ಈ ಗೆಂಡೆತಿಮ್ಮನಿಗೆ ಪರಸಂಗ ಇಲ್ಲ…!
Team Udayavani, Jan 16, 2017, 11:13 AM IST
ರಮೇಶ್ ಕಶ್ಯಪ್ ಇನ್ನೊಂದು ಚಿತ್ರವನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ಆ ಚಿತ್ರದ ಹೆಸರು “ಗೆಂಡೆತಿಮ್ಮ’. “ಗೆಂಡೆತಿಮ್ಮ’ ಎಂದರೆ ನೆನಪಿಗೆ ಬರುವುದು ಆಲನಹಳ್ಳಿ ಕೃಷ್ಣ ಅವರ “ಪರಸಂಗದ ಗೆಂಡೆತಿಮ್ಮ’ ಕಾದಂಬರಿ ಮತ್ತು ಅದನ್ನು ಆಧರಿಸಿದ ಲೋಕೇಶ್ ಅಭಿನಯದ ಚಿತ್ರ. ಆ “ಪರಸಂಗದ ಗೆಂಡೆತಿಮ್ಮ’ನಿಗೂ, ಈ “ಗೆಂಡೆತಿಮ್ಮ’ನಿಗೂ ಯಾವುದೇ ಸಂಬಂಧವಿಲ್ಲವಂತೆ.
ಈ ಚಿತ್ರದ ಕಥೆಗೆ “ಗೆಂಡೆತಿಮ್ಮ’ ಎನ್ನುವ ಹೆಸರು ಸೂಕ್ತ ಎನ್ನುವ ಕಾರಣದಿಂದ ಆ ಹೆಸರನ್ನು ಇಡಲಾಗಿದೆ. ಅಂದಹಾಗೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವವರು ಕೆ.ಎಂ. ರಘು. ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂಬ ಅನುಮಾನ ಬೇಡ. ಇತ್ತೀಚೆಗೆ ಬಿಡುಗಡೆಯಾಯಿತಲ್ಲ, “ತರೆಲ ವಿಲೇಜ್’ ಎಂಬ ಚಿತ್ರ.
ಆ ಚಿತ್ರದ ನಿರ್ದೇನವನ್ನು ಮಾಡಿದ್ದು ಇದೇ ರಘು. ಈಗ ರಘು, “ಗೆಂಡೆತಿಮ್ಮ’ ಚಿತ್ರದ ಮೂಲಕ ವಾಪಸ್ಸು ಬರುತ್ತಿದ್ದಾರೆ. “ಗೆಂಡೆತಿಮ್ಮ’, ರಮೇಶ ಕಶ್ಯಪ್ ನಿರ್ದೇಶನದ ಒಂಬತ್ತನೇ ಚಿತ್ರವಾಗಲಿದೆ. ಸದ್ಯಕ್ಕೆ ಈ ಚಿತ್ರಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಎಲ್ಲಾ ಪಕ್ಕಾ ಆಗುತ್ತಿದ್ದಂತೆಯೇ ಚಾಲನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.