ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಡಜನ್ ಕನ್ನಡ ಸಿನಿಮಾ
Team Udayavani, Jan 15, 2017, 11:59 AM IST
ಫೆಬ್ರವರಿ 2 ರಿಂದ 9 ರವರೆಗೆ ನಡೆಯಲಿರುವ ಒಂಭತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಕನ್ನಡದ ಹನ್ನೆರೆಡು ಸಿನಿಮಾಗಳು ಆಯ್ಕೆಯಾಗಿವೆ. ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿ ಹೊಸಬರ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕರ ಸಿನಿಮಾಗಳು ಪಾಲ್ಗೊಳ್ಳುತ್ತಿವೆ. ಈ ಹನ್ನೆರೆಡು ಸಿನಿಮಾಗಳನ್ನು ವೀಕ್ಷಿಸಲಿರುವ ಜ್ಯೂರಿ ಅಂತಿಮವಾಗಿ ಒಂದು ಚಿತ್ರವನ್ನು ಆಯ್ಕೆ ಮಾಡಲಿದೆ. ಜ್ಯೂರಿ ಆಯ್ಕೆ ಮಾಡಿದ ಚಿತ್ರವನ್ನು ವಿಜೇತ ಚಿತ್ರ ಎಂದು ಘೋಷಿಸಲಾಗುತ್ತದೆ.
ಅಂದಹಾಗೆ, ಫೆಬ್ರವರಿಯಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿರ್ದೇಶಕ ಆರ್.ಮಹಂತೇಶ್ ನಿರ್ದೇಶನದ “6 “3′ ಎಂಬ ಚಿತ್ರ ಪ್ರದರ್ಶನವಾಗಲಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ಹಾಗೂ ನವೀನ್ ಕೃಷ್ಣ ಅಭಿನಯದ “ಆ್ಯಕ್ಟರ್’, ಅಮರದೇವ ನಿರ್ದೇಶಿಸಿರುವ “ಅಲೆಮಾರಿಯ ಆತ್ಮಕಥೆ’, ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಬೆಕ್ಕು’, ಸಬಾಸ್ಟಿನ್ ಡೇವಿಡ್ ನಿರ್ದೇಶಿಸಿರುವ “ಧ್ವನಿ’, ಕನ್ನಡ ಚಿತ್ರರಂಗದಲ್ಲಿ ಹೊಸತನದ ಚಿತ್ರ ಎನಿಸಿಕೊಂಡ ಹೇಮಂತ್ ರಾವ್ ನಿರ್ದೇಶನದ ರಕ್ಷಿತ್‌ಶೆಟ್ಟಿ ಹಾಗೂ ಅನಂತ್‌ನಾಗ್ ಅಭಿನಯದ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಅರವಿಂದ್ ಶಾಸಿŒ ನಿರ್ದೇಶನದ “ಕಹಿ’, ಸಾಲೋಮನ್ ಕೆ.ಜಾರ್ಜ್ ನಿರ್ದೇಶಿಸಿರುವ “ಕಂದ’, ಸುಮನಾ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’, ರಘು ನಿರ್ದೇಶನದ “ಪಲ್ಲಟ’, ಹೊಸ ತಂಡ ಕಟ್ಟಿಕೊಂಡು ಹೊಸತನ ಇಟ್ಟುಕೊಂಡು ಮೂಡಿಬಂದ ಡಿ. ಸತ್ಯಪ್ರಕಾಶ್ ನಿರ್ದೇಶನದ “ರಾಮಾ ರಾಮಾ ರೇ’ ಹಾಗೂ ಬಿ.ಸುರೇಶ ನಿರ್ದೇಶನ “ಉಪ್ಪಿನ ಕಾಗದ’ ಚಿತ್ರಗಳು ಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದು, ಪ್ರದರ್ಶನ ಕಾಣಲಿವೆ.
ಜ್ಯೂರಿ ಈ ಎಲ್ಲಾ ಚಿತ್ರಗಳನ್ನು ವೀಕ್ಷಿಸಿ, ಒಂದು ಚಿತ್ರವನ್ನು ವಿಜೇತ ಚಿತ್ರವೆಂದು ಘೋಷಿಸಲಿದ್ದಾರೆ. ಯಾವ ಚಿತ್ರ ಸ್ಪರ್ಧೆಯಲ್ಲಿ ಗೆಲುವು ಪಡೆದುಕೊಳ್ಳುತ್ತೆ ಎಂಬುದೇ ಎಲ್ಲರಲ್ಲಿರುವ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಚಿತ್ರೋತ್ಸವದಲ್ಲೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.