ತಂದೆಯ ತಾಯ್ತನದ ಬಂಧುರ ಕ್ಷಣ ಕ್ಷಣ, ನಿಮಗೆ ಅಮ್ಮ ಇಷ್ಟಾನಾ ಅಪ್ಪನಾ!
Team Udayavani, Jan 18, 2017, 3:45 AM IST
ಅದು ಪೇರೆಂಟಿಂಗ್ ಇಂಟರ್ಯಾಕ್ಷನ್ ಸೆಶನ್. ರಜೆಯ ದಿನ ಆಗಿದ್ದರೂ ಅಪ್ಪಂದಿರಿಗಿಂತ ಅಮ್ಮಂದಿರ ಸಂಖ್ಯೆ ಹೆಚ್ಚಿತ್ತು. ನ್ಯೂ ಜನರೇಶನ್ ತಾಯಂದಿರು ಪೇರೆಂಟಿಂಗ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿದ್ದಂತೆ ಕಂಡಿತು. ಇದ್ದ ಕೆಲವು ಅಪ್ಪಂದಿರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಸೆಶನ್‌ನಲ್ಲಿ ಭಾಗವಹಿಸಿದ್ದರು. ಉಳಿದವರು ಮಕ್ಕಳನ್ನು ಸಂಭಾಳಿಸುವುದರಲ್ಲಿ ಬ್ಯುಸಿಯಾಗಿದ್ದರು. ಪೇರೆಂಟಿಂಗ್‌ನ ಅನುಭವಗಳನ್ನು ಹಂಚಿಕೊಂಡ ಮೇಲೆ ಒಂದು ವಿಚಾರ ಸ್ಪಷ್ಟವಾಯ್ತು, ಈ ಜನರೇಶನ್‌ನ ಅಪ್ಪಂದಿರು ಅಮ್ಮಂದಿರಿಗಿಂತ ಹೆಚ್ಚು ಕೂಲ್ ಆಗಿರ್ತಾರೆ, ಮಕ್ಕಳನ್ನು ಆಟ ಆಡಿಸೋದ್ರಿಂದ ಹಿಡಿದು ಅವರ ಸುಖದುಃಖಗಳನ್ನು ಗೆಳೆಯನಂತೆ ಕೇಳ್ಳೋದು ಅಪ್ಪನೇ!
ಸೆಶನ್‌ನಲ್ಲಿ ಅಪ್ಪಂದಿರು ತಮ್ಮ ಮಕ್ಕಳ ಆಟ, ತುಂಟಾಟಗಳನ್ನು ಖುಷಿ ಖುಷಿಯಾಗಿ ಹಂಚಿಕೊಂಡರೆ, ಅಮ್ಮಂದಿರ ಗಮನ ಪೇರೆಂಟಿಂಗ್ ಸಮಸ್ಯೆಗಳತ್ತ ಮತ್ತು ಅವಕ್ಕೆ ಪರಿಹಾರ ಕಂಡುಕೊಳ್ಳೋ ಕಡೆಗೇ ಇತ್ತು.
ಯಾಕೆ ಹೀಗೆ? ಈ ಕಾಲದ ಅಮ್ಮಂದಿರು ಹಿಂದಿನ ಕಾಲದ ಅಪ್ಪಂದಿರ ಮಾದರಿ ಡಿಕ್ಟೇಟರ್‌ಗಳಾಗ್ತಿದ್ದಾರಾ?
ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಈ ಕಾಲದ ಅಮ್ಮಂದಿರ ಬಾಲ್ಯಕ್ಕೆ ಹೋಗಿ ನೋಡಬೇಕು.
ಅಲ್ಲಿ ಹೆಚ್ಚಿನವರು ಅಪ್ಪ ಅಂದರೆ ಭಯ. ಹೆಚ್ಚು ತುಂಟತನ ಮಾಡಿದ್ರೆ ಅಮ್ಮ ಬೆದರಿಕೆ ಹಾಕೋದು ಅಪ್ಪನ ಹೆಸರು ಹೇಳಿ. ಮಕ್ಕಳೆಲ್ಲ ಚೆರೆಪೆರೆ ಹಕ್ಕಿಗಳಂತೆ ಕಚಪಚ ಗೌಜಿ ಎಬ್ಬಿಸುವಾಗ ಅಮ್ಮ ಬಂದು, “ಶ್Ï, ಅಪ್ಪ ಬರಿ¤ದ್ದಾರೆ’ ಅಂದರೆ ಅಲ್ಲಿ ಸೈಲೆಂಟ್! ಸ್ಕೂಲ್‌ನಲ್ಲಿ ಲೀಡರ್, ಕಣÕನ್ನೆಯಲ್ಲೇ, ಶ್Ï, ಹೆಡ್ ಮಾಸ್ಟ್ರೆ ಬರಿ¤ದ್ದಾರೆ ಅಂದಹಾಗೆ. ಫ್ರೆಂಡ್ ಮನೆಗೆ ಹೋಗ್ಬೇಕಂದ್ರೂ ಅಮ್ಮಂಗೆ ಗೋಗರೆತ. “ಅಪ್ಪ ಬರೋ ಮುಂಚೆ ಬಂದಿºಡು’ ಎಂಬ ಎಚ್ಚರಿಕೆಯಿಲ್ಲದೇ ಅಮ್ಮ ಮಕ್ಕಳನ್ನು ಮನೆಯಿಂದಾಚೆ ಕಳಿಸಿದ್ದಿಲ್ಲ. ಹೊರಗೆಲ್ಲೋ ಹೋದವರು ಒಳಬರುವಾಗಲೂ ಅಪ್ಪನ ಚಪ್ಪಲಿಯಿದೆಯಾ ಅಂತ ನೋಡ್ಕೊಂಡೇ ಒಳಬರೋದು. ಅಪ್ಪನ ಹಾಜರಿಯಿದ್ದರೆ ಬೆಕ್ಕಿನ ಮರಿಯ ಹಾಗೆ ಹಿಂದಿನ ಬಾಗಿಲಿಂದ ಒಳಗೆ ಎಂಟ್ರಿ ತಗೊಂಡು ಸಜ್ಜ ಮೇಲಿನ ಪುಸ್ತಕ ಎತ್ಕೊಂಡು ಕಟ್ಟಿಗೆ ಸಿಂಹಾಸನದ ಮೇಲೆ ಆಸೀನರಾಗಿರುವ ಅಪ್ಪನನ್ನು ದಾಟಿಕೊಂಡು ರೂಮ್‌ಗೆ ಹೋಗೋದು. ಈ ನಡುವೆ, ” ಎಲ್ ಹೋಗಿದ್ದೆ?’ ಅಂತ ಅಪ್ಪ ಗಂಭೀರ ದನಿಯಲ್ಲಿ ಕೇಳಿದ್ರೆ, “ಲೇಖಾ ಜೊತೆ ಗ್ರೂಪ್‌ಸ್ಟಡಿಗೆ’ ಅಂತ ತಲೆತಗ್ಗಿಸಿ ಹೇಳಿ ರೂಮಿನ ಒಳಗೆ ನುಸುಳ್ಳೋದು. ಅಪ್ಪ ಎಲೆಡಿಕೆ ಮೆಲ್ಲುತ್ತಾ, ಹೊರಗೆಲ್ಲೋ ದೃಷ್ಟಿನೆಟ್ಟು ಯೋಚಿಸುತ್ತ ಕೂತರೆ ಸದ್ಯಕ್ಕೆ ಏಳುವ ಸೂಚನೆಯಿರುವುದಿಲ್ಲ. ಎಲೆ ಉಗುಳಲು ಹೊರಗೆ ಹೋದರೆ ರೂಂನಿಂದ ಅಡುಗೆ ಮನೆಗೋ ಹಿತ್ತಲಿಗೋ ಓಡಲು ಒಂದು ಅವಕಾಶ. ಒಳಗೆ ಅಮ್ಮನ ಜೊತೆ ಸ್ವಲ್ಪ ಸ್ವರ ಎತ್ತಿದರೂ, ಅಪ್ಪನ ಘರ್ಜನೆ. ಒಳಗೊಳಗೇ ಕುದಿಯುತ್ತ ಊಟ ಬಿಟ್ಟು ಕೂತರೆ ಅಮ್ಮನಿಗೆ ಸಂಕಟ. ಅವಳೇನೇದರೂ, ” ಊಟ ಮಾಡು ಪುಟ್ಟಾ, ನಿನ್ನ ಸಿಟ್ಟನ್ನು ಊಟದ ಮೇಲೆ ಯಾಕೆ ತೋರಿಸ್ತೀಯಾ?” ಅಂದ್ರೆ ಮತ್ತೆ ಅಪ್ಪನ ಘರ್ಜನೆ.
“ಹಸಿವಾದ್ರೆ ಊಟ ಮಾಡ್ತಾಳೆ ಬಿಡು. ನಿನ್ನ ಕೊಂಡಾಟ ಜಾಸ್ತಿಯಾಗಿಯೇ ಅವಳು ಹೀಗಾಗಿರೋದು’
ಮಕ್ಕಳ ಊಟದ ವಿಷಯದಲ್ಲಿ ಮಾತ್ರ ಅಪ್ಪನಿಗೆ ಕ್ಯಾರೇ ಅನ್ನದೇ ಅಮ್ಮನ ರಮಿಸುವಿಕೆ ಮುಂದುವರಿಯುತ್ತದೆ. ಅಪ್ಪ ಮತ್ತೆ ದನಿಯೆತ್ತುವುದಿಲ್ಲ. ಮಕ್ಕಳೆದುರು ಹೆಂಡತಿ ಮರ್ಯಾದೆ ತೆಗೆದರೆ ಅಂತ ಹೆದರಿಕೆಯೋ ಏನೋ?
ಅಪ್ಪನ ಅಂತರ್ಗಾಮಿ ಪ್ರೀತಿ ಗಮನಕ್ಕೆ ಬರುವುದು ಕೆಲವೇ ಕೆಲವು ಸಲ. ಅದರಲ್ಲೊಂದು ಎಕ್ಸಾಂ ದಿನ. ಆಗ ಓದಿಕೊಳ್ಳಲು ಅಮ್ಮ ಬೆಳಗಿನ ಜಾವ ನಾಲ್ಕೂವರೆ ಐದಕ್ಕೆಲ್ಲ ಎಬ್ಬಿಸುತ್ತಾಳೆ. ಅಪ್ಪ ಪಿಸುಗುಡ್ಡುತ್ತಾನೆ, “ಪಾಪ, ಮಲಗಲಿ ಬಿಡು. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ಏಳ್ತಾಳೆ’ ಅಂದು ತಾನು ಏಳುತ್ತಾರೆ. ಸ್ನಾನಕ್ಕೆ ಬಿಸಿನೀರ ಹಂಡೆಗೆ ನೀರು ತುಂಬಿಸೋದು ಅವರ ಕೆಲಸ. ಮಗಳು ಎದ್ದು ಸ್ನಾನ ಮಾಡಿದರೆ ನಿದ್ದೆ ಮಂಪರು ಬಿಟ್ಟು ಫ್ರೆಶಾÏಗಿ ಓದಬಹುದು ಅಂತ ಅವಳಿಗಿಂತ ಮೊದಲೇ ನೀರೊಲೆಗೆ ಕಟ್ಟಿಗೆ ತುರುಕುತ್ತಾರೆ.
ಈ ಪ್ರೀತಿ ಮಾರ್ಕ್ಸ್ ಕಾರ್ಡ್ ಎದುರಿಟ್ಟಾಗ ಮಾಯವಾಗಿ ಮತ್ತೆ ಆತ ಗಂಟುಮುಖದ ಅಪ್ಪನೇ ಆಗಿತ್ತಾನೆ. ಜ್ವರ ಬಂದಾಗ ರಾತ್ರಿಯಿಡೀ ಎದ್ದು ಎದೆಯೆತ್ತರ ಬೆಳೆದ ಮಗಳನ್ನು ಎತ್ತಿಕೊಂಡೇ ತಿರುಗುವ ಅಪ್ಪ, ಎಲ್ಲ ಸರಿಯಾಗಿ ಮಗಳು ಹುಷಾರಾದ ಮೇಲೆ ಎಂದಿನ ಅಪ್ಪನೇ!
ಫ್ಯಾಶ್‌ಬ್ಯಾಕ್‌ನಿಂದ ಈಚೆ ಬಂದ್ರೆ ಇಂದಿನ ಅಪ್ಪನ ಗುಣ ಅಂದಿನ ಅಮ್ಮನ ಗುಣದಂತೆ ಕಾಣುತ್ತದೆ, ಅಂದಿನ ಅಮ್ಮ ಅಷ್ಟೋ ಇಷ್ಟೋ ಅಂದಿನ ಅಪ್ಪನ ಇನ್ನೊಂದು ರೂಪವಾಗುತ್ತಾಳೆ. ತಾನು ಕ್ಲೀನಾಗಿಟ್ಟದ್ದನ್ನು ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಚಲ್ಲಾಪಿಲ್ಲಿ ಮಾಡಿ ಅಪ್ಪನ ತೊಡೆ ಮೇಲೆ ಕೂತು ಅವನ ಲ್ಯಾಪ್‌ಟಾಪ್‌ನ್ನೇ ಗಂಭೀರವಾಗಿ ನೋಡುವ ಮಗಳು ಅಮ್ಮನಿಗೆ ಆ ಕ್ಷಣ ಶತ್ರುವಿನಂತೆ ಕಂಡರೆ ಅಚ್ಚರಿಯಿಲ್ಲ. ಮಗಳ ಮೇಲೆ ರೇಗಾಡಿ, ಸಿಟ್ಟು ಇನ್ನೂ ನೆತ್ತಿಗೇರಿದರೆ ಅವಳ ಬೆನ್ನಿಗೆ ನಾಲ್ಕು ತದುಕಿ ಧುಮುಗುಡುತ್ತಾ ಹೋಗುವ ಅಮ್ಮ. ಅಳುವ ಮಗಳನ್ನು ಸಮಾಧಾನ ಮಾಡುತ್ತಾ, ಹೆಂಡತಿಯ ಏಟಿನಿಂದ ಅವಳನ್ನು ಪಾರುಮಾಡಿ ಮಗಳನ್ನು ಜೊತೆ ಸೇರಿಸಿಕೊಂಡು ಮೊದಲಿನಂತೆ ಎಲ್ಲವನ್ನೂ ಜೋಡಿಸಿಡುವ ಅಪ್ಪ.
ಆಫೀಸಿಂದ ಮನೆಗೆ ಬಂದ ಕೂಡಲೇ ಅಮ್ಮನಿಗೆ ಫಸ್ಟ್ ಕಾಣೋದು ಮನೆಯ ಅಸ್ತವ್ಯಸ್ತತೆ. ಯಾವಾಗೊಮ್ಮೆ ಅದನ್ನೆಲ್ಲ ನೀಟಾಗಿ ಇಡ್ತೀನೋ ಎಂಬಷ್ಟು ಅವಸರ. ಅವೆಲ್ಲ ಮಾಡಿ ಮುಗಿಸೋವಷ್ಟು ಹೊತ್ತಿಗೆ ಸುಸ್ತೆದ್ದು ಹೋಗಿರುತ್ತೆ. ಅದೇ ಸಮಯಕ್ಕೆ ಮಗಳು ಏನೋ ಹೇಳಲಿಕ್ಕೆ ಬಂದರೂ ಸಿಟ್ಟು, ಅಸಹನೆ, ಸಿಡಿಸಿಡಿ. ಅದನ್ನೆಲ್ಲ ಸುಧಾರಿಸಿ, ಇವತ್ತಾದ್ರೂ ಮಗಳ ಜೊತೆಗೆ ಸ್ವಲ್ಪ ಚೆನ್ನಾಗಿ ಮಾತನಾಡಬೇಕು ಅಂದುಕೊಂಡು ಬಂದರೆ ಮಗಳು ಯಾವುದೋ ಕಾಟೂìನ್‌ನಲ್ಲಿ ಮುಳುಗಿ ಹೋಗಿರ್ತಾಳೆ. ಅಮ್ಮ ಎಷ್ಟು ಪ್ರೀತಿಯಿಂದ ಕರೆದರೂ ಕೂತಲ್ಲಿಂದ ಅಲ್ಲಾಡಲ್ಲ. ಅಷ್ಟೊತ್ತಿಗೆ ಅಮ್ಮ ಮತ್ತೆ ರಾಂಗಾಗ್ತಾಳೆ, ಬಲವಂತದಲ್ಲಿ ರಿಮೋಟ್ ಕಿತ್ತು ಅಳುವ ಮಗಳನ್ನಲ್ಲೇ ಬಿಟ್ಟು ತಾನು ಫೇಸ್‌ಬುಕ್ ನೋಡ್ತಾ ಕೂರ್ತಾಳೆ!
ಮಗುವಿಗೆ ಅಮ್ಮ ಇಷ್ಟನೇ, ಆದರೆ ಅಮ್ಮನ ಸ್ವಭಾವ ಇಷ್ಟ ಇಲ್ಲ. ಅಪ್ಪ ಆಫೀಸ್‌ನಿಂದ ಮನೆಗೆ ಬಂದಕೂಡಲೇ ಅವನ ಕಣ್ಣಿಗೆ ಮೊದಲು ಕಾಣೋದು ಮಗಳು. ಅವಳ ಜೊತೆಗೆ ಆಟ ಆಡಿಯೇ ಅವನ ಮುಂದಿನ ಕೆಲಸ. ಆಫೀಸ್‌ನ ಸ್ಟ್ರೆಸ್, ಕಸಿವಿಸಿ, ಟೆನ್ಶನ್ ಎಲ್ಲ ಮರೆಯಲಿಕ್ಕೆ ಅವನಿಗೆ ಮಗಳೇ ಟಾನಿಕ್. ಮಗಳನ್ನು ಪಾರ್ಕ್‌ಗೋ ಇನ್ನೆಲ್ಲಿಗೋ ಕರೆದುಕೊಂಡು ಆಟ ಆಡಿಸೋದಿಷ್ಟ. ಅಮ್ಮ ಪಾರ್ಕ್‌ಗೆ ಹೋದ್ರೂ ಅವಳಿಗೆ ಮಗಳನ್ನು ಆಟ ಆಡಿಸೋದಕ್ಕಿಂತಲೂ ಎರಡು ರೌಂಡ್ ವಾಕ್ ಮಾಡಿದ್ರೆ ಸೊಂಟದ ಟಯರ್ ಸ್ವಲ್ಪ ಇಳೀಬಹುದೋ ಏನೋ ಅನ್ನೋ ಯೋಚನೆ. ಪಾರ್ಕ್‌ನಲ್ಲಿರೋ ವಕೌìಟ್ ಕಾರ್ನರ್‌ನತ್ತಲೇ ಗಮನ. ಅಪ್ಪನ ಹಾಗೆ ಮಗಳನ್ನು ಆಟ ಆಡಿಸೋದು ಅವಳಿಗೆ ಸ್ವಲ್ಪ ಬೋರಾಗುತ್ತೆ.
ಅಪ್ಪ ಅಮ್ಮನಾದದ್ದು ಹೇಗೆ?
ಕಾರಣ ಸಾವಿರ ಇರಬಹುದು. ಒಬ್ಬೊಬ್ಬರದು ಒಂದೊಂದು ಕತೆ ಇರಬಹುದು. ಆದರೆ ಒಂದು ಬಲವಾದ ಕಾರಣ ಇದೆ. ಗಂಡುಮಕ್ಕಳು ಅಮ್ಮನಿಗೆ ಹತ್ತಿರ, ಹೆಣ್ಮಕ್ಕಳು ಅಪ್ಪನಿಗೆ ಹತ್ತಿರ ಅನ್ನೋ ಕಾಂಸೆಪ್ಟ್ ಎಲ್ಲರಿಗೂ ಗೊತ್ತಿರತ್ತೆ. ಅಮ್ಮನ ಹಿಂದಿಂದೆ ಸುತ್ತಿದ ಗಂಡುಮಕ್ಕಳಿಗೆ ಅವಳ ಗುಣ ಇಷ್ಟವಾಗಿ ತಾವೂ ಆಕೆಯ ಹಾಗೆ ಕೇರಿಂಗ್ ಆಗಿರಬೇಕು ಅಂದುಕೊಂಡು ಹೀಗಾಗಿರಬಹುದಾ? ಹೆಣ್ಮಕ್ಕಳಿಗೆ ಅಪ್ಪನೇ ಹೀರೋ ಆತನ ಗದರಿಕೆ, ಸರ್ವಾಧಿಕಾರ ಆ ಕ್ಷಣಕ್ಕೆ ಸಿಟ್ಟು ತಂದರೂ ಅದಕ್ಕಿರುವ ಶಕ್ತಿಯ ಬಗ್ಗೆ ಅವರಿಗೆ ಆಕರ್ಷಣೆ ಬೆಳೆದಿರಬಹುದೋ ಏನೋ? ಹಾಗಾಗಿ ಅವರ ಅರಿವಿಗೇ ಬಾರದೇ ಅಪ್ಪನ ಗುಣಗಳ ಮುಂದುವರಿಕೆ ಅವರಾಗಿರಬಹುದೋ ಏನೋ? ಇಷ್ಟಾದರೂ ಅನುಮಾನಗಳು ಇದ್ದೇ ಇರುತ್ತವೆ. ಹಾಗಾದರೆ ಈಗ ತಂದೆಯಾಗಿರೋ ಅಪ್ಪನ ತಂದೆ ಯಾಕೆ ಹಾಗೆ? ಈ ಪಾಪುವಿನ ತಾತನ ಅಮ್ಮ ಜೋರಾಗಿದ್ದಿರಬಹುದಾ? ಗೊತ್ತಿಲ್ಲ.
ಈ ಕಾಲದ ಅಮ್ಮನಿಗೆ ಸ್ಟ್ರೆಸ್ ಹೆಚ್ಚು, ಜವಾಬ್ದಾರಿಗಳೂ ಹೆಚ್ಚು. ಅದೂ ಆಕೆಯಲ್ಲಿ ಅಸಹನೆ ಬೆಳೆಸಿರಬಹುದು. ಗಂಡನಿಗೆ ಆಫೀಸ್ ತಲೆಬಿಸಿ ಇದ್ದರೂ ಮನೆಯ ಸಮಸ್ತ ಜವಾಬ್ದಾರಿಯನ್ನೂ ಆತ ಹೆಂಡತಿ ತಲೆಮೇಲೆ ಹಾಕಿ ಆರಾಮವಾಗಿರ್ತಾನೆ. ಹೊರ ಜಗತ್ತಿನ ಸ್ಟ್ರೆಸ್‌ನ್ನು ಮ್ಯಾನೇಜ್ ಮಾಡುವ ಕಲೆಯೂ ಆತನಿಗೆ ಸಿದ್ಧಿಸಿರೋದು ಇನ್ನೊಂದು ಪ್ಲಸ್‌ಪಾಯಿಂಟ್. ಹೀಗಾಗಿ ಈ ಜನರೇಶನ್ ಅಮ್ಮನಿಂದ ಅಪ್ಪ ಹೆಚ್ಚು ಕೂಲ್‌ಕೂಲ್, ಮಕ್ಕಳ ಫೇವರೆಟ್ ಆಗಿರಬಹುದು. ಅಮ್ಮನಿಗೆ ತಾನು ಮಗುವನ್ನು ಚೆನ್ನಾಗಿ ನೋಡ್ಕೊಳ್ತಿಲ್ವಲ್ಲಾ ಅನ್ನೋ ಸ್ಟ್ರೆಸೂ ಸೇರಿ ಅವಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿರಬಹುದು.
ಇಷ್ಟೆಲ್ಲ ಹೇಳಿದ್ಮೇಲೂ ಒಂದ್ಮಾತು; ಈ ಕಾಲದ ಅಪ್ಪ ಕೂಲ್ ಕೂಲ್, ಅಮ್ಮ ಜ್ವಾಲಾಮುಖೀ ಅಂದ ಮಾತ್ರ ಅಮ್ಮಂದಿರು ಸಿಟ್ಟಾಗಬೇಕಿಲ್ಲ. ಅಪ್ಪನ ಜೊತೆಗೆ ಎಷ್ಟೇ ಆಟ ಆಡಿದ್ರೂ ಅದಕ್ಕೆ ನೋವಾದಾಗ ನೀವೇ ಬೇಕು. ಖುಷಿಯನ್ನು ಯಾರ ಜೊತೆ ಬೇಕಾದರೂ ಹಂಚಿಕೊಳ್ಳಬಹುದು, ನೋವನ್ನು ತೀರಾ ಆಪ್ತರ ಬಳಿ ಮಾತ್ರ ಹಂಚಿಕೊಳ್ಳಲು ಸಾಧ್ಯ. ಮಗುವಿಗೆ ಸಣ್ಣ ನೋವಾದರೂ, “ಅಮ್ಮಾ ..’ ಅನ್ನುತ್ತೆ ಅಂದರೆ ಅದರರ್ಥ ಇಷ್ಟೇ, ಎಷ್ಟೇ ಕ್ಲೋಸ್ ಆದ್ರೂ ಅದಕ್ಕೆ ಅಮ್ಮನೇ ಫಸ್ಟು, ಅಪ್ಪ ನೆಕ್ಸ್ಟ್!
– ಪ್ರಿಯಾ ಕೆರ್ವಾಶೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.