ನೆರೂಲ್‌ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ:  ಬ್ರಹ್ಮಕಲಶೋತ್ಸವ

Team Udayavani, Jan 18, 2017, 4:48 PM IST

17-Mum03b.jpg

ನವಿಮುಂಬಯಿ: ಶ್ರೀ  ಮಣಿಕಂಠ ಸೇವಾ ಸಂಘಂ ನೆರೂಲ್‌ ವತಿಯಿಂದ ನೆರೂಲ್‌ ಪೂರ್ವದ ಫೇಸ್‌ ನಂಬರ್‌-01, ನೆರೂಲ್‌ ಬಸ್‌ ಡಿಪ್ಪೋ ಸಮೀಪ, ನೆರೂಲ್‌ ರೈಲ್ವೇ ನಿಲ್ದಾಣ ರಸ್ತೆಯ, ಸೆಕ್ಟರ್‌-29, ಪ್ಲೋಟ್‌ ನಂಬರ್‌ 16ರಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಮಾರಂಭವು ಜ. 15ರಂದು ಪ್ರಾರಂಭಗೊಂಡಿದ್ದು, ಜ. 22 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.

ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಶ್ರೀ ಗುರುಪ್ರಸಾದ್‌ ಭಟ್‌ ಘನ್ಸೋಲಿ ಅವರ ಮಾರ್ಗ ದರ್ಶನದಲ್ಲಿ, ತಂತ್ರಿಗಳಾದ ವಿದ್ವಾನ್‌ ರಾಮಚಂದ್ರ ಬಾಯರಿ ಕಾರ್ಕಳ ಅವರ ನೇತೃತ್ವದಲ್ಲಿ ಕಳತ್ತೂರು ವೇದಮೂರ್ತಿ ಉದಯ ತಂತ್ರಿಗಳ ಉಪಸ್ಥಿತಿಯಲ್ಲಿ ವೇದಾಗಮ ತಜ್ಞರಾದ ಋತ್ವಿಜರ ಸಹಯೋಗದೊಂದಿಗೆ ನಿಗಮಾಗಮೋಕ್ತ ವಿಧಿ-ವಿಧಾನದಂತೆ ನಡೆಯುತ್ತಿದೆ.

  ಧಾರ್ಮಿಕ ಕಾರ್ಯಕ್ರಮವಾಗಿ ಜ. 17ರಂದು ಬೆಳಗ್ಗೆ 8 ರಿಂದ ಅರಣಿ ಮಥನ, ಭದ್ರದೀಪ ಪ್ರತಿಷ್ಠೆ, ಪೂರ್ಣ ನವಗ್ರಹ ಯಾಗ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಸ್ನಪನ ಕಲಶ, ಬಿಂಬ ಶುದ್ಧಿ ಹೋಮ, ಶಯ್ನಾಕಲ್ಪನಂ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರಗಿತು. ಸಾವಿರಾರು ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ 5 ರಿಂದ ಶಿರತ್ತತ್ವ ಹೋಮ, ಭದ್ರಕ ಮಂಡಲ ಪೂಜೆ, ಅಧಿವಾಸ ಹೋಮಗಳು, ಶಯ್ನಾಧಿವಾಸ, ಅಷ್ಟ ಬಂಧಾಧಿವಾಸ, ನೂತನ ಪ್ರಸಾದಾಧಿವಾಸ ನಡೆಯಿತು.  ದಿನಂಪ್ರತಿ ನಗರದ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ಜರಗುತ್ತಿದೆ.

ನೂತನ ಮಂದಿರದ ಕಾರ್ಯಾಧ್ಯಕ್ಷ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ, ಅಧ್ಯಕ್ಷ ಕಿಶೋರ್‌ ಕುಮಾರ್‌ ಎಂ. ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ಉಪಾಧ್ಯಕ್ಷ  ದಾಮೋದರ ಎಸ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಯು. ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್‌ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ಹರಿ ಎಲ್‌. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್‌ ಮಾಡ, ವಿಶ್ವಸ್ಥರುಗಳಾದ ರವಿ ಆರ್‌. ಶೆಟ್ಟಿ, ರಿತೇಶ್‌ ಜಿ. ಕುರುಪು, ಡಾ| ಶಿವ ಮೂಡಿಗೆರೆ, ಪ್ರಕಾಶ್‌ ಮಹಾಡಿಕ್‌, ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಹರೀಶ್‌ ಎನ್‌. ಶೆಟ್ಟಿ, ಮಹೇಶ್‌ ಡಿ. ಪಟೇಲ್‌, ನರೇನ್‌ ಭಾç ಪಟೇಲ್‌ ಹಾಗೂ  ಸದಸ್ಯರುಗಳಾದ  ರಾಮಕೃಷ್ಣ ಎಸ್‌. ಶೆಟ್ಟಿ, ಅಣ್ಣಪ್ಪ ಕೋಟೆಗಾರ್‌, ಸುರೇಂದ್ರ ಆರ್‌. ಶೆಟ್ಟಿ, ನಿತ್ಯಾನಂದ ವಿ. ಶೆಟ್ಟಿ, ಸದಾಶಿವ ಎನ್‌. ಶೆಟ್ಟಿ, ಮೋಹನ್‌ದಾಸ್‌ ಕೆ. ರೈ, ಮೇಘರಾಜ್‌ ಎಸ್‌. ಶೆಟ್ಟಿ, ಸುರೇಶ್‌ ಆರ್‌. ಶೆಟ್ಟಿ, ವಿಶ್ವನಾಥ ಡಿ. ಶೆಟ್ಟಿ, ಇಂದಿರಾ ಎಸ್‌. ಶೆಟ್ಟಿ, ರಘು ವಿ. ಶೆಟ್ಟಿ, ಹಾಗೂ ನೆರೂಲ್‌ ಶ್ರೀ ಮಣಿಕಂಠ ಸೇವಾ ಸಂಘ, ಧರ್ಮಶಾಸ್ತ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ನವಿಮುಂಬಯಿ ಸರ್ವ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೃಂದದವರು ಪಾಲ್ಗೊಂಡು ಸಹಕರಿಸಿದರು. ನಗರದ ವಿವಿಧ ಜಾತೀಯ ಹಾಗೂ ಕನ್ನಡ-ತುಳುಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇಂದಿನ ಕಾರ್ಯಕ್ರಮ
ಜ. 18ರಂದು ಬೆಳಗ್ಗೆ 8ರಿಂದ ಪ್ರಸಾದ ಪ್ರತಿಷ್ಠೆ, ನಪುಂಸಕಶಿಲಾ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ರತ್ನಾನ್ಯಾಸ, ಭಾಗ್ಯಸೂಕ್ತ ಯಾಗ ಆರಂಭ, ಪೂರ್ವಾಹ್ನ 10.55ರಿಂದ ಶ್ರೀ ಅಯ್ಯಪ್ಪ, ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕುಂಭೇಶ ನಿದ್ರಾಕಲಶಾಭಿಷೇಕ, ತತ್ವಕಲಶಾಭಿಷೇಕ, ಪ್ರತಿಷ್ಠಾಂಗ ತತ್ವನ್ಯಾಸ, ಪ್ರಾಣನ್ಯಾಸಾದಿಗಳು, ಪ್ರತಿಷ್ಠಾ ಪೂಜೆ, ನಿತ್ಯ ನೈಮಿತ್ತಿಕ ಪೂಜಾ ವಿಧಿ, ವಿಧಾನಗಳ ಪ್ರತಿಜ್ಞಾ  ಸ್ವೀಕಾರ, ಪೂರ್ವಾಹ್ನ 11.30ರಿಂದ ಮಹಾಪೂರ್ಣಾಹುತಿ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 5 ರಿಂದ ಗಣಪತಿ ದೇವರಿಗೆ 108 ಕಲಶಾಧಿವಾಸ, ಅಧಿವಾಸ ಹೋಮ, ಗಣಪತಿ ದೇವರ ಭದ್ರಕ ಪೂಜೆಯನ್ನು ಆಯೋಜಿಸಲಾಗಿದೆ.

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.