ಎಲ್ಲರೊಡನಿದ್ದು ಎಲ್ಲರಂತಾಗಿ…
Team Udayavani, Jan 22, 2017, 3:45 AM IST
ನನ್ನ ಬಾಲ್ಯದ ಬಹುತೇಕ ದಿನಗಳೆಲ್ಲ ಕಳೆದದ್ದು ಅಜ್ಜನ ಮನೆಯಲ್ಲಿ. ಅಜ್ಜನ ಮನೆಯಿಂದ ತುಸು ದೂರದಲ್ಲಿದ್ದ ತೋಟ, ತೋಡು, ಕೆರೆ, ಹೊಳೆ… ಇವೆಲ್ಲವೂ ನನ್ನ ಅಚ್ಚುಮೆಚ್ಚಿನ ತಾಣಗಳಾಗಿದ್ದವು. ನಾನೋ ಮೊದಲಿನಿಂದಲೂ ನೀರ್ಮಳ್ಳಿ. ಪುಟ್ಟ ಕೆರೆ ಕಂಡರೂ ತುಂಬಾ ಖುಷಿ ಪಡುವವಳು. ಒಂದು ದಿವಸ ಅಜ್ಜಿಯ ಸೊಂಟವೇರಿ ನಾನು ತೋಟದಲ್ಲಿ ಸಾಗುತ್ತಿ¨ªಾಗ ಕೆರೆಯಾಚೆಯ ತೋಡಿನ ಬಳಿ ಆಳೊಬ್ಬ ಕೆಲಸ ಮಾಡುತ್ತಿದ್ದ. ಕುತೂಹಲಗೊಂಡು ನೋಡಿದರೆ, ಆತ ನೀರು ತುಂಬಿದ್ದ ತೋಡಿಗೆ ಅಡ್ಡವಾಗಿದ್ದನ್ನು ತೆಗೆಯುತ್ತಿದ್ದ. “”ಅಯ್ಯೋ.. ಹೀಗೆ ಮಾಡಿದ್ರೆ ಇನ್ನು ಮುಂದೆ ಆ ತೋಡಿನಲ್ಲಿ ಹೆಚ್ಚು ನೀರು ಕಾಣಿಸದಲ್ಲ” ಎಂದುಕೊಂಡು ಅಜ್ಜಿಯನ್ನು ಪ್ರಶ್ನಿಸಿ¨ªೆ. ಅದಕ್ಕೆ ಅಜ್ಜಿ, “”ತೋಡಲ್ಲಿ ತುಂಬಿದ ನೀರು ಮುಂದೆ ಹರಿಯಲಾಗದೇ ಎಷ್ಟೊಂದು ಕಸ ತುಂಬುತ್ತಿದೆ ನೋಡು. ಹಾಗೇ ಬಿಟ್ಟರೆ ಅದು ಸಂಪೂರ್ಣ ಹಾಳಾಗಿ ಹೋಗುವುದು. ನೀರೂ ಕಲ್ಮಶಗೊಂಡು ತೋಡನ್ನೇ ಮುಚ್ಚಬೇಕಾಗಬಹುದು. ಅದರ ಬದಲು ಅದನ್ನು ಬಿಡಿಸಿ ಅಗಲ ಮಾಡಿ ಹರಿಯಬಿಟ್ಟರೆ, ಅಗೋ ಅಲ್ಲಿದೆಯಲ್ಲ ಆ ದೊಡ್ಡ ಹೊಳೆಗೆ ಸೇರುವುದು. ಕಸ-ಕಡ್ಡಿಗಳೆಲ್ಲ ತೇಲಿ ಹೋಗುವುದು. ಅಲ್ಲಿಂದ ಸಮುದ್ರ ಸೇರುವುದು. ಅದು ಮತ್ತೂ ದೊಡ್ಡದಿದೆ. ಅಲ್ಲೆಲ್ಲ ಶುದ್ಧವಾಗುವುದು. ಇÇÉೇ ಇದ್ರೆ ತೋಡಿಗೆ ದೊಡ್ಡ ಸಮಸ್ಯೆ. ಹಾಗಾಗಿ, ದಾರಿ ಬಿಡಿಸಿಕೊಡಲಾಗುತ್ತಿದೆ” ಎಂದು ವಿವರವಾಗಿ ಹೇಳಿದ್ದರು.
ಎಷ್ಟು ನಿಜ ಅಲ್ಲವೇ? ಮುಖ್ಯವಾಹಿನಿಯಿಂದ ಬೇರ್ಪಟ್ಟು, ದೂರದÇÉೇ ಒಂಟಿಯಾಗಿದ್ದು ಬಿಟ್ಟರೆ ತೊರೆ ತೊರೆಯಾಗೇ ಉಳಿದು ಬಿಡುತ್ತದೆ. ಮುಂದೆ ಹರಿದು ಹೊಳೆ, ಸರೋವರ, ಸಮುದ್ರ ಸಿಗದೇ ಹೂಳು, ಕೆಸರು ತುಂಬಿ ಕ್ರಮೇಣ ಸಂಪೂರ್ಣ ಇಲ್ಲವಾಗಿಬಿಡುತ್ತದೆ. ಇದೇ ರೀತಿ ಸಮಾಜದಲ್ಲೂ ಕೂಡ. ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಅವರ ಸಮಸ್ಯೆಗಳ ಜೊತೆ ಜೋತಾಡುವುದಕ್ಕೆ ಬಿಟ್ಟು, ಅಸಂಬದ್ಧ ಮೂಢನಂಬಿಕೆಗಳನ್ನೂ ಅವರ ಮೇಲೆ ಹೇರಿ ದೂರವಿಟ್ಟು, ಬೆನ್ನು ತಿರುವಿದರೆ… ಅವರ ಬದುಕೂ ಹೂಳು, ಕೊಳೆ ತುಂಬಿದ ತೋಡಿನಂತೇ ಆಗಿಬಿಡುತ್ತದೆ, ಅಲ್ಲವೆ?
ಈ ನೆನಪು ಮತ್ತು ಮರೆವು ಎರಡೂ ತಮ್ಮ ಸ್ಥಾನಪಲ್ಲಟ ಮಾಡಿ ಬಿಟ್ಟರೆ… ಅಂದರೆ ಮರೆಯುವುದನ್ನು ನೆನಪಿಟ್ಟುಕೊಂಡು, ನೆನಪಿಟ್ಟುಕೊಳ್ಳಬೇಕಾದ್ದನ್ನು ಮರೆಯುವಂತಾಗಿಬಿಟ್ಟರೆ ಅದಕ್ಕಿಂತ ದೊಡ್ಡ ಕಷ್ಟ ಬೇರೊಂದಿಲ್ಲ! ಆದರೆ ಒಮ್ಮೊಮ್ಮೆ ಕಹಿ ನೆನಪುಗಳೂ ಮರೆಯಾಗದಿದ್ದರೇ ಚೆನ್ನ ! ಅವುಗಳು ಒಂಥರ ಕಹಿ ಟಾನಿಕ್‌ಗಳಿದ್ದಂತೇ. ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿರುತ್ತವೆ. ಅದೇ ರೀತಿ ನನ್ನೊಳಗಿನ ಅದೆಷ್ಟೋ ಸಿಹಿ, ಕಹಿ ನೆನಪುಗಳೂ ಆಗಾಗ ಎಚ್ಚೆತ್ತು ಬಡಿದೆಬ್ಬಿಸುತ್ತಿರುತ್ತವೆ. ಅಂಥಾದ್ದೇ ಒಂದು ಸಣ್ಣ ನೆನಪೊಂದನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ.
ನಾನಾಗ ಬಾಲವಾಡಿಯನ್ನೂ ಸೇರಿರಲಿಲ್ಲ. ಮೂರೂವರೆ ವರುಷಗಳಾಗಿದ್ದಿರಬೇಕು. ಹಾಗಾಗಿ, ಎಲ್ಲವೂ ಸುಸ್ಪಷ್ಟವಾಗಿ ನೆನಪಿಲ್ಲ. ಕೆಲವು ತುಣುಕುಗಳು ಮಸುಕಾಗಿದ್ದರೆ, ಉಳಿದ¨ªೆಲ್ಲವನ್ನೂ ಅಪ್ಪ, ಅಮ್ಮ ನನ್ನಲ್ಲಿ ಹೇಳಿದ್ದು. ಹುಟ್ಟುತ್ತಲೇ ಕಾಲುಗಳಲ್ಲಿ ಶಕ್ತಿ ಇಲ್ಲದ ನನ್ನ ಭವಿಷ್ಯತ್ತಿನ, ಅದರಲ್ಲೂ ವಿದ್ಯಾಭ್ಯಾಸದ ಚಿಂತೆ ಹೆತ್ತವರಿಗೆ ಸಹಜವಾಗಿ ಆವರಿಸಿತ್ತು.
ಇದನ್ನು ಅಪ್ಪ ತನ್ನ ಸ್ನೇಹಿತರಲ್ಲಿ ಹಂಚಿಕೊಂಡಾಗ, ಒಂದಿಬ್ಬರು ಮಂಗಳೂರಿನ ವಾಮಂಜೂರಿನಲ್ಲಿದ್ದ ಅಂಗವಿಕಲರ ಸ್ಪೆಷಲ್ ಸ್ಕೂಲಿಗೆ ಸೇರಿಸಲು ಸಲಹೆ ನೀಡಿ ಒತ್ತಾಯಿಸಿದ್ದರಂತೆ. ಆದರೆ ಅಲ್ಲಿ ಕೆಲವು ಸಾಮಾನ್ಯ ಮಕ್ಕಳೂ ಅಭ್ಯಾಸ ಮಾಡುತ್ತಿದ್ದರು. ಅರೆ ಮನಸ್ಸಿನೊಂದಿಗೇ ನನ್ನನ್ನು ಅಪ್ಪ ಅಲ್ಲಿಗೆ ಕರೆದೊಯ್ದಿದ್ದು. ನನಗೆ ಬೇರೇನೂ ನೆನಪಿಲ್ಲ. ಹಳದಿ ಬಸ್ಸುಗಳು, ಹಳೆಯ ಕಟ್ಟಡ, ವಿವಿಧ ರೀತಿಯ ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳು. ಇವಿಷ್ಟು ಇನ್ನೂ ನೆನಪಿವೆ. ಆದರೆ, ನಾನು ಅದೇ ದಿನ ರಾತ್ರಿ ಅಪ್ಪನ ಬಳಿ ರಚ್ಚೆ ಹಿಡಿದು ಅತ್ತಿ¨ªೆನಂತೆ. “”ನಾನು ಅಲ್ಲಿಗೆ ಕಲಿಯಲು ಹೋಗುವುದಿಲ್ಲ.
ಪಕ್ಕದ ಮನೆಯ ಮಕ್ಕಳೆಲ್ಲ ಹೋಗುವ ಶಾಲೆಗೇ ಹೋಗುವೆ” ಎಂದು. ಅಲ್ಲದೇ, ರಾತ್ರಿಯಿಡೀ ಉರಿವ ಜ್ವರದಲ್ಲಿ ನರಳಿ¨ªೆನಂತೆ. ಅಷ್ಟೇ… ಅಪ್ಪ ನಿರ್ಧರಿಸಿದ್ದರು. “”ತನ್ನ ಮಗಳನ್ನು ಸಮಾಜದ ಮುಖ್ಯವಾಹಿನಿಯÇÉೇ ಬೆಳೆಸುವೆ. ಎಲ್ಲರಂತೆ ವಿದ್ಯಾಭ್ಯಾಸ ಕೊಡಿಸುವೆ. ಇವಳು ಎಲ್ಲರೊಂದಿಗೆ ಬೆರೆತು ಬೆಳೆಯಬೇಕು” ಎಂದು. ಒಂದೊಮ್ಮೆ ನನ್ನೊಳಗಿನ ಸ್ವಸ್ಥ ಚೈತನ್ಯ ಸಕಾಲದಲ್ಲಿ ಪ್ರತಿರೋಧ ತೋರದೇ ಇರುತ್ತಿದ್ದರೆ… ಅದರ ಪ್ರಾರ್ಥನೆಗೆ ಅಪ್ಪ , ಅಮ್ಮ ಸ್ಪಂದಿಸದೇ ಇದ್ದಿದ್ದರೆ, ನಾನು ಕಲಿತ ಶಾಲೆ/ಕಾಲೇಜುಗಳು, ಸ್ನೇಹಿತ ವರ್ಗ ಇವರೆಲ್ಲ ನನಗೆ ಸಹಕರಿಸದೇ ಇದ್ದಿದ್ದರೆ… ನಾನಿಂದು ಎಲ್ಲಿರುತ್ತಿ¨ªೆನೋ ಎಂಬುದನ್ನು ಊಹಿಸಲೂ ಅಸಾಧ್ಯ! ಮಕ್ಕಳಲ್ಲಿ ದೈಹಿಕ/ಮಾನಸಿಕ ಯಾವುದೇ ರೀತಿಯ ಸಣ್ಣ, ದೊಡ್ಡ ಸಮಸ್ಯೆಗಳಿದ್ದಿರಲಿ, ನಾವವರನ್ನು ಮನೆಯೊಳಗೇ ಮುಚ್ಚಿಟ್ಟು ಕೂಡಿಡಬಾರದು. ಅವರಲ್ಲಿ ಕೀಳರಿಮೆ ತುಂಬದೇ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಮಾಜದ ಮುಖ್ಯವಾಹಿನಿಯÇÉೇ ಆದಷ್ಟು ಬೆಳೆಸಬೇಕು.
ಒಮ್ಮೆ ನನ್ನಲ್ಲಿ ಓರ್ವ ಗೆಳತಿ, “ತನ್ನ ಕುಬjತೆಯಿಂದಾಗಿ ತಾನು ಅದೆಂತು ಕೀಳರಿಮೆ ಅನುಭವಿಸುತ್ತಿದ್ದೇನೆ. ಅಕ್ಕಪಕ್ಕದಲ್ಲಿರುವ ಕೆಲವರು ತನ್ನನ್ನು ಹೇಗೆ ಗೇಲಿ ಮಾಡಿ ದೂಷಿಸುತ್ತಿ¨ªಾರೆ, ಕೆಲವು ನೆಂಟರು ಅವಹೇಳನ ಮಾಡಿ ಚುಚ್ಚುತ್ತಾರೆ’ ಎಂದೆಲ್ಲ ತನ್ನ ನೋವನ್ನು ತೋಡಿಕೊಂಡಿದ್ದಳು. ಇದೇ ರೀತಿ ತಮ್ಮದಲ್ಲದ ತಪ್ಪಿಗಾಗಿ, ತಮ್ಮೊಳಗಿನ ಸಮಸ್ಯೆ ಯಾವ ರೀತಿಯಲ್ಲೂ ಇತರರನ್ನೂ ಬಾಧಿಸದೇ ಇದ್ದರೂ ನಿರಂತರ ಅವಹೇಳನಕ್ಕೆ ಒಳಗಾಗುತ್ತಿರುವವರ ಸಂಖ್ಯೆಯೇ ದೊಡ್ಡದಿದೆ. ನಾನೂ ಇಂಥ ಅನೇಕಾನೇಕ ಕುಹಕಗಳನ್ನು ಎದುರಿಸಿಯೇ ಬೆಳೆದವಳು.
ಆಕ್ರೋಶಗೊಂಡಾಗೆಲ್ಲ ಅಪ್ಪ ಹೇಳಿದ್ದ ಮಾತು ನೆನಪಿಗೆ ಬರುತ್ತದೆ. ಸಮಾಜ ನಮಗಿಂತ ಭಿನ್ನವಲ್ಲ , ನಮ್ಮೊಳಗೂ ಸಣ್ಣಪುಟ್ಟ ಕುಂದುಕೊರತೆಗಳು ಇದ್ದೇ ಇರುತ್ತವೆ. ಅದೇ ರೀತಿ ನಮ್ಮ ಸುತ್ತಮುತ್ತಲೂ ಒಳತಿನ ಜೊತೆಗೆ ಕೆಡುಕೂ ಇದ್ದೇ ಇರುತ್ತದೆ. ಧನಾತ್ಮಕ ವಿಚಾರಗಳನ್ನು, ಅಂಥ ವ್ಯಕ್ತಿ/ವ್ಯಕ್ತಿತ್ವಗಳನ್ನು ಹೆಚ್ಚೆಚ್ಚು ನಮ್ಮ ಒಡನಾಟದಲ್ಲಿಟ್ಟುಕೊಂಡರೆ, ಇಂಥ ಕೆಲಸಕ್ಕೆ ಬಾರದ ವ್ಯಂಗ್ಯ, ಕುಹಕ, ಗೇಲಿಗಳನ್ನು ನಾವು ಖಂಡಿತ ಮೀರಬÇÉೆವು. ನಮ್ಮ ಬದುಕು ನಮ್ಮದು. ಹಾಗಾಗಿ, ನಮ್ಮ ಬದುಕಿಗೆ ಸಂಬಂಧ ಪಡದವರ ಯಾವ ಕೊಂಕು, ವ್ಯಂಗ್ಯವೂ ನಮ್ಮನ್ನು ಘಾಸಿ ಮಾಡದಂಥ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವುದು ಅವಶ್ಯ.
ಸಾಗರ ಎಂದಾಕ್ಷಣ ನೆನಪಿಗೆ ಬರುವುದೇ ಅದರ ಸುವಿಶಾಲ ಮೇಲ್ಮೆ„. ಅದು ತನ್ನೊಳಗೆ ಸೇರಿದ ಕಸ, ಕೊಳಕನ್ನೆಲ್ಲ ತೆರೆಗಳ ಹೆಡೆಯ ಮೇಲೆ ಹೊತ್ತು ತಂದು ದಡದಲ್ಲಿ ಹಾಕಿ ಮರಳಿ, ತನ್ನೊಳಗೆ ತಾನು ನಿರುಮ್ಮಳವಾಗಿ ಭೋರ್ಗರೆಯುತ್ತಿರುತ್ತದೆ. ಸಾಗರ ಕಿನಾರೆ ನನ್ನ ಅಚ್ಚುಮೆಚ್ಚಿನ ತಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.