ಪಿಬಿಎಲ್:ಸೈನಾ,ಮರಿನ್ ಮಿಂಚು
Team Udayavani, Jan 21, 2017, 3:55 AM IST
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭಗೊಂಡ ನಂತರ ಕಬಡ್ಡಿ, ವಾಲಿಬಾಲ್, ಕುಸ್ತಿ, ಫುಟ್ಬಾಲ್, ಬ್ಯಾಡ್ಮಿಂಟನ್…ಹೀಗೆ ಹಲವು ಕ್ರೀಡಾ ಲೀಗ್‌ಗಳು ಆರಂಭಗೊಂಡಿವೆ. ಆದರೆ ಇದರಲ್ಲಿ ಐಪಿಎಲ್ ನಂತರ ಅತೀ ಹೆಚ್ಚು ಯಶಸ್ಸು ಸಾಧಿಸಿರುವುದು ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಲೀಗ್‌ಗಳು ಮಾತ್ರ. ಇತ್ತೀಚೆಗೆ ಎರಡನೇ ಆವೃತ್ತಿಯಲ್ಲಿ ಯಶಸ್ವಿಗೊಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿಎಲ್) ಬಗ್ಗೆ ಒಂದು ನೋಟ.
ಐಪಿಎಲ್ ಮತ್ತು ಕಬಡ್ಡಿಗೆ ಸಿಕ್ಕ ವೀಕ್ಷಕರು, ಕ್ರೀಡಾಭಿಮಾನಿಗಳು, ಪ್ರಚಾರ ಬ್ಯಾಡ್ಮಿಂಟನ್ ಲೀಗ್‌ಗೆ ಸಿಕ್ಕಿಲ್ಲ. ಆದರೆ ಸ್ಟಾರ್ ಆಟಗಾರ್ತಿಯರಾದ ಒಲಿಂಪಿಕ್ಸ್ ಪದಕ ವಿಜೇತ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಸ್ಪೇನ್‌ನ ಕ್ಯಾರೋಲಿನಾ ಮರಿನ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಆಟ ನೋಡಲೆಂದೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಮೂವರು ಆಟಗಾರ್ತಿಯರ ಆಟದ ವೈಖರಿ ಮತ್ತು ಗ್ಲಾಮರ್ ಅನ್ನಲು ಅಡ್ಡಿಯಿಲ್ಲ. ಹೀಗಾಗಿ ಮುಂದಿನ ಲೀಗ್‌ಗೆ ಈ ಲೀಗ್‌ನ ಯಶಸ್ಸು ಅಡಿಪಾಯವಾಗಿದೆ.
ಚಾಂಪಿಯನ್ ಪಟ್ಟ ತಂದ ಸಿಂಧು
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧು ಟೂರ್ನಿಯ ಪ್ರಮುಖ ಸ್ಟಾರ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಚೆನ್ನೈ ಸ್ಮ್ಯಾಷರ್ ತಂಡದಲ್ಲಿ ಆಡಿದ ಸಿಂಧು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಚೆನ್ನೈ
ತಂಡ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಸಿಂಧು ಅವರನ್ನು ಪಡೆಯಲು ಫ್ರಾಂಚೈಸಿಗಳು ದೊಡ್ಡ ಮಟ್ಟದ ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಅವಧ್ ವಾರಿಯರ್ನಲ್ಲಿ ಸೈನಾ
ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಸೈನಾ ನೆಹ್ವಾಲ್ ಲೀಗ್‌ನ ಪ್ರಮುಖ ಆಕರ್ಷಣೆಯಾಗಿದ್ದರು. ಆಗಾಗ ಗಾಯಗೊಂಡು, ಫಿಟೆ°ಸ್ ಕೊರತೆಯಿಂದ ಫಾರ್ಮ್ ಕಳೆದುಕೊಳ್ಳುತ್ತಿರುವ ಸೈನಾ ಲೀಗ್‌ನ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಖ್ಯಾತ ಆಟಗಾರ್ತಿಯರಾದ ಕ್ಯಾರೋಲಿನಾ ಮರಿನ್ ಮತ್ತು ಸಿಂಧು ವಿರುದ್ಧ ಸೋಲುಂಡರು. ಆದರೆ ಇವರಿಗೆ ಇರುವ ಸ್ಟಾರ್ ಪಟ್ಟ ಅಭಿಮಾನಿಗಳನ್ನು ಮೈದಾನಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.
ಮಿಂಚಿನ ಆಟ ಪ್ರದರ್ಶಿಸಿದ ಮರಿನ್
ಸ್ಪೇನ್‌ನ ಕ್ಯಾರೋಲಿನಾ ಮರಿನ್ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆಟಗಾರ್ತಿ. ಇವರು ಹೈದ್ರಾಬಾದ್ ಹಂಟರ್ ತಂಡದಲ್ಲಿ ಆಡಿದ್ದಾರೆ. ಪ್ರಮುಖ ಎದುರಾಳಿಗಳ ವಿರುದ್ಧ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಹಂಟರ್ ತಂಡ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮರಿನ್ ಎಡವಿದ್ದು ಸೆಮಿಫೈನಲ್‌ನಲ್ಲಿ ಮುಬೈ ರಾಕೆಟ್ಸ್ ವಿರುದ್ಧ ಮಾತ್ರ. ಮರಿನ್‌ಗೂ ಭಾರತದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ ಅನ್ನೋದು ಕ್ರೀಡಾಂಗಣದಲ್ಲಿ ಹೊರಹೊಮ್ಮುತ್ತಿದ್ದ ಜೈಕಾರದಲ್ಲಿಯೇ ತಿಳಿಯುತ್ತಿತ್ತು.
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ 2ನೇ ಆವೃತ್ತಿಯ ಈ ಯಶಸ್ಸು ಮತ್ತೂಂದು ಆವೃತ್ತಿಗೆ ಅಡಿಪಾಯವಾಗಿದೆ. ಭಾರತದಲ್ಲಿನ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರಕುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.