ಸುಪ್ರೀಂ ಆದೇಶ ಧಿಕ್ಕರಿಸಿ ಜಲ್ಲಿಕಟ್ಟು
Team Udayavani, Jan 15, 2017, 8:51 AM IST
ಮಧುರೈ: ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸಂಕ್ರಾಂತಿ ದಿನವಾದ ಶನಿವಾರದಂದು ತಮಿಳುನಾಡಿನ ಮಧುರೈನ ನಾಲ್ಕು ಕಡೆ ಜಲ್ಲಿಕಟ್ಟು ನಡೆಸಲಾಗಿದೆ. ಇದೇ ವೇಳೆ ಜಲ್ಲಿಕಟ್ಟುಗೆ ಅನು ಮತಿ ನೀಡುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿ ಸಾರ್ವ ಜನಿಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಸಂಬಂಧ 149 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಲ್ಲಿಕಟ್ಟು ನಿಷೇಧಿಸಿರುವ ಸುಪ್ರೀಂ ಕೋರ್ಟ್, ಅದಕ್ಕೆ ಸಂಬಂಧಿಸಿದ ಅರ್ಜಿಯೊಂದರ ತೀರ್ಪನ್ನು ಸಂಕ್ರಾಂತಿಯೊಳಗೆ ಪ್ರಕ ಟಿಸಲು ನಿರಾಕರಿಸಿತ್ತು. ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದ ಜನರು ಮಧುರೈನ ಆವನಿಯಪುರಂ, ಮೇಲೂರು, ಕುರುವನಂಕುಲಂ ಹಾಗೂ ಪೊತಂಬೂರಿನಲ್ಲಿ ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಜಲ್ಲಿಕಟ್ಟು ನಡೆಸಿದರು.
ಮಧುರೈನ ನಾಲ್ಕು ಸ್ಥಳಗಳಲ್ಲಿ ತಲಾ 30ರಿಂದ 40 ಮಂದಿ 10 ಗೂಳಿಗಳ ಜತೆ ಜಲ್ಲಿಕಟ್ಟು ನಡೆಸಿ ದರು. ಈ ವೇಳೆ ಆವನಿಯಪುರಂ ನಲ್ಲಿ 7 ಹಾಗೂ ಮೇಲೂರಿನಲ್ಲಿ 22 ಮಂದಿಯನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಈ ನಡುವೆ, ಜಲ್ಲಿಕಟ್ಟು ನಡೆದಿದೆ ಎಂಬ ವರದಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ.
ಮದುರೈ ಭಾಗದಲ್ಲಿ ಸಾಂಪ್ರ ದಾಯಿಕವಾಗಿ ಮೊದಲು ಆವನಿ ಯಪುರಂನಲ್ಲಿ ಸಂಕ್ರಾಂತಿ ದಿನ ಜಲ್ಲಿಕಟ್ಟು ಚಾಲನೆ ಪಡೆದುಕೊಳ್ಳು ತ್ತದೆ. ನಂತರ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.