ಕ್ವಿಕ್ ರನ್ಗಾಗಿ ಚಿಕನ್, ಮಟನ್ ಬಿಟ್ಟ ಕೊಹ್ಲಿ..!
Team Udayavani, Jan 20, 2017, 3:45 AM IST
ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲಿ ಜಬರ್ದಸ್ತ್ ಆಗಿ ಆಡುತ್ತಾರೆ. ಸಿಕ್ಸರ್, ಬೌಂಡಿರಿಗಳ ಸುರಿಮಳೆಯನ್ನೇ ಹರಿಸುತ್ತಾರೆ. ವೇಗವಾಗಿ ಒಂಟಿ ರನ್ ಕದಿಯುತ್ತಾರೆ.
ಒಂಟಿ ರನ್ ಕಲೆ ಹಾಕುವುದರಲ್ಲಿ ಕೊಹ್ಲಿ ಮಾಸ್ಟರ್. ಹಾಗಾದರೆ ಕೊಹ್ಲಿಯ ಫಿಸ್ ಹೇಗಿದೆ? ಕೊಹ್ಲಿ ಫಿಸ್ ಹಿಂದಿರುವ ಆಗಾದ ಶಕ್ತಿಯಾದರೂ ಏನು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಷ್ಟದ ಚಿಕನ್, ಮಟನ್ಗೆ ಗುಡ್ ಬೈ: ವಿರಾಟ್ ಕೊಹ್ಲಿಗೆ ರೋಲ್ ಚಿಕನ್, ರೋಲ್ ಮಟನ್ ಎಂದರೆ ಪಂಚಪ್ರಾಣ. ಬಾಲ್ಯದಲ್ಲಿ ಇದನ್ನು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿದ್ದರು. ಆನಂತರ ಕೊಹ್ಲಿ ಕ್ರಿಕೆಟ್ಗಾಗಿ ಕೆಲವು ತ್ಯಾಗಕ್ಕೆ ನಿರ್ಧರಿಸಿದರು. ಫಿಟೆಸ್ ಶುರು ಮಾಡಿದರು.
ಒಂಟಿ ರನ್ ಕದಿಯಲು ಆಹಾರದಲ್ಲಿ ನಿಯಂತ್ರಣದ ಅಗತ್ಯ ಇತ್ತು. ಹೀಗಾಗಿ ಇಷ್ಟದ ಚಿಕನ್, ಮಟನ್ಗೆ ಗುಡ್ ಬೈ ಹೇಳಲೇ ಬೇಕಾಯಿತು ಎಂದು ಸ್ವತಃ ಕೊಹ್ಲಿ ಬಾಲ್ಯದ ಕೋಚ್ ಆಗಿರುವ ರಾಜ್ ಕುಮಾರ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.