ಶೀನಾ ಪ್ರಕರಣ: ಇಂದ್ರಾಣಿ ವಿರುದ್ಧ ಕೊಲೆ ಆರೋಪ
Team Udayavani, Jan 18, 2017, 3:45 AM IST
ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಅವರ ಜತೆ ಮಾಜಿ ಪತಿ ಸಂಜೀವ್ ಖನ್ನಾ, ಉದ್ಯಮಿ ಪೀಟರ್ ಮುಖರ್ಜಿ ವಿರುದ್ಧವೂ ಕೊಲೆ ದೋಷಾರೋಪ ಹೊರಿಸಲಾಗಿದೆ.
ದೋಷಾರೋಪ ಹೊರಿಸಿದ ಸಿಬಿಐ ವಿಶೇಷ ಕೋರ್ಟಿನ ನ್ಯಾಯಾಧೀಶ ಎಚ್.ಎಸ್.ಮಹಾಜನ್ ಅವರು ಫೆ.1ರಿಂದ ವಿಚಾರಣೆ ಆರಂಭವಾಗಬೇಕೆಂದು ಆದೇಶ ನೀಡಿದ್ದಾರೆ. ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ, ಸಂಜೀವ್ ಖನ್ನಾ ವಿರುದ್ಧ ವಂಚನೆ, ಅಪಹರಣ, ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿಕೆ, ಕೊಲೆ ಮತ್ತು ಸಾಕ್ಷ್ಯ ನಾಶಗಳ ಆರೋಪಗ ಳನ್ನು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಹೊರಿಸಿದೆ. ಇಂದ್ರಾಣಿ ಮತ್ತು ಸಂಜೀವ್ ಖನ್ನಾ ವಿರುದ್ಧ ಶೀನಾ ಬೋರಾ ಮತ್ತು ಆಕೆಯ ಸಹೋದರ ಮಿಖಾಯಿಲ್ ಬೋರಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದರ ಜತೆಗೆ ಇಂದ್ರಾಣಿ ವಿರುದ್ಧ ದಾಖಲೆಗಳ ನೀಡಿಕೆಯಲ್ಲಿ ವಂಚನೆ ಆರೋಪವನ್ನೂ ಹೊರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ ಮುಖರ್ಜಿ ಅವರನ್ನು 2015ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಅವರೊಂದಿಗೆ ಪತಿ ಪೀಟರ್ ಮುಖರ್ಜಿ, ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮ್‌ವರ್ ರಾಯ್ ಅವರನ್ನೂ ವಶಕ್ಕೆ ಪಡೆಯಲಾಗಿತ್ತು. ಕಳೆದ ತಿಂಗಳ 19ರಂದು ಸಿಬಿಐ ಹತ್ಯೆ ಕೇಸಿನಲ್ಲಿ ವಾದ ಮಂಡಿಸಲು ಆರಂಭಿಸಿತ್ತು.
ವಿಚ್ಛೇದನ ಬೇಕೆಂದು ಕೇಳಿದ ಇಂದ್ರಾಣಿ!
ಆರೋಪಪಟ್ಟಿ ಸಲ್ಲಿಕೆ ವೇಳೆ ಇಂದ್ರಾಣಿ ಮುಖರ್ಜಿ ಪತಿ ಪೀಟರ್ ಮುಖರ್ಜಿಯಿಂದ ವಿಚ್ಛೇದನ ಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕೆಂದು ವಿಶೇಷ ಕೋರ್ಟ್ ಮುಂದೆ ಅರಿಕೆ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ಎಚ್.ಎಸ್.ಮಹಾ ಜನ್, “ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಲು ಕೋರ್ಟಿಂದ ಅನುಮತಿ ಪಡೆಯಬೇಕಾಗಿಲ್ಲ’ ಎಂದು ಹೇಳಿದರು. ಆ ವಿಚಾರ ಏನಿದ್ದರೂ ಪತಿ-ಪತ್ನಿಯ ನಡುವೆ ಚರ್ಚೆಯಾಗಬೇಕು. ಅದಕ್ಕೂ ಕೋರ್ಟಿಗೂ ಸಂಬಂಧವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.