ವಿದ್ಯಾರ್ಥಿಗಳಿಂದ ಸಾಹಸ ಕಲೆಗಳ ಪ್ರದರ್ಶನ


Team Udayavani, Jan 16, 2017, 2:41 PM IST

699_1.jpg

ಚಿಕ್ಕಬಳ್ಳಾಪುರ: ಒಲಂಪಿಕ್ಸ್‌ ಕ್ರೀಡಾಕೂಟ ನೆನಪಿಸಿದ ವರ್ಣರಂಜಿತ ಪಥ ಸಂಚಲನ, ಮೈನವಿರೇಳಿಸುವ ಕುದುರೆ ಸವಾರಿ, ಬೆರಗುಗೊಳಿಸಿದ ಬೈಕ್‌ ಸವಾರಿ, ವಿಸ್ಮಯಗೊಳಿಸಿದ ಪ್ಯಾರಾಮೋಟಾರ್‌ ವಾಯುಕ್ರೀಡೆ. ಎಲ್ಲರ ಮನಗೆದ್ದ ರೋಲರ್‌ ಸ್ಕೇಟ್‌, ಸ್ಕೇಟ್‌ ಬೋರ್ಡ್‌, ವೇವ್‌ಬೋರ್ಡ್‌… ಇಂತಹ ಸಂಭ್ರಮೋಲ್ಲಾಸ, ಸಾಹಸ, ಶೌರ್ಯ, ಶಕ್ತಿ ಯುಕ್ತಿಗಳ, ಕಲೆ ಕೌಶಲ್ಯಗಳ ವೈಭವೋಪೇತ ಕಾರ್ಯಕ್ರಮ ಮೈದಳೆದು ಮನಮೋಹಕ ಕ್ಷಣಗಳಿಗೆ ಸಾಕ್ಷಿಯಾಯಾಗಿದ್ದು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸಮಾಗಾಮ ಕ್ರೀಡಾಂಗಣದಲ್ಲಿ.

ಮಕ್ಕಳ ಸಾಹಸಗಾಥೆಗೆ ಬೆರಗಾದ ಜನ: ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆರಂಭಗೊಂಡ ನಾಲ್ಕು ದಿನಗಳ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳ 43ನೇ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಎಳೆ ವಯಸ್ಸಿನಲ್ಲಿಯೇ ಲೋಕೋತ್ತರ ಕೀರ್ತಿ ಸಂಪಾದನೆಯ ಸಾಹಸ ಕಲೆಗಳ ಪ್ರದರ್ಶನ ನೀಡಿದ ಸಂಸ್ಥೆಯ ಮಕ್ಕಳ ಸಾಹಸಗಾಥೆಯನ್ನು ಕಂಡ ಪೋಷಕರು, ಅತಿಥಿಗಳು ಬೆಕ್ಕಸ ಬೆರಗಾದರು. ಲೋಕಸೇವಾ ಶಿಕ್ಷಣ ಸಂಸ್ಥೆಗಳ 3000 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ತಮ್ಮ ಸಹಸ ಕಲೆಗಳನ್ನು ಪ್ರದರ್ಶಿಸಿದರು. 

ಸಭಿಕರ ವಿಸ್ಮಯಗೊಳಿಸಿದ ಸಾಹಸ ಪ್ರದರ್ಶನ: ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಬಾ ಅವರು ನೀಡಿದ ಧ್ಯೇಯ ವಾಕ್ಯ “ಜೀವನ ಒಂದು ಆಟ, ಅದನ್ನು ಉತ್ಸಾಹದಿಂದ ಆಡಿ ಆನಂದಿಸಿರಿ’ ಎಂಬ ಮಾತನ್ನು ನಿಜಾರ್ಥದಲ್ಲಿ ಮಾಡಿ ತೋರಿಸಿದರು. ವಿದ್ಯಾರ್ಥಿಗಳ ಕೆಚ್ಚು, ಸಮತೋಲನ, ಸ್ಥಿರವಾದ ಆತ್ಮ ವಿಶ್ವಾಸಗಳು ಕಿಂಚಿತ್ತೂ ಅನುಮಾನವಿಲ್ಲದ ಹಾಗೆ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಗೊಂಡವು. ಕ್ರೀಡಾಜ್ಯೋತಿಯನ್ನು ಹಲವಾರು ಅಡಿ ಎತ್ತರದ ಬೆಟ್ಟದ ತುದಿಗೆ ತಲುಪಿಸಿದ ಜ್ಯೋತಿ ವಾಹನ ಐರಾವತ ಗಮನ ಸೆಳೆಯಿತು. 90 ಅಡಿಗಳ ಎತ್ತರದಲ್ಲಿ ವಿದ್ಯಾರ್ಥಿಗಳು ಮಾಡಿದ ಹಾಟ್‌ಏರ್‌ ಬಲೂನ್‌ ಕಸರತ್ತು ಮತ್ತು 1000 ಅಡಿ ಎತ್ತರದಲ್ಲಿ ಮಾಡಿದ ಪ್ಯಾರಾಮೋಟಾರ್‌ ವಾಯುಕ್ರೀಡೆಗಳು ಸಭಿಕರನ್ನು ವಿಸ್ಮಯಗೊಳಿಸಿದವು.

ಜನಮನ ಸೆಳೆದ ಸಾಹಸ ಕ್ರೀಡೆಗಳು: ವಿದೇಶಿ ಕಲೆಯಾದ ಸಿಂಹ ನೃತ್ಯವನ್ನು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪರಿ ಅದ್ಭುತವಾಗಿತ್ತು. ಮೈನವಿರೇಳಿಸುವ ಕುದುರೆ ಸವಾರಿಯನ್ನು ಪ್ರದರ್ಶಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ಕೌತುಕದ ಹೊಸ ಲೋಕವನ್ನೇ ಸೃಷ್ಟಿಸಿದ್ದರು. ವಿಶ್ವಮಾನ್ಯತೆ ಪಡೆದ ಒಂಬತ್ತು ರಾಷ್ಟ್ರಗಳ ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಪ್ರದರ್ಶಿಸಿದ ಕ್ರಿಕೆಟ್‌ ಪ್ರದರ್ಶನ ವಿಶ್ವಕಪ್‌ ಪಂದ್ಯಾವಳಿಯನ್ನು ನೆನಪಿಸುವಂತಿತ್ತು. ಕಿರಿಯ ಬಾಲಕರು ಪ್ರದರ್ಶಿಸಿದ ರೋಲರ್‌ ಸ್ಕೇಟ್‌, ಸ್ಕೇಟ್‌ ಬೋರ್ಡ್‌, ವೇವ್‌ಬೋರ್ಡ್‌ ಜನಮನ ಸೆಳೆಯಿತು.

ಆಕರ್ಷಕ ನೃತ್ಯ: ಬ್ರೆಜಿಲ್‌ ಆಧ್ಯಾತ್ಮಿಕ ಧ್ಯಾನ ಕಲೆ ತೈಚಿ ಪ್ರದರ್ಶನ, ಮಲ್ಲಕಂಬ, ಬಾಸ್ಕೆಟ್‌ ಬಾಲ್‌ ಕೌಶಲ್ಯ, ಜಾಂಜ್‌ಪಥಕ್‌ ಜಾನಪದ ನೃತ್ಯ, ಕಾಳಿಂಗ ಮರ್ದನ ನೃತ್ಯ, ಭಾರತ ಮಾತಾ ನೃತ್ಯರೂಪಕ, ಟ್ರಾಂಪೋಲಿನ್‌ ಮೊದಲಾದ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು. ಬೈಕ್‌ ಸವಾರಿ, ಅಗ್ನಿ ಚಕ್ರದ ಮಧ್ಯೆ ನುಗ್ಗಿ ನೆಗೆದು ಮುಂದಕ್ಕೆ ಸಾಗುವ ದೃಶ್ಯ ನೆರೆದಿದ್ದ ಸಾವಿರಾರು ಮಂದಿಯನ್ನು ಬೆರಗುಗೊಳಿಸಿದವು. 

ಕ್ರೀಡಾ ಹಾಗೂ ಸಾಂಸ್ಕೃತಿಕ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಎಂ.ಪ್ರಮೋದ್‌ ಮಧ್ವರಾಜ್‌, ಒಲಂಪಿಕ್‌ ಕ್ರೀಡಾಳು ಜೂಡ್‌ ಫಿಲಿಕ್ಸ್‌, ರಾಷ್ಟ್ರೀಯ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತ ರಂಜನ್‌ ಸೋಧಿ, ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಸಂಸ್ಥೆಯ ಕಾರ್ಯದರ್ಶಿ ಬಿ.ನಾರಾಯಣರಾವ್‌, ಮುಖ್ಯ ಮಾರ್ಗದರ್ಶಿ ಬಿ.ಎನ್‌.ನರಸಿಂಹಮೂರ್ತಿ, ಕರಾಯ ಸಂಜೀವ ಶೆಟ್ಟಿ, ಮಹೇಂದ್ರ ಹೆಗ್ಡೆ, ಎಚ್‌.ರಮಾನಂದ, ಡಾ.ರಮೇಶರಾವ್‌ ಉಪಸ್ಥಿತರಿದ್ದರು.

ಧನಾತ್ಮಕ ಮನೋಭಾವನೆಯಿಂದ ದೇಹ, ಮನಸ್ಸು, ಹೃದಯಗಳನ್ನು ಒಂದಾಗಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯನ್ನು ಆರಂಭಿಸಿದರೆ ವ್ಯಕ್ತಿಗತವಾಗಿ ಸುಖ, ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ. ಅಲ್ಲದೇ, ಸುತ್ತಮುತ್ತಲಿನವರಿಗೆ ಹಾಗೂ ದೇಶಕ್ಕೆ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಕಲಿಸಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ.
-ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ 

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.