ಈರುಳ್ಳಿ ಗುಣ ತಿಳ್ಕೊಳ್ರಿ…
Team Udayavani, Jan 18, 2017, 3:45 AM IST
ಈರುಳ್ಳಿಯನ್ನು ತಿಂಡಿ ಜೊತೆಗೋ, ಊಟದ ಜೊತೆಗೋ ತಿನ್ನೋರಿದ್ದಾರೆ, ಆದರೆ ಬರೀ ಈರುಳ್ಳಿ ತಿನ್ನುವವರು ಕಡಿಮೆ. ಹಸಿ ಈರುಳ್ಳಿ ಸೇವನೆಯಿಂದ ಬಹಳ ಪ್ರಯೋಜನಗಳಿವೆ ಅಂತ ಆಯುರ್ವೇದದಲ್ಲಿ ಹೇಳಿದೆ. ಆ ಪ್ರಯೋಜನಗಳು ಯಾವುವು ಮತ್ತು ಈರುಳ್ಳಿಯ ಸೇವನೆ ಯಾವ ರೀತಿ ಇರಬೇಕು ಅನ್ನೋ ಮಾಹಿತಿ ಇಲ್ಲಿದೆ.
ಈರುಳ್ಳಿಯು ಪಿತ್ತಹರ ಕಫಹರ. ಈರುಳ್ಳಿಯ ಬೀಜ ವಾತಹರ. ಇದು ರಜಸ್ ಮತ್ತು ತಮೋಗುಣವನು ವೃದ್ಧಿಸುತ್ತದೆ. ಈರುಳ್ಳಿಯಲ್ಲಿ ಶರ್ಕರಪಿಷ್ಟ , ಪ್ರೊಟೀನ್, ಕ್ಯಾಲಿÏಯಂ, ಕಬ್ಬಿಣ ಸಣ್ತೀ , ಜೀವಸತ್ವ ಎಬಿಸಿಗಳನ್ನು ಹೊಂದಿದೆ.
1. ಈರುಳ್ಳಿ 2 ಚಮಚಕ್ಕೆ 2 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಧಿಕ ರಕ್ತದೊತ್ತಡ ಶಮನವಾಗುತ್ತದೆ.
2. ನೆಗಡಿ, ಕೆಮ್ಮು ಕಫಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ ನೆಗಡಿ, ಕೆಮ್ಮು ಕಫ ಶಮನವಾಗುತ್ತದೆ.
3. ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ ನಿವಾರಣೆಯಾಗುತ್ತದೆ. ಇದು ರಕ್ತವರ್ಧಕವೂ ಹೌದು.
4. ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
5. ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
6. ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
7. ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಆರಿದ ಬಳಿಕ ಕಾಳುಮೆಣಸಿನ ಹುಡಿ, ಜೇನು ಬೆರೆಸಿ ಸೇವಿಸಿದರೆ ಕೆಮ್ಮು ದಮ್ಮು ಶಮನವಾಗುತ್ತದೆ.
8. ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿ
ವೃದ್ಧಿಯಾಗುತ್ತದೆ.
9. ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ಶಮನವಾಗುತ್ತದೆ.
10. ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ.
11. ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
12. ಬಲಹೀನತೆ, ಅಶಕ್ತಿ ಇರುವಾಗ ಈರುಳ್ಳಿ ರಸ 3 ಚಮಚ, ತುಪ್ಪ 3 ಚಮಚ ಬೆರೆಸಿ ನಿತ್ಯ ಸೇವಿಸಿದರೆ ಬಲ್ಯ ಮತ್ತು ಶಕ್ತಿಕಾರಕ.
13. ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಸಮಸ್ಯೆ ಇರಲ್ಲ.
14. ಸುಣ್ಣದ ತಿಳಿನೀರು ಮತ್ತು ಈರುಳ್ಳಿ ರಸ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕಾಲರಾ ರೋಗ ಬೇಗ ವಾಸಿಯಾಗುತ್ತೆ.
15. ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್ ನಿತ್ಯ ಸೇವಿಸಿದರೆ ಮೂತ್ರದ ಸೋಂಕು ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.