ಇಂದಿನಿಂದ ಹಾಕಿ ಇಂಡಿಯಾ ಲೀಗ್ ಆರಂಭ
Team Udayavani, Jan 21, 2017, 3:45 AM IST
ನವದೆಹಲಿ: ಪ್ರತಿಷ್ಠಿತ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಹಾಕಿ ಇಂಡಿಯಾ ಲೀಗ್‌ನ(ಎಚ್‌ಐಎಲ್) 5ನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಉದ್ಘಾಟನ ಪಂದ್ಯದಲ್ಲಿ ದಬಾಂಗ್ ಮುಂಬೈ ಮತ್ತು ರಾಂಚಿ ರಾಯ್ಸ ತಂಡಗಳು ಸೆಣಸಲಿವೆ.
ಜ.21 ರಿಂದ ಫೆ.26ರ ವರೆಗೆ 6 ಸ್ಥಳಗಳಲ್ಲಿ ಕೂಟದ ಪಂದ್ಯಗಳು ನಡೆಯಲಿದೆ. ಕೂಟದಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದು, ಲೀಗ್‌ನಿಂದ ಫೈನಲ್ ಪಂದ್ಯದ ವರೆಗೆ 34 ಪಂದ್ಯಗಳು ನಡೆಯಲಿವೆ. ಫೆ.22ರ ವರೆಗೆ 6 ತಂಡಗಳ ನಡುವೆ ಲೀಗ್‌ಹಂತದ ಪಂದ್ಯಗಳು ನಡೆಯಲಿವೆ. ಫೆ.25 ರಂದು ಚಂಡೀಗಢದಲ್ಲಿ ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೆ.26 ರಂದು ಚಂಡೀಗಢದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಲೀಗ್‌ನಲ್ಲಿ ಪ್ರತಿ ತಂಡಗಳು 10 ಪಂದ್ಯಗಳನ್ನು ಆಡುತ್ತದೆ. ಅತೀ ಹೆಚ್ಚು ಅಂಕಗಳಿಸಿದ 4 ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸಲಿವೆ.
ತಂಡಗಳು:
ದಬಾಂಗ್ ಮುಂಬೈ, ದೆಹಲಿ ವೇವ್‌ರೈಡರ್, ಪಂಜಾಬ್ ವಾರಿಯರ್, ಕಲಿಂಗ ಲ್ಯಾನ್ಸರ್, ರಾಂಚಿ ರಾಯ್ಸ, ಉತ್ತರ ಪ್ರದೇಶ ವಿಜಾರ್ಡ್ಸ್
ಟೂರ್ನಿ ನಡೆಯಲಿರುವ ಸ್ಥಳಗಳು:
ಮುಂಬೈ, ಭುವನೇಶ್ವರ, ರಾಂಚಿ, ದೆಹಲಿ, ಚಂಡೀಗಢ, ಲಕ್ನೋ
ನಮ್ಮ ಮುಖ್ಯಗುರಿ ಚಾಂಪಿಯನ್ ಆಗುವುದು. ಕಳೆದ ಬಾರಿ ಇರುವ ನಮ್ಮ ತಂಡವೇ ಈ ಬಾರಿ ಕಣಕ್ಕೆ ಇಳಿಯಲಿದೆ. ನಮ್ಮಲ್ಲಿ ಅನುಭವಿ ಆಟಗಾರರ ಜತೆ ಜೂನಿಯರ್ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಾದ ಅಜಿತ್ ಕುಮಾರ್ ಪಾಂಡೆ ಮತ್ತು ಹಾರ್ದಿಕ್ ಸಿಂಗ್ ಇದ್ದಾರೆ. ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಸಂಪೂರ್ಣ ಭರವಸೆಯಿದೆ.
– ಸರ್ದಾರ್ ಸಿಂಗ್, ಹಾಲಿ ಚಾಂಪಿಯನ್ ಪಂಜಾಬ್ ವಾರಿಯರ್ ತಂಡದ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.