ಅಲೋಕ್ ವರ್ಮಾ ಹೊಸ ಸಿಬಿಐ ನಿರ್ದೇಶಕ
Team Udayavani, Jan 20, 2017, 3:45 AM IST
ನವದೆಹಲಿ: ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತಾ ಅವರಿಗೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಹುದ್ದೆ ಒಲಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯ ನಡುವೆಯೂ ಈ ಹುದ್ದೆ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರಿಗೆ ಒಲಿದಿದೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾ| ಜೆ.ಎಸ್. ಖೇಹರ್, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡ ನೇಮಕ ಸಮಿತಿ, ಅಲೋಕ್ ವರ್ಮಾ ಅವರನ್ನು ಆಯ್ಕೆ ಮಾಡಿದೆ. ವರ್ಮಾ ಅವರ ಅಧಿಕಾರಾವಧಿ 2 ವರ್ಷ.
ಡಿಸೆಂಬರ್ 2 ರಂದು ಸಿಬಿಐ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ನಿವೃತ್ತಿಯಾಗಿದ್ದರು. ಇವರ ಸ್ಥಾನಕ್ಕೆ ಕೇಂದ್ರ ಸರ್ಕಾರ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನಾ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿಸಿತ್ತು. ಕೇಂದ್ರದ ಈ ನಿರ್ಧಾರ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.
ವರ್ಮ ನೇಮಕವೂ ವಿವಾದದಿಂದೇನೂ ಹೊರತಾಗಿಲ್ಲ. ಈ ನೇಮಕ ಪಕ್ಷಪಾತದಿಂದ ಕೂಡಿದೆ ಎಂದು ಆಮ್ ಆದ್ಮಿ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್ ಆಕ್ಷೇಪಿಸಿವೆ.
ದತ್ತಾಗೆ ಒಲಿಯದ ಅದೃಷ್ಟ: ಸಿಬಿಐನಲ್ಲೇ ಹಿರಿಯರಾಗಿದ್ದ ಕರ್ನಾಟಕ ಕೇಡರ್ನ ರೂಪಕ್ ಕುಮಾರ್ ದತ್ತಾ ಅವರೇ ಮುಂದಿನ ಸಿಬಿಐ ನಿರ್ದೇಶಕ ಎಂಬುದು ಅನಿಲ್ ಸಿನ್ಹಾ ಅವರು ಇರುವಾಗಲೇ ಚಾಲ್ತಿಯಲ್ಲಿದ್ದ ಮಾತುಗಳು. ಇಂಥ ಸಂದರ್ಭದಲ್ಲೇ ಕಳೆದ ತಿಂಗಳು ಕೇಂದ್ರ ಸರ್ಕಾರ ಇವರನ್ನು ಸಿಬಿಐನಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.