಗೆ ಫೋನ್‌ ಮಾಡಿ ವಿಚಾರಿಸಿದರು. ಚೆನ್ನೈಗೆ ಹೋದ ಫ್ಲೈಟಿನಲ್ಲಿ ಆ ಹೆಂಗಸು ಮತ್ತು ಗಂಡಸು ಹೋಗಿರುವರೇ ತಕ್ಷಣ ಎಲ್ಲ ಮಾಹಿತಿಯನ್ನೂ ಪರೀಕ್ಷಿಸಿ ತಿಳಿಸಬೇಕೆಂದು ಕೋರಿದರು. 

ಕಾರಿನಲ್ಲಿಯೂ ಚೆನ್ನೈಗೆ ಐದು ಗಂಟೆಯ ಅಂತರದಲ್ಲಿ ಹೋಗಲು ಸಾಧ್ಯ! ವಿಮಾನ ಇಲ್ಲವೇ ಕಾರು ಎರಡು ರೀತಿಯಲ್ಲಿ ಅವರು ಚೆನ್ನೈ ತಲುಪಿರಬಹುದು! ಕಾರು ಅವರದ್ದೇ ಇರಲಿಕ್ಕಿಲ್ಲ. ಟ್ಯಾಕ್ಸಿಯಲ್ಲಿ ಹೋಗಿರಬಹುದು. ಟ್ಯಾಕ್ಸಿ ನೆಟ್‌ವರ್ಕಿಗೆ ಕೂಡ ಅವರಿಬ್ಬರ ಬಗೆಗೆ ಮಾಹಿತಿ ಕೇಳಿದರು. ಆಕೆ ಸಿಕ್ಕಿಕೊಳ್ಳುವುದು ನಿಶ್ಚಿತ. ಆದರೆ ಹೇಗೆ ಈ ರೀತಿ ವಂಚಿಸುತ್ತಿರಬಹುದು?

ಹೇಗೆ ಈ ಕೃತ್ಯ ಮಾಡಿರಬಹುದು? ದೀಪಕ್‌ ಮೂರನೆಯ ಸಲ ಸೋಹನ್‌ ಸಿಸಿ ಟಿವಿ ರೆಕಾರ್ಡ್‌ ಮಾಡಿದ್ದನ್ನು ನೋಡುತ್ತಿದ್ದರು. ಆಕೆಯ ಸೋಹನ್‌ ಕೈಗಿತ್ತ ಆ ಕಾರ್ಡಿಗೂ, ಆಕೆ ಮಾತಾಡುತ್ತಿದ್ದುದ್ದಕ್ಕೂ ಏನೋ ಸಾಮ್ಯ ಇದೆ ಎನ್ನಿಸಿತು. ಆಕೆಯ ಜೊತೆ ಬಂದಿದ್ದವನು ಬಾಡಿಗಾರ್ಡಿನಂತೆ ಕೆಲಸ ನಿರ್ವಹಿಸುತ್ತಿದ್ದಂತೆ ಕಾಣಿಸುತ್ತಿತ್ತು. ಆತ ತನ್ನ ಮೊಬೈಲು, ಆಕೆಯ ಮುಖ ಮತ್ತು ಸೋಹನ್‌ ಮುಖವನ್ನೂ ಪದೇಪದೇ ನೋಡುತ್ತಿದ್ದ. ಇಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ ಓದಿದ್ದ ದೀಪಕ್‌, ಈ ಘಟನೆಯನ್ನು ತಮ್ಮ ವಿದ್ಯೆಯ ಹಿನ್ನೆಲೆಯಲ್ಲಿ ನೋಡತೊಡಗಿದರು. ದೀಪಕ್‌ಗೆ ಅವರನ್ನು ಹಿಡಿಯುವುದಕ್ಕಿಂತ ಅವರು ಪ್ರಯೋಗಿಸುತ್ತಿದ್ದ ತಂತ್ರ ಅರಿತುಕೊಳ್ಳುವುದು ಮುಖ್ಯವೆನಿಸುತ್ತಿತ್ತು. ಆ ತಂತ್ರವನ್ನು ಅರಿತರೆ ಅವರನ್ನು ಹಿಡಿದಂತೆಯೇ! ಮೊದಲಿಗೆ ಅವರಿಗೆ ಹೊಳೆದದ್ದು ಸಮ್ಮೊàಹಿನಿ! ಹಿಪ್ನೊಟೈಸ್‌ ಮಾಡಿ ಸೋಹನ್‌ ಕೈಯಲ್ಲಿ ಚೆಕ್ಕು ಬರೆಸಿರಬಹುದು. ಆದರೆ, ಒಬ್ಬ ಮನುಷ್ಯನನ್ನು ಅವನ ಇಚ್ಛೆಗೆ ವಿರುದ್ಧವಾಗಿ ಸಮ್ಮೊàಹಿನಿಯಿಂದ ಬಳಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದನ್ನು ಮನಃಶಾಸ್ತ್ರಜ್ಞರು ಕರಾರುವಕ್ಕಾಗಿ ಹೇಳಿ¨ªಾರೆ. ಸಮ್ಮೊàಹಿನಿ ಪ್ರಯೋಗಿಸಿ ಯಾರನ್ನೇ ಆದರೂ ಅವರ ಇಚ್ಛೆಗೆ ವಿರುದ್ಧವಾಗಿ ನಡೆಸಿಕೊಳ್ಳಲಾಗದು ಎಂದ ಮೇಲೆ ಇದು ಸಮ್ಮೊàಹಿನಿಯಲ್ಲ. ಇಂಥ ಕಲ್ಪನೆಗಳು ಬರೀ ಕತೆ, ಕಾದಂಬರಿ, ಸಿನೆಮಾಗಳಿಗೆ ಮಾತ್ರ ಉಪಯೋಗ. ನಿಜವಾಗಿಯೂ ಇದು ಅಸಾಧ್ಯ.

ಮತ್ತೆ… ಆಕೆ ಸೋಹನ್‌ಲಾಲ್‌ ಕೈಗೆ ಕೊಟ್ಟ ವಿಸಿಟಿಂಗ್‌ ಕಾರ್ಡಿನಲ್ಲಿ ಪ್ರಜ್ಞೆಗೆ ಮುಸುಕು ಹಾಕುವ ಶಕ್ತಿ ಇರಬಹುದೆ? ಪ್ರಜ್ಞೆಯನ್ನು ತಪ್ಪಿಸಬಹುದೇ ಹೊರತು ಪ್ರಜ್ಞೆಗೆ ಮಂಕುಬೂದಿ ಎರಚಲು, ಇಲ್ಲವೇ ಸ್ವಲ್ಪ ಕಾಲ ನಿಷ್ಕ್ರಿಯಗೊಳಿಸುವುದು ಸಾಧ್ಯವಿಲ್ಲ. ಇದು ದೀಪಕ್‌ನ ಜ್ಞಾನ ಹೇಳಿತು. ಮತ್ತೆ ಇನ್ನೇನಿರಬಹುದು?

ಮತ್ತೂಮ್ಮೆ ಫೋನು ರಿಂಗಾದಾಗ ದೀಪಕ್‌ ಯೋಚನೆಯ ರೈಲು ಹಳಿತಪ್ಪಿತು. ಪೊಲೀಸ್‌ ಕಮಿಷನರ್‌ ಫೋನಾಯಿಸಿದ್ದರು. ವಿಚಾರಣೆಯ ಪ್ರಗತಿ ಕೇಳಿದರು. ಇದು ದೊಡ್ಡ ಸವಾಲು. ಇದು ಬೇಗನೆ ಸಾಲ್‌Ì ಆಗಬೇಕು! ಎÇÉಾ ಸಂಪನ್ಮೂಲಗಳನ್ನೂ ಉಪಯೋಗಿಸಲು ನಿಮಗೆ ಪರ್ಮಿಷನ್‌ ಇದೆ. ನಮ್ಮ ಇಲಾಖೆಯ ಮೇಲೆ ಸರ್ಕಾರದ ವಿಶ್ವಾಸ ಈಗಾಗಲೇ ಕಡಿಮೆಯಾಗಿದೆ. ಈ ಕೇಸನ್ನು ಶೀಘ್ರವಾಗಿ ಸಾಲ್‌Ì ಮಾಡುವುದರಿಂದ ಆ ವಿಶ್ವಾಸ ಮರಳಿ ಗಳಿಸಿಕೊಳ್ಳಬಹುದು. ತತ್‌ಕ್ಷಣ ಕೇಸು ಸಾಲ್‌Ì ಮಾಡಲು ಎಲ್ಲ ಪ್ರಯತ್ನ ಮಾಡಿ ಎಂದು ಹೇಳಿ ಫೋನಿಟ್ಟರು.
ದೀಪಕ್‌ ನಿಟ್ಟುಸಿರಿಟ್ಟರು. ಮೊಬೈಲು ರಿಂಗಾಯಿತು. ಎತ್ತಿ ಕಿವಿಗಿಟ್ಟುಕೊಂಡರು.

“”ನಮಸ್ಕಾರ, ನನ್ನ ಹೆಸರು ವರ್ಮಾ ಅಂತ. ನಾನೊಬ್ಬ ಮನಶಾÏಸ್ತ್ರದ ಪ್ರೊಫೆಸರ್‌. ಮಾಧ್ಯಮದಲ್ಲಿ ಚೀಟಿಂಗ್‌ ಕೇಸಿನ ವಿವರ ನೋಡಿದೆ. ಅದರ ವಿಡಿಯೋ ತುಣುಕುಗಳನ್ನೂ ನೋಡಿದೆ. ಅದರ ಸಂಬಂಧ ನಿಮ್ಮ ಜೊತೆ ಮಾತಾಡಬಹುದೆ?”
ದೀಪಕ್‌ಗೆ ಅಚ್ಚರಿ. ಇವರೊಬ್ಬರು ಅಪರೂಪದ ವ್ಯಕ್ತಿ ಎನಿಸಿತು. ಇಂಥ ಸಂದರ್ಭದಲ್ಲಿ ಒಬ್ಬರು ಪರಿಣಿತರು ತಾವಾಗಿಯೇ ಮಾತಾಡಬಯಸುತ್ತಿರುವುದು ಅಪರೂಪದÇÉೇ ಅಪರೂಪ ಎನಿಸಿತು. ವರ್ಮಾ ಹೆಸರು ದೀಪಕ್‌ ಅನೇಕ ಸಲ ಪೇಪರುಗಳಲ್ಲಿ ಓದಿದ್ದರು. ಮನಃಶಾಸ್ತ್ರ  ಕ್ಷೇತ್ರದಲ್ಲಿ ಅವರೊಬ್ಬ ಖ್ಯಾತನಾಮರು.

“”ಖಂಡಿತ ಸಾರ್‌”
“”ಸ್ವಲ್ಪ ಡೀಟೈಲಾಗಿ ಮಾತಾಡಬೇಕು”
“”ಆಗಲಿ ಸಾರ್‌, ತಾವೆಲ್ಲಿದ್ದೀರಿ? ಎಲ್ಲಿಗೆ ಬರಲಿ?”
“”ಬೆಂಗಳೂರಲ್ಲಿ ನಾವು ಭೇಟಿ ಮಾಡಲು ಟ್ರಾಫಿಕ್ಕು ಅವಕಾಶ ಕೊಡೋಲ್ಲ. ಬದಲಿಗೆ ವಿಡಿಯೋ ಕಾನ್ಫರೆನ್ಸ್‌ ಮಾಡೋಣ. ನಿಮ್ಮ ಕಾನ್ಫರೆನ್ಸ್‌ ನಂಬರು ಕೊಡಿ” 

ಹತ್ತು ನಿಮಿಷದಲ್ಲಿ ವರ್ಮಾ ವಿಡಿಯೋ ಸ್ಕ್ರೀನ್‌ ಮೇಲೆ ಜನ್ಮ ತಳೆದರು. ದೀಪಕ್‌ ತಾವು ಗ್ರಹಿಸಿದ್ದ ಎÇÉಾ ವಿವರ ಅವರಿಗೆ ಹೇಳಿದರು.

“”ಇದು ಹಿಪ್ನಾಟಿಸಂ ಅಂತ ನೀವೆÇÉಾ ತಿಳಿದಿದ್ದೀರಿ ಅಲ್ಲವೆ?” ವರ್ಮಾ ಮರು ಪ್ರಶ್ನೆ ಕೇಳಿದರು.
“”ಹೌದು ಸರ್‌”
“”ಇದು ಹಿಪ್ನೊàಟಿಸಂಗಿಂತಲೂ ವಿಭಿನ್ನವಾದದ್ದು. ಆಕೆ ಜೊತೆ ಇದ್ದವನ ಕೈಯಲ್ಲಿ ಒಂದು ಮೊಬೈಲ್‌ ರೀತಿಯ ಉಪಕರಣ ಇತ್ತು, ಅದನ್ನು ನೀವು ಗಮನಿಸಿದ್ದೀರಾ?”

“”ಹಾ… ಸರ್‌… ಗಮನಿಸಿದ್ದೀನಿ. ಅದು ಮೊಬೈಲು. ಅದರÇÉೇ ಅವನು ತಲ್ಲೀನನಾಗಿದ್ದ”
“”ಆದರೆ ಅದು ಮೊಬೈಲು ಅಲ್ಲ! ಅದನ್ನ ಆಗಲೇ ನೀವು ಸಿಸಿ ಟಿವಿ ಫ‌ೂಟೇಜ್‌ ಎನಾÉರ್ಜ್‌ ಮಾಡಿ ನೋಡಿ. ಅದನ್ನು ನಾನು ಚೆನ್ನಾಗಿ ನೋಡಿದ್ದೀನಿ. ಅದರ ಬಗೆಗೆ ನನ್ನ ವಿಶ್ಲೇಷಣೆ ಹೇಳ್ತಿದ್ದೀನಿ ಕೇಳಿ. ಮೇಲ್ನೋಟಕ್ಕೆ ಆಕೆ ಈ ಚೀಟಿಂಗಿನಲ್ಲಿ ಮುಖ್ಯ ಪಾತ್ರಧಾರಿಣಿ ಅನ್ನಿಸುತ್ತೆ. ಆಕೆ ಅಪಾಯಕಾರಿ ಹೆಂಗಸು ಅನ್ನಿಸುತ್ತೆ. ಆದರೆ, ನಿಜವಾದ ಅಪಾಯಕಾರಿ ಮನುಷ್ಯ ಮೊಬೈಲಿನಂತಹ ಉಪಕರಣ ಹಿಡಿದಿದ್ದವನು.  ಅವನ ಹತ್ತಿರ ಇರೋ ಮೊಬೈಲು ರೀತಿಯ ಉಪಕರಣ ಒಂದು ಬಗೆಯ ಆಲ್ಟ್ರಾಸಾನಿಕ್‌ ತರಂಗಗಳನ್ನು ಸೃಷ್ಟಿಸುತ್ತೆ. ಅದು ನೇರವಾಗಿ ಎದುರಿನಲ್ಲಿರುವ ವ್ಯಕ್ತಿಯ ಮಿದುಳಿನ ಫ್ರೀಕೆೆÌನ್ಸಿಯನ್ನು ಅಳೆದು, ಅದಕ್ಕೆ ಸಮಾನವಾದ ತರಂಗಗಳನ್ನು ಸೃಷ್ಟಿಸುತ್ತೆ. ಅದರಿಂದ ಆ ವ್ಯಕ್ತಿ ಆ ಸಮಯದಲ್ಲಿ ಏನು ಹೇಳಿದರೂ ಒಪ್ಪುತ್ತಾನೆ. ಜೊತೆಗೆ ಬೇರೆಯವರು ಹೇಳುವುದು ತನ್ನದೇ ಚಿಂತನೆ ಎಂದು ತಿಳಿಯುತ್ತಾನೆ. ಅದು ಹೊರಗಿನಿಂದ ಬಂದುದಲ್ಲ, ಬದಲಿಗೆ ತನ್ನದೇ ಮನಸ್ಸಿನ ಯೋಚನೆ ಎಂದು ತಿಳಿಯುತ್ತಾನೆ. ಹೀಗಾಗಿ, ಸೋಹನ್‌ಲಾಲ್‌ ಆಕೆ ಚೆಕ್‌ ಬರೆಯುವಂತೆ ಹೇಳಿದಾಗ, ಅದು ತನ್ನದೇ ಯೋಚನೆ ಎಂದು ಅವರಿಗೆ ಚೆಕ್‌ ಬರೆದು ಕೊಟ್ಟಿ¨ªಾನೆ. ಚೆನ್ನೈನಲ್ಲಿ ಕೂಡ ಹೀಗೇ ಆಗಿದೆ. ಅಷ್ಟೇ ಅಲ್ಲ , ಮುಂದೆ ಇದೇ ರೀತಿಯ ಘಟನೆಗಳು ಮರುಕಳಿಸುತ್ತವೆ. ಇಂಥಾದ್ದೊಂದು ಕೈಯಲ್ಲಿ ಹಿಡಿಯುವ ಗಾತ್ರದ ಫ್ರೀಕ್ವೆನ್ಸಿ ಜನರೇಟರ್‌ ಅವನು ತಯಾರಿಸಿ¨ªಾನೆಂದರೆ ಅವನು ಅತಿ ಬುದ್ಧಿವಂತ, ಆದರೆ ಕ್ರಿಮಿನಲ್‌ ಬುದ್ಧಿಯವನಿರಬೇಕು. ಆ ಹೆಂಗಸು ಕೊಡುವ ವಿಸಿಟಿಂಗ್‌ ಕಾರ್ಡು ಒಂದು ರೀತಿಯ ಮತ್ತೇರಿಸುತ್ತದೆ. ನಂತರ ಅವನು ತನ್ನ ಎದುರಿರುವ ವ್ಯಕ್ತಿಯ ಮಿದುಳಿನ ಫ್ರೀಕ್ವೆನ್ಸಿ ಅಳೆದು ಅದಕ್ಕೆ ತಕ್ಕಂತೆ ತರಂಗಗಳನ್ನು ತನ್ನ ಪುಟ್ಟ ಉಪಕರಣದಿಂದ ಹರಿಯಬಿಡುತ್ತಾನೆ. ಈ ತಕ್ಷಣ ಅವರನ್ನು ಹುಡುಕಿಸಿ ಅರೆಸ್ಟ್‌ ಮಾಡಿಸಿ. ಆತನನ್ನು, ಆತನ ಮುಂದಿನ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಆತ ಇನ್ನೂ ಮುಂದುವರಿದು ಇನ್ನೂ ಹೆಚ್ಚು ಶಕ್ತಿಶಾಲಿಯಾದ ಫ್ರೀಕ್ವೆನ್ಸಿ ಜನರೇಟರ್‌ ತಯಾರಿಸಿ ಅದರಿಂದ ಒಂದು ಜನಸಮೂಹದ ಮಿದುಳನ್ನೂ ತಮಗೆ ಬೇಕಾದಂತೆ ಪರಿವರ್ತಿಸಬಲ್ಲ. ಅಪರಾಧಕ್ಕೆ ಇಂಥ ಇನ್ನೂ ಹಲವು ಹೊಸ ಆವಿಷ್ಕಾರಗಳನ್ನು ಅವನು ಮಾಡಬಹುದು”
“”ಆದರೆ ಸರ್‌…” ವರ್ಮಾ ಮಧ್ಯೆ ಮಾತಾಡಿದರು.

“”ನನಗೆ ಗೊತ್ತು. ಇವನೇನು ಮೊದಲನೆಯವನಲ್ಲ. ಇಂಥ ಉಪಕರಣ ತಯಾರಿಸಿರುವವನು. ಆದರೆ ಮನುಷ್ಯರ ಮಿದುಳಿನ ಫ್ರೀಕ್ವೆನ್ಸಿಯನ್ನು ಕ್ಷಿಪ್ರವಾಗಿ ಅಳೆದು, ಅದಕ್ಕೆ ಸಮಾನಾಂತರ ತರಂಗಗಳನ್ನು ಸೃಷ್ಟಿಸುವ ಜನರೇಟರ್‌ ತಯಾರಿಸಿದವರಲ್ಲಿ ಇವನೇ ಮೊದಲಿಗ. ಜೊತೆಗೆ ಸಾಮಾನ್ಯವಾಗಿ ಆಲ್ಫಾ ಹಂತದಲ್ಲಿರುವ ಮನುಷ್ಯನ ಮಿದುಳಿನ ತರಂಗಗಳನ್ನು ವೇಗವಾಗಿ ತೀಟಾ ಹಂತಕ್ಕೆ ಪರಿವರ್ತಿಸಿಬಿಡುತ್ತಾನೆ. ತೀಟಾ ಹಂತದಲ್ಲಿರುವ ಮಿದುಳು ಮಗುವಿನಂತೆ ಯಾವುದಕ್ಕೂ ಪ್ರತಿರೋಧ ತೋರಿಸುವುದಿಲ್ಲ. ಅದಕ್ಕೇ ಎದುರಾಳಿ ಸಮ್ಮೊàಹಿನಿಯಲ್ಲಿರುವಂತೆ ವರ್ತಿಸುತ್ತಾನೆ”
“”ವರ್ಮಾರವರ ಸುದೀರ್ಘ‌ ಮಾತುಗಳನ್ನು ಕೇಳಿದ ದೀಪಕ್‌ ಬಾಯಿಂದ ಮಾತೇ ಹೊರಡಲಿಲ್ಲ. ವಿಜ್ಞಾನವನ್ನು ಹೀಗೆÇÉಾ ಬಳಸಿಕೊಳ್ಳಬಹುದು ಎನ್ನುವುದು ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಆದರೆ, ಅದನ್ನು ಸಾಧ್ಯವಾಗಿಸಿದ್ದ ಆ ಖದೀಮ! ಚತುರ! ಅದನ್ನೇ ಆತ ಮಾನವ ಪ್ರಗತಿಗೆ, ದೇಶದ ಉನ್ನತಿಗಾಗಿ ಬಳಸಿದ್ದರೆ ಶ್ರೇಷ್ಠ ವಿಜ್ಞಾನಿಯಾಗುತ್ತಿದ್ದ. ಆದರೆ ಈಗ ಅಪರಾಧಿ. ಲ್ಯಾಬಿನಲ್ಲಿ ಕಾಲ ಕಳೆಯಬೇಕಾದವನು ಜೈಲಿನಲ್ಲಿ ಕಾಲ ಕಳೆಯುತ್ತಾನೆ. ಎಂಥ ಮೇಧಾವಿಗೆ ಎಂಥ ಸ್ಥಿತಿ?”

ವರ್ಮಾರವರಿಗೆ ಕೃತಜ್ಞತೆ ಹೇಳುವುದನ್ನೂ ಮರೆತು ಆ ಫ್ರೀಕ್ವೆನ್ಸಿ ಜನರೇಟರ್‌ ಸೃಷ್ಟಿಕರ್ತನ ಬಗೆಗೆ ಚಿಂತಿಸುತ್ತಿದ್ದ ದೀಪಕರನ್ನು ಮತ್ತೆ ಎಚ್ಚರಿಸಿದರು ವರ್ಮಾ.

“”ನಾನು ಹೇಳಿದ್ದು ಗೊತ್ತಾಯಿತೆ ಇನ್ಸ್‌ಪೆಕ್ಟರ್‌? ತಡ ಮಾಡಬೇಡಿ. ಅವನನ್ನು ಬಂಧಿಸಿ. ಆಕೆಗಿಂತ ಅವನು ಅಪಾಯಕಾರಿ”
“”ಷೂರ್‌ ಸರ್‌. ಈ ಕೇಸನ್ನ ಇಷ್ಟು ಸುಲಭವಾಗಿ ಸಾಲ್‌Ì ಮಾಡಿದ್ದಕ್ಕೆ ಧನ್ಯವಾದಗಳು. ಅವರನ್ನು ಅರೆಸ್ಟ್‌ ಮಾಡಲು ಈಗಾಗಲೇ ಬಲೆ ಬೀಸಿದ್ದೇನೆ. ಆಗಲೋ ಈಗಲೂ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಾರೆ”
“”ಗುಡ್‌” ವರ್ಮಾರ ಮಾತಿನೊಂದಿಗೇ ಅವರ ಚಿತ್ರ ಮೂಡಿದ್ದ ತೆರೆ ಖಾಲಿಯಾಯಿತು. 
ನಿಟ್ಟುಸಿರಿಟ್ಟು ದೀಪಕ್‌ ಎದ್ದು ತಮ್ಮ ಟೇಬಲ್ಲಿಗೆ ಬಂದು ಫೋನು ಕೈಗೆತ್ತಿಕೊಂಡರು.

– ಎಸ್‌. ಜಿ. ಶಿವಶಂಕರ್‌

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.