ಧರ್ಮಗಳ ನಡುವೆ ಕಂದಕ ಬೇಡ: ಸಿಎಂ


Team Udayavani, Jan 19, 2017, 12:10 PM IST

cm.jpg

ಬೆಂಗಳೂರು: ಜಾತಿ -ಧರ್ಮಗಳಿಗೆ ಒತ್ತು ನೀಡದೆ, ಮನುಷ್ಯತ್ವಕ್ಕೆ ಆದ್ಯತೆ ನೀಡಬೇಕು. ಧರ್ಮ, ಬದುಕಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಬೇಕು. ಧರ್ಮ-ಧರ್ಮಗಳ ನಡುವೆ ಕಂದಕ ಬೇಡ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟುಹಬ್ಬದಂದೇ ಅವರ ವಿಚಾರಗಳನ್ನು ತಿರುಚುವ ಪ್ರಯತ್ನ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ರಾಜ್ಯಮಟ್ಟದ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿವೇಕಾನಂದರು ಕೇವಲ 30 ವರ್ಷ ಬದುಕಿದ್ದರೂ ಅವರು ತಳೆದ ನಿರ್ಧಾರಗಳು ಇಂದಿಗೂ ಪ್ರಸ್ತುತವಾಗಿ ಪದೇ ಪದೇ ಎಲ್ಲರನ್ನೂ ಎಚ್ಚರಿಸುತ್ತಿದೆ. ಧರ್ಮ-ಧರ್ಮಗಳ ನಡುವೆ ಕಂದಕ ಬೇಡ ಎಂದು ಹೇಳಿದ್ದ ಅವರ ವಿಚಾರಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ತಿರುಚುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಆರ್‌.ವಿ.ದೇಶ ಪಾಂಡೆ, ಕೆ.ಜೆ. ಜಾರ್ಜ್‌, ಆರ್‌.ರೋಷನ್‌ ಬೇಗ್‌, ಉಮಾಶ್ರೀ, ಯು.ಟಿ.ಖಾದರ್‌, ಉನ್ನತ ಶಿಕ್ಷಣ ಸಚಿವ 
ಬಸವರಾಜ ರಾಯರೆಡ್ಡಿ, ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ಆತ್ಮಜ್ಞಾನಾನಂದ, ಮೇಯರ್‌ ಜಿ.ಪದ್ಮಾ ವತಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹರಿದು ಬಂದ ಜನಸಾಗರ: ಅದ್ಧೂರಿಯಾಗಿ ನಡೆದ ಕಾರ್ಯಕ್ರಮ ಯುವ ಮನಸ್ಸುಗಳನ್ನು ಸೆಳೆಯಿತು. ರಾಜ್ಯದ 177 ತಾಲೂಕು, ಬೆಂಗಳೂರು ನಗರದ ಎಲ್ಲಾ ವಿದ್ಯಾಲಯಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ಸಮಾರಂಭಕ್ಕೆ ಕಳೆ ತಂದರು. ಕಾರ್ಯಕ್ರಮದಲ್ಲಿ ವಿವೇಕಾನಂದರ ಆದರ್ಶಗಳನ್ನು ಬಿಂಬಿಸುವಂತಹ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.

ಭಾರತೀಯ ಸೇನೆಯ ವಾಹನಗಳ ಕಾರ್ಯವೈಖರಿಯ ಸಲಕರಣೆಗಳ ಬಗ್ಗೆ ವಿವರ ನೀಡುವ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಅದನ್ನು ನೋಡಲು ವಿದ್ಯಾರ್ಥಿ ಸಮೂಹ ಮುಗಿಬಿದ್ದಿತ್ತು. ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಕೆಲ ಕಾಲ ವಾಹನ ಸವಾರರು ಪರದಾಡಬೇಕಾಯಿತು.

ಟಾಪ್ ನ್ಯೂಸ್

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

3-raj-b-shetty

Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kharge–Siddu

Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ

Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ

Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್

Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್

Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ

Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ

7

Bengaluru: ಬಸ್‌ ಕಂಡಕ್ಟರ್‌, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

5

Itanagar: ಚೀನ ಜತೆ ದೀರ್ಘ‌ ಕಾಲ ಶಾಂತಿ ಸ್ಥಾಪನೆಗೆ ಪ್ರಯತ್ನ; ರಕ್ಷಣ ಸಚಿವ ರಾಜನಾಥ್‌ಸಿಂಗ್‌

4

New Delhi: ದೀಪಾವಳಿ ಹಬ್ಬದ ವೇಳೆ ಅಮೆರಿಕ ರಾಯಭಾರಿ ಡ್ಯಾನ್ಸ್‌!

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.