ಭಾರತೀಯ ಫೇಸ್ ಬುಕ್ ಘಟಕದ 2016ರ ನಿವ್ವಳ ಲಾಭ ಶೇ.48.4 ಏರಿಕೆ
Team Udayavani, Jan 17, 2017, 11:29 AM IST
ಹೊಸದಿಲ್ಲಿ : ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ವಿಶ್ವ ವಿಖ್ಯಾತ ಫೇಸ್ ಬುಕ್ ಇಂಕ್ ಇದರ ಭಾರತೀಯ ಉಪ ಸಂಸ್ಥೆಯಾಗಿರುವ ಫೇಸ್ ಬುಕ್ ಇಂಡಿಯಾ ಆನ್ಲೈನ್ ಸರ್ವಿಸಸ್ ಸಂಸ್ಥೆಯ ನಿವ್ವಳ ಲಾಭವು 2016ರ ಹಣಕಾಸು ವರ್ಷದಲ್ಲಿ ಶೇ.48.4ರಷ್ಟು ಏರಿದ್ದು 31 ಕೋಟಿ ರೂ.ಗಳಲ್ಲಿ ದಾಖಲಾಗಿದೆ. ಈ ಅವಧಿಯಲ್ಲಿ ಕಂಪೆನಿಯ ಆದಾಯವು ಶೇ.30.5ರಷ್ಟು ಏರಿದ್ದು 177 ಕೋಟಿ ರೂ.ಗಳಲ್ಲಿ ದಾಖಲಾಗಿದೆ.
2016ರ ಹಣಕಾಸು ವರ್ಷದಲ್ಲಿ ಫೇಸ್ ಬುಕ್ ಭಾರತೀಯ ಕಂಪೆನಿಯ ಜಾಹೀರಾತು ಪ್ರಚಾರ ವೆಚ್ಚವು ಶೇ.84ರಷ್ಟು ಏರಿದ್ದು ಅದು 16.9 ಕೋಟಿ ರೂ.ಗಳಲ್ಲಿ ದಾಖಲಾಗಿದೆ. ಇದೇ ವೇಳೆ ನೌಕರರ ವೇತನದಲ್ಲಿ ಶೇ.26ರಷ್ಟು ಏರಿಕೆಯಾಗಿದ್ದು ಅದು 40 ಕೋಟಿ ರೂ.ಗಳಲ್ಲಿ ದಾಖಲಾಗಿದೆ.
ಫೇಸ್ ಬುಕ್ ಗೆ ಭಾರತದಲ್ಲಿ 16.6 ಕೋಟಿ ಮಾಸಿಕ ಸಕ್ರಿಯ ಬಳಕೆದಾರರು ಇದ್ದಾರೆ. ಈ ಪೈಕಿ 15.90 ಕೋಟಿ ಬಳಕೆದಾರರರು ಮೊಬೈಲ್ ಫೋನ್ಗಳ ಮೂಲಕವೇ ಫೇಸ್ ಬುಕ್ ಸಂಪರ್ಕ ಹೊಂದಿರುತ್ತಾರೆ. ಈ ಪೈಕಿ 8.5 ಕೋಟಿ ಬಳಕೆದಾರರು ಸಕ್ರಿಯರಾಗಿದ್ದಾರೆ. ಫೇಸ್ ಬುಕ್ ನ ಭಾರತೀಯ ಉಪ ಸಂಸ್ಥೆಯನ್ನು 2010ರ ಮೇ 7ರಂದ ಸ್ಥಾಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.