ಸಂಗೀತ ಪಾಕ, ಲಾಸ್ಟ್‌ಬೆಂಚ್‌ಹುಡುಗಿಯ ಬೇಕಿಂಗ್‌, ಕುಕ್ಕಿಂಗ್‌ ಇತ್ಯಾದಿ


Team Udayavani, Jan 18, 2017, 3:45 AM IST

sangeeta.jpg

ಸಂಗೀತಾ ಭಟ್‌ ಗುರುಪ್ರಸಾದ್‌ ನಿರ್ದೇಶನದ “ಎರಡನೇ ಸಲ’ ಚಿತ್ರದ ನಾಯಕಿ. “ಪ್ರೀತಿಗೀತಿ ಇತ್ಯಾದಿ’, “ಮಾಮೂ ಟೀ ಅಂಗಡಿ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಜಯ ರಾಘವೇಂದ್ರ ಜೋಡಿಯಾಗಿ ನಟಿಸಿರುವ “ಕಿಸ್ಮತ್‌’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದಲ್ಲದೇ ಮಂಗಳೂರು ಟೀಂ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿರುವ ಈ ಮಂಗ್ಳೂರು ಹುಡುಗಿಗೆ ತನ್ನ ಶ್ರಮಕ್ಕೆ ತಕ್ಕ ಫ‌ಲ ದೊರೆತಿಲ್ಲ ಎಂಬ ಬೇಜಾರಿದೆ. ಶೂಟಿಂಗ್‌ನಲ್ಲೂ ಫ್ರೀ ಇದ್ದಾಗ ರುಚಿರುಚಿಯಾಗಿ ಅಡುಗೆ ಮಾಡೋ ಸಂಗೀತಾ ಕುಕ್ಕಿಂಗ್‌ ಎಕ್ಸ್‌ಪಟೂì ಹೌದು. 
*
“ಬಹುಶಃ ಅಪ್ಪ ಬದುಕಿದ್ದಿದ್ರೆ ನಾನು ಸಿನಿಮಾ ಫೀಲ್ಡ್‌ಗೆ ಬರಿ¤ರಲಿಲ್ಲ’ ಅಂದರು ಸಂಗೀತಾ. ಸಂಗೀತಾ ಅಪ್ಪ ತೀರಿ ಹೋಗಿ ಎಂಟು ವರ್ಷಗಳಾದವು. ಅವರ ಫ್ಯಾಮಿಲಿ ಮಂಗಳೂರು ಮೂಲದ್ದು. ಇವರ ಅಮ್ಮನಿಗೂ ನಟನೆಯ ಆಸಕ್ತಿ ಇತ್ತು. ಜೊತೆಗೆ ಅವರು ಒಂದೆರಡು ಚಿತ್ರಗಳಲ್ಲಿಯೂ ನಟಿಸಿದ್ದರು. ಆದರೆ ಮದುವೆಯ ನಂತರ ಅನಿವಾರ್ಯವಾಗಿ ನಟನೆಯಿಂದ ದೂರವುಳಿಯಬೇಕಾಯ್ತು. ಅಮ್ಮನ ನಟನೆಯ ಹುಚ್ಚು ಮಗಳಿಗೂ ಬಂದಿದೆ. ಮಗಳಿಗೆ ಅಮ್ಮನೇ ಸಪೋರ್ಟ್‌. ತಮ್ಮ ಕನಸನ್ನು ಅವರು ಮಗಳ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಪ್ಪ ಇರುತ್ತಿದ್ದರೆ ತನ್ನ ನಟನೆಯ ಬಯಕೆ ಈಡೇರುತ್ತಿತ್ತಾ ಅನ್ನೋ ಬಗ್ಗೆ ಸಂಗೀತಾಗೆ ಅನುಮಾನ ಇದೆ. ತಂದೆಗೆ ಮಗಳು ಅದ್ಬುತ ನೃತ್ಯಪಟುವಾಗಬೇಕು, ಆಕೆಯ ರಂಗ ಪ್ರವೇಶವನ್ನು ತಾನು ಕಣ್ಣಾರೆ ನೋಡಬೇಕು ಎಂಬ ಆಸೆಯಿತ್ತು. ಆದರೆ ಆರ್ಥಿಕ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಮಗಳು ತನ್ನ ಕನಸಿಗೆ ತಾನೇ ನೀರೆರೆಯುತ್ತಿದ್ದಾಳೆ. 

ಲಾಸ್ಟ್‌ ಬೆಂಚ್‌ ಹುಡ್ಗಿ
ಸ್ಕೂಲ್‌ನಲ್ಲಿದ್ದಾಗ ಸಂಗೀತಾ ಲಾಸ್ಟ್‌ ಬೆಂಚ್‌ ಹುಡುಗಿ. ಮಾತಲ್ಲೂ ಮುಂದೆ, ಕಲಿಯೋದ್ರಲ್ಲೂ ಮುಂದೆ, ಡಾನ್ಸ್‌, ಹಾಡು ಎಲ್ಲದರಲ್ಲೂ ಎತ್ತಿದ ಕೈ. ಆ ಸಮಯದಲ್ಲಿ ತಾನೊಬ್ಬ ನಟಿಯಾಗಬಹುದು ಅನ್ನುವ ಕನಸೂ ಈಕೆಗಿರಲಿಲ್ಲವಂತೆ. ಆದರೆ ಆಗಿನಿಂದಲೇ ಒಂದು ಅಭ್ಯಾಸ ಇತ್ತು. ಸಿನಿಮಾಗೆ ಹೋದರೆ ಎಲ್ಲರೂ ಕತೆಯ ಬಗ್ಗೆ ಗಮನ ಕೊಡುತ್ತಿದ್ದರೆ ಈಕೆಯ ಕಣ್ಣು ಕಲಾವಿದರೆ ನಟನೆಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅದನ್ನು ಈಗಲೂ ಮುಂದುವರಿಸಿದ್ದಾರೆ. ಈ ಸೂಕ್ಷ್ಮ ಗಮನಿಸುವಿಕೆಯಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ಸಂಗೀತಾ. 

ಶೂಟಿಂಗ್‌ ಇಲ್ದಿದ್ರೆ ಕುಕ್ಕಿಂಗ್‌
ಶೂಟಿಂಗ್‌ ಇಲ್ಲದ ದಿನ ಸಂಗೀತಾ ಕುಕ್ಕಿಂಗ್‌ನಲ್ಲಿ ಬ್ಯುಸಿ ಇರ್ತಾರೆ. ಮನೆಮಂದಿಗೆ ಅವರ ಕೈ ರುಚಿ ಸವಿಯೋ ಖುಷಿ. ಸಂಗೀತಾ ತಾನು ಮಾಡುವ ಅಡುಗೆಗೆ ಹೆಸರಿಡೋ ಗೋಜಿಗೆ ಹೋಗಲ್ಲ. ಆದರೆ ಅದು ರುಚಿ ರುಚಿಯಾಗಿರುವ ಬಗ್ಗೆ ಗಾÂರೆಂಟಿ ಮಾತ್ರ ಕೊಡ್ತಾರೆ. ಇವರ ಅಡುಗೆಯಲ್ಲಿ ಒಂದು ವಿಶೇಷತೆ ಇದೆ. ಒಂದಿನ ಪಲಾವ್‌ ಮಾಡಿದರೆ ನಾಳೆಯೂ ಪಲಾವ್‌, ನಾಡಿದ್ದೂ ಪಲಾವ್‌, ಗ್ರಹಚಾರ ಕೆಟ್ಟರೆ ಆಚೆ ನಾಡಿದ್ದೂ … ಆದರೆ ರುಚಿ ಮಾತ್ರ ಬೇರೆ ಬೇರೆಯಾಗಿರುತ್ತೆ. ಹಾಗಾಗಿ ಮನೆಯವರಿಗೆ ಇವತ್ತು ತಿಂತಿರೋದು ನಿನ್ನೆ ತಿಂದ ಪಲಾವೇನಾ? ಅನ್ನುವ ಅನುಮಾನಕ್ಕೆ ಎಡೆ ಇರೋದಿಲ್ಲ. 

ಯೂಟ್ಯೂಬ್‌ ಗೈಡೆನ್ಸ್‌
ಸಂಗೀತಾ  ಯೂಟ್ಯೂಬ್‌ ನೋಡ್ಕೊಂಡೇ ಬೇಕಿಂಗ್‌, ಕುಕ್ಕಿಂಗ್‌ಗಳನ್ನೆಲ್ಲ ಮಾಡೋದು. ಕುಕ್ಕೀಸ್‌ ಕೂಡ ಮಾಡ್ತಾರೆ. “ನಾನೊಂಥರ ಕರಪ್ಟೆಡ್‌ ವೆಜಿಟೇರಿಯನ್‌’ ಅನ್ನುವ ಸಂಗೀತಾ ಮನೇಲಿದ್ರೆ ಪ್ಯೂರ್‌ ವೆಜಿಟೇರಿಯನ್‌. ಹೊರಬಿದ್ರೆ ಪಕ್ಕಾ ನಾನ್‌ವೆಜಿಟೇರಿಯನ್‌. ರೆಸ್ಟೊರೆಂಟ್‌ಗಳಲ್ಲಿ ನಾನ್‌ವೆಜ್‌ ಬಿಟ್ರೆ ಐಸ್‌ಕ್ರೀಂ ಮೆಲ್ಲೋದು ಈಕೆಗಿಷ್ಟ. ವಾರಕ್ಕೆ ಮೂರು ಸಲವಾದ್ರೂ ಈಕೆ ಐಸ್‌ಕ್ರೀಂ ಪಾರ್ಲರ್‌ನಲ್ಲಿರ್ತಾರೆ. ಚಾಟ್ಸ್‌ ಅಂದರೆ ಪ್ರಾಣ. ರೋಡ್‌ಸೈಡ್‌ ಚಾಟ್‌ಗಳನ್ನು ಈಕೆ ಆಸೆಯಿಂದ ತಿನ್ನುವಾಗ ” ಒಳ್ಳೆ ಬಯಕೆ ಬಂದಿರೋ ಬಸುರಿ ಥರ ತಿಂತಿಯಲ್ಲೇ’ ಅಂತ ಫ್ರೆಂಡ್ಸ್‌ ಕಾಲೆಳೆಯೋದೂ ಇದೆ. 

ಶೂಟಿಂಗ್‌ನಲ್ಲೂ ಅಡುಗೆ ಮಾಡ್ತಾರೆ!
“ಶೂಟಿಂಗ್‌ ಇರುವಾಗ ಸ್ವಲ್ಪ ಫ್ರೀ ಇದ್ರೆ ನೇರ ಪ್ರೊಡಕ್ಷನ್‌ ರೂಂಗೆ ನುಗ್ಗಿ ಬಿಡ್ತೀನಿ. ಅಲ್ಲಿ ಕ್ಯಾಟರಿಂಗ್‌ನವರ ಜೊತೆಗೆ ಸೇರೊRಂಡು ಅಡುಗೆ ಮಾಡ್ತೀನಿ’ ಅಂತಾರೆ ಸಂಗೀತಾ. ತಾನೊಬ್ಬ ನಟಿ, ತಾನಿರುವಲ್ಲಿಗೇ ಊಟ ತಿಂಡಿ ಬರ್ಬೇಕು ಅನ್ನೋರ ಮುಂದೆ ಈ ಹುಡುಗಿ ಹಮ್ಮು ಬಿಮ್ಮನ್ನೆಲ್ಲ ಬಿಟ್ಟು ನೇರ ಅಡುಗೆ ಮನೆಗೆ ಹೋಗೋದು ಉಳಿದವರ ಹುಬ್ಬೇರಿಸಿದೆ. ಆದರೆ ಮಾಮೂಲಿ ಸೆಟ್‌ ಊಟದ ನಡುವೆ ಮನೆಯೂಟದ ಕೈರುಚಿ ಉಣ್ಣೋದಕ್ಕೆ ಸಾಧ್ಯವಾಗಿದ್ದಕ್ಕೆ ಅವರಿಗೂ ಖುಷಿ ಇದೆಯಂತೆ. ಪ್ರೊಡಕ್ಷನ್‌ ಟೀಂ ಜೊತೆಗೆ ಸೇರೊRಂಡು ಚಿಕನ್‌ ಅಡುಗೆ ಮಾಡೋದ್ರಲ್ಲಿ ಈಕೆ ಎಕ್ಸ್‌ಪರ್ಟ್‌. 

ಅಪ್ಪನಿಂದ ಬಂದ ವಿದ್ಯೆ
ಅಡುಗೆ ಕಲೆ ತನಗೆ ರಕ್ತಗತವಾಗಿಯೇ ಬಂದಿರಬೇಕು ಅಂದುಕೊಳ್ತಾರೆ ಈಕೆ. ಇವರ ಅಪ್ಪ ಊರಲ್ಲಿ ದೇವಸ್ಥಾನಗಳಲ್ಲಿ ಸಾವಿರಾರು ಮಂದಿ ಅಡುಗೆ ಮಾಡುತ್ತಿದ್ದರಂತೆ. ಅವರದು ಕೇಟರಿಂಗ್‌ ಸರ್ವೀಸ್‌ ಸಹ ಇತ್ತು. ಅಪ್ಪನ ಅಡುಗೆ ಕಲೆಗಾರಿಗೆ ತನಕೂ ಬಂದಿದೆ ಎನ್ನುವಾಗ ಈಕೆಯ ಕಣ್ಣುಗಳು ಖುಷಿಯಲ್ಲಿ ಮಿಂಚುತ್ತವೆ. 

ಸಿಟ್‌ ಬಂದ್ರೆ ಮನೆ ಕ್ಲೀನಾಗುತ್ತೆ!
“ಇದು ಚಿಕ್ಕಂದಿನಿಂದಲೇ ಬಂದಿರುವ ಸ್ವಭಾವ. ಸಿಟ್ಟು ಬಂದ್ರೆ ಮನೆಯೆಲ್ಲ ಕ್ಲೀನ್‌ ಮಾಡ್ತೀನಿ’ ಅಂತಾರೆ ಸಂಗೀತಾ. ಇಂಥ ವಿಚಿತ್ರ ಅಭ್ಯಾಸ ತನಗ್ಯಾಕೆ ಬಂತು ಅನ್ನೋದು ಈಕೆಗಿನ್ನೂ ಅರ್ಥವಾಗಿಲ್ಲ. ಆದರೆ ಮನೆ ನೀಟಾಗಿ ಕ್ಲೀನಾಗಿದ್ರೆ ಮನೆಮಂದಿಗೆ ಒಂದು ಸಂದೇಶ ಹೋಗುತ್ತೆ, ಇವತ್ತು ಸಂಗೀತಾಗೆ ಸಿಟ್ಟು ಬಂದಿದೆ ಅಂತ!
**
ಸಂಗೀತಾ ಸೌಂದರ್ಯ ಮತ್ತು ತೆಂಗಿನೆ‌ಣ್ಣೆ! 
– ನಮ್ಮೂರು ಮಂಗಳೂರು. ಅಲ್ಲಿ ಶುದ್ಧ ತೆಂಗಿನೆಣ್ಣೆ ಸಿಗುತ್ತೆ. ನನ್ನ ಚರ್ಮದ ಹೊಳಪಿನ ಸೀಕ್ರೆಟ್ಟೂ ಈ ತೆಂಗಿನೆಣ್ಣೆಯೇ. ಊರಿಂದ ಬರುವವರಲ್ಲಿ ನನ್ನ ಬೇಡಿಕೆ ಒಂದೇ, ತೆಂಗಿನೆಣ್ಣೆ! ಐದರಿಂದ ಹತ್ತು ಲೀಟರ್‌ ಎಣ್ಣೆ ತರಿಸ್ತೀನಿ. ನಾನು ಮೇಕಪ್‌ ತೆಗೆಯೋದು ತೆಂಗಿನೆಣ್ಣೆಯಿಂದಲೇ. ಮುಖ ಸ್ವಲ್ಪ ಡಲ್‌ ಆಗ್ತಿದೆ ಅನಿಸಿದಾಗ ತೆಂಗಿನೆಣ್ಣೆಯಿಂದ ಮುಖಕ್ಕೆ ಮಸಾಜ್‌ ಮಾಡ್ತೀನಿ. ಡೆಡ್‌ ಸ್ಕಿನ್‌ ಎಲ್ಲ ಕ್ಲಿಯರ್‌ ಆಗಿ ಮುಖ ಮತ್ತೆ ಹೊಳೆಯುತ್ತೆ. 

– ನಾವೇನು ತಿನ್ತೀವಿ ಅನ್ನೋದನ್ನು ನಮ್ಮ ಚರ್ಮ ಪ್ರತಿಫ‌ಲಿಸ್ತಿರುತ್ತೆ. ಚೆನ್ನಾಗಿ ಹಣ್ಣು ತರಕಾರಿ ತಿನ್ನಿ. ಬಹಳ ಬೇಗ ನಿಮಗೆ ರಿಸಲ್ಟ್ ಗೊತ್ತಾಗುತ್ತೆ. ಚರ್ಮ ಹೊಳೆಯೋದು ಮಾತ್ರವಲ್ಲ, ಆರೋಗ್ಯನೂ ಚೆನ್ನಾಗಿರುತ್ತೆ.

– ವಾರದಲ್ಲಿ ಒಂದಿನ ಉಪವಾಸ ಮಾಡ್ತೀನಿ. ಇಡೀದಿನ ನೀರು ಬಿಟ್ಟರೆ ಏನೂ ಕುಡಿಯಲ್ಲ. ಇದರಲ್ಲಿ ಬಾಡಿ ಕ್ಲೆನ್ಸಿಂಗ್‌ ಆಗುತ್ತೆ. ದೇಹ ಮನಸ್ಸು ಹಗುರಾಗುತ್ತೆ. 

– ಡ್ರೆಸಿಂಗ್‌ ವಿಚಾರದಲ್ಲಿ ನಾನು ಟಾಮ್‌ಬಾಯ್‌ ಥರ. ಶಾಪಿಂಗ್‌ ಮಾಡೋಕೆ ನನಗೆ ಬರಲ್ಲ. ಟೀ ಶರ್ಟ್‌, ಜೀನ್ಸ್‌ ಪ್ಯಾಂಟ್‌ ಹಾಕ್ಕೊಂಡ್ರೆ ನಾನು ಫ್ರೀ ಬರ್ಡ್‌

ಸಕ್ಸಸ್‌ ಅನ್ನೋದು ರಾತ್ರಿ ಕಳೆದು ಬೆಳಗಾಗೋದೊÅಳಗೆ ಸಿಗಬಹುದು. ನನಗೂ ಆ ಯಶಸ್ಸಿನ ಕನಸಿದೆ, ಸಕ್ಸಸ್‌ಗಾಗಿ ಬಹಳ ಕಷ್ಟಪಟ್ಟಿದ್ದೀನಿ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದೆ, ಕೆಲವೊಂದು ಸಿನಿಮಾಗಳಿಗೆ ಬಿಡುಗಡೆಭಾಗ್ಯವೇ ಸಿಗಲಿಲ್ಲ. ಈಗ ಗುರುಪ್ರಸಾದ್‌ ಅವರ “ಎರಡನೇ ಸಲ’ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನನಗೂ ನಿರೀಕ್ಷೆ ಇದೆ, ಈ ಬಾರಿ ನಿರೀಕ್ಷೆ ಹುಸಿಯಾಗಲ್ಲ ಅನ್ನುವ ನಂಬಿಕೆ ಇದೆ. 
– ಸಂಗೀತಾ ಭಟ್‌, ನಟಿ

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.