Automation effect: ಇನ್‌ಫೋಸಿಸ್‌ನಿಂದ 9,000 ಉದ್ಯೋಗಿಗಳ ‘ಬಿಡುಗಡೆ’
Team Udayavani, Jan 20, 2017, 12:19 PM IST
ಬೆಂಗಳೂರು : ದೇಶದ No.2 ಐಟಿ ಸಂಸ್ಥೆಯಾಗಿರುವ ಇನ್‌ಫೋಸಿಸ್ ಕಳೆದ ಒಂದು ವರ್ಷದಲ್ಲಿ ಆಟೋಮೇಶನ್ (ಯಾಂತ್ರೀಕರಣ) ಪರಿಣಾಮವಾಗಿ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ 9,000 ಮಂದಿ ಉದ್ಯೋಗಿಗಳನ್ನು “ಬಿಡುಗಡೆ’ ಮಾಡಿರುವುದಾಗಿ ಕಂಪೆನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಕೃಷ್ಣಮೂರ್ತಿ ಶಂಕರ್ ತಿಳಿಸಿದ್ದಾರೆ.
ಆಟೋಮೇಶನ್ ಪರಿಣಾಮವಾಗಿ “ಬಿಡಗಡೆ’ಮಾಡಲಾಗಿರುವ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ ಈ ಉದ್ಯೋಗಿಗಳನ್ನು ಪ್ರಕೃತ ಹೆಚ್ಚು ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಲಾಗಿದೆ ಎಂದವರು ಹೇಳಿದರು.
‘ಆಟೋಮೇಶನ್ ಪರಿಣಾಮವಾಗಿ ನಾವು ಪ್ರತೀ ತ್ತೈಮಾಸಿಕದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಬಿಡುಗಡೆ ಮಾಡಿ ಅವರನ್ನು ವಿಶೇಷ ಕೋರ್ಸ್‌ಗಳಲ್ಲಿ ತೊಡಗಿಸಲು ಅವರಿಗೆ ತರಬೇತಿ ನೀಡುತ್ತಿದ್ದೇವೆ; ಇದರಿಂದಾಗಿ ಹೊಸ ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರಿಗೆ ಅನುಕೂಲವಾಗುತ್ತಿದೆ’ ಎಂದು ಶಂಕರ್ ಅವರು ವಿಶ್ವ ಆರ್ಥಿಕ ವೇದಿಕೆಯ ‘Global shapers’ ನ ಬೆಂಗಳೂರು ಘಟಕ ಸಂಘಟಿಸಿದ್ದ ಸಮಾವೇಶದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
2015ರಲ್ಲಿ ಫಿಲಿಪ್ಸ್ ಸೇರಿಕೊಂಡಿದ್ದ ಶಂಕರ್ ಅವರು, “ಮುಂಬರುವ ದಿನಗಳಲ್ಲಿ ಆಟೋಮೇಶನ್ ಪ್ರಕ್ರಿಯೆಯು ತೀವ್ರಗೊಳ್ಳಲಿದೆ; ಇದರ ಪರಿಣಾಮವಾಗಿ ಉದ್ಯೋಗಿಗಳ ನೇಮಕಾತಿ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿದೆ’ ಎಂದು ಹೇಳಿದರು.
“ಉದ್ಯೋಗಿಗಳ ನೇಮಕಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಪೂರ್ತಿಯಾಗಿ ಆಟೋಮೇಶನ್‌ನ ಪರಿಣಾಮವಲ್ಲ; ಬದಲು ವಿಶ್ವ ಆರ್ಥಿಕತೆಯಲ್ಲಿ ಆಗುತ್ತಿರುವ ಬದಲಾವಣೆ, ನಿಧಾನ ಗತಿ ಇತ್ಯಾದಿಗಳಿಂದಾಗಿ ಕಂಪೆನಿಯ ಆರ್ಥಿಕ ನಿರ್ವಹಣೆ ಚೆನ್ನಾಗಿ ಆಗುತ್ತಿಲ್ಲ’
‘ಈ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಇನ್‌ಫೋಸಿಸ್ 5,700 ಮಂದಿಯನ್ನು ನೇಮಿಸಿಕೊಂಡಿದೆ. ಆದರೆ ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 17,000 ಮಂದಿಯನ್ನು ನೇಮಿಸಿಕೊಂಡಿತ್ತು. ಕಳೆದ ಡಿಸೆಂಬರ್ ತ್ತೈಮಾಸಿಕದಲ್ಲಿ ಇನ್‌ಫೋಸಿಸ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆ ವಸ್ತುತಃ ಕಡಿಮೆಯಾಗಿತ್ತು. ಭಾರತದ ನಂ.2 ಐಟಿ ಸಂಸ್ಥೆಯಾಗಿರುವ ಇನ್‌ಫೋಸಿಸ್‌ಗೆ ಇದೊಂದು ವಿಲಕ್ಷಣಕಾರಿ ವಿದ್ಯಮಾನವಾಗಿದೆ; ಪ್ರಕೃತ ಇನ್‌ಫೋಸಿಸ್ ಉದ್ಯೋಗಿಗಳ ಒಟ್ಟು ಸಂಖ್ಯೆ 1,99.763 ಆಗಿದೆ’ ಎಂದು ಶಂಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.