ಹಣ ಹಿಂಪಡೆಯಲು ವಿಧಿಸಿರುವ ಮಿತಿ ವಾಪಸ್ ಪಡೆಯಿರಿ: ಐವನ್
Team Udayavani, Jan 15, 2017, 3:45 AM IST
ಮಂಗಳೂರು: ಜನರು ತಮ್ಮ ಖಾತೆಗಳಿಂದ ಹಣ ಪಡೆಯಲು ವಿಧಿಸಿರುವ ಮಿತಿಯನ್ನು ಪ್ರಧಾನಮಂತ್ರಿ ತತ್‌ಕ್ಷಣ ಹಿಂಪಡೆದುಕೊಳ್ಳಬೇಕು. ಜನರಿಗೆ ಅವಶ್ಯವಿರುವಷ್ಟು ಹಣ ಹಿಂಪಡೆಯಲು ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಆಗ್ರಹಿಸಿದ್ದಾರೆ.
ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪನಗದೀಕರಣ ಮಾಡಿ 64 ದಿನಗಳು ಕಳೆದರೂ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಎಲ್ಲ ರಂಗಗಳಲ್ಲಿಯೂ ವ್ಯವಹಾರ ಕುಸಿತಗೊಂಡಿದೆ. ಕೂಲಿ ಕಾರ್ಮಿಕರಿಗೆ ಸಂಬಳ ಸಿಗದೇ ಪರದಾಡುವಂತಾಗಿದೆ. ಅನೇಕ ಸಣ್ಣ ವ್ಯಾಪಾರಸ್ಥರು ಬಾಗಿಲು ಮುಚ್ಚಿದ್ದಾರೆ ಎಂದರು.
ಜನಧನ್ ಸೇರಿದಂತೆ ಯಾವುದೇ ಖಾತೆಗಳಿಂದಲೂ ಪಾನ್ ಕಾರ್ಡ್ ನೀಡದಿದ್ದಲ್ಲಿ ಹಣ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಹಣ ಪಡೆಯಲು ಹಾಕಿದ ಮಿತಿ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಸತೀಶ್ ಪೆಂಗಾಲ್, ಅಬೂಬಕ್ಕರ್ ಜಪ್ಪು, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ