ನೇಹಾ ಸ್ನೇಹಾ
Team Udayavani, Jan 22, 2017, 3:45 AM IST
ಮುಂಗಾರು ಮಳೆ-2 ಬಿಡುಗಡೆಯಾಗಿ ಇಷ್ಟು ದಿನವಾದರೂ ನೇಹಾ ಕಡೆಯಿಂದ ಹೊಸ ಸಿನೆಮಾದ ಸುದ್ದಿ ಬಂದಿಲ್ಲ !
ಹಾಗೊಂದು ಪ್ರಶ್ನೆ ಬರುವುದು ಸಹಜವೇ. ಏಕೆಂದರೆ, ಮುಂಗಾರು ಮಳೆ 2 ಚಿತ್ರದ ಗಳಿಕೆ ಮತ್ತು ಜನಪ್ರಿಯತೆಗಳೇನೇ ಇರಲಿ, ಚಿತ್ರ ಮಾತ್ರ ಬಹಳ ದೊಡ್ಡ ಹೈಪ್ ಹುಟ್ಟುಹಾಕಿತ್ತು. ಅದರಲ್ಲೂ ಚಿತ್ರದ ನಾಯಕಿ ನೇಹಾ ಶೆಟ್ಟಿ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ, ಚಿತ್ರ ಬಿಡುಗಡೆಯಾಗಿ ಐದು ತಿಂಗಳಾಗುತ್ತಿವೆ. ಈ ಮಧ್ಯೆ, ಚಂದನ್ ಶೆಟ್ಟಿಯವರ ಚಾಕ್ಲೆಟ್ ಗರ್ಲ್ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ನೇಹಾ ಶೆಟ್ಟಿ ಯಾವುದೇ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಬಂದಿಲ್ಲ. ಇಷ್ಟಕ್ಕೂ ಚಾಕ್ಲೆಟ್ ಗರ್ಲ್ ನೇಹಾ ಯಾಕೆ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಮುಂಗಾರು ಮಳೆ-2 ಚಿತ್ರ ಬಿಡುಗಡೆಗೂ ಮುನ್ನವೇ ನನಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ, ನಾನು ಸಿನೆಮಾ ಬಿಡುಗಡೆಯಾದ ಮೇಲೆ ಒಪ್ಪಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ಈಗ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ. ಮುಂಗಾರು ಮಳೆ-2 ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದೊಂದು ಬೆಂಚ್ ಮಾರ್ಕ್. ಎರಡನೇ ಚಿತ್ರದ ಪಾತ್ರ ಕೂಡಾ ವಿಭಿನ್ನವಾಗಿರಬೇಕೆಂಬ ಆಸೆ ನನ್ನದು. ಸಿನೆಮಾದಿಂದ ಸಿನೆಮಾಕ್ಕೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಆಗ ಮಾತ್ರ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ನಂಬಿರುವವಳು ನಾನು. ಇಲ್ಲಿವರೆಗೆ ಬಂದ ಆಫರ್‌ಗಳೇನೋ ಚೆನ್ನಾಗಿವೆ. ಆದರೆ ನಾನು ಬಯಸಿರುವಂತಹ ಪಾತ್ರ ಅದರಲ್ಲಿ ಇರಲಿಲ್ಲ. ಹಾಗಾಗಿ, ಮತ್ತೆ ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. ಸದ್ಯದಲ್ಲೇ ನನ್ನ ಕಡೆಯಿಂದ ಸಿನೆಮಾ ಸುದ್ದಿ ಬರುತ್ತದೆ’ ಎನ್ನುತ್ತಾರೆ ಅವರು.
ನೇಹಾಗೆ ತಮ್ಮ ಮೊದಲ ಚಿತ್ರ ಮುಂಗಾರು ಮಳೆ 2 ತುಂಬಾನೇ ತೃಪ್ತಿ ಕೊಟ್ಟಿದೆಯಂತೆ. ಅದೊಂದು ಪರಿಪೂರ್ಣ ಪ್ಯಾಕೇಜ್ ಸಿನೆಮಾ ಆಗಿತ್ತು ಎಂಬುದು ಅವನ ನಂಬಿಕೆ. ಮೊದಲ ಚಿತ್ರದಲ್ಲೇ ತುಂಬಾ ಸ್ಕೋಪ್ ಇರುವ ಪಾತ್ರ ಸಿಕ್ಕಿದ್ದರಿಂದ, ಮುಂದಿನ ಚಿತ್ರಗಳಲ್ಲೂ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯ ಇರುವಂಥ ಪಾತ್ರಗಳನ್ನು ಎದುರು ನೋಡುತ್ತಿದ್ದಾರಂತೆ ಅವರು. “ಒಂದು ಕಥೆ ಕೇಳಿ ನನಗೆ ಇಷ್ಟವಾದರೆ ಆ ನಂತರ ಮಮ್ಮಿ, ಡ್ಯಾಡಿ ಹಾಗೂ ನನ್ನ ತಂಗಿಯಲ್ಲೂ ಡಿಸ್ಕಸ್ ಮಾಡುತ್ತೇನೆ. ಏಕೆಂದರೆ, ಒಂದು ಸಿನೆಮಾ ಒಪ್ಪಿಕೊಳ್ಳುವ ಮುನ್ನ ಪ್ರತಿಯೊಬ್ಬರ ಅಭಿಪ್ರಾಯ ಮುಖ್ಯ. ನನ್ನ ದೊಡ್ಡ ಕ್ರಿಟಿಕ್ ಎಂದರೆ ನನ್ನ ತಂದೆ. ಅವರು ನೇರವಾಗಿ ಹೇಳುತ್ತಾರೆ’ ಎನ್ನುತ್ತಾರೆ ನೇಹಾ.
ಇನ್ನು ನೇಹಾಗೆ ಕನ್ನಡವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೂ ಆಸಕ್ತಿ ಇದೆಯಂತೆ. “”ಆಸಕ್ತಿ ಹೆಚ್ಚಿದೆ ಅನ್ನುವುದಕ್ಕಿಂತ ಎಲ್ಲಾ ಭಾಷೆಯ ಸಿನೆಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಯಾವುದೇ ಒಂದು ಕ್ಷೇತ್ರಕ್ಕೆ ಹೋಗುವ ಮುನ್ನ ನಾವು ಪರಿಪೂರ್ಣವಾಗಿರಬೇಕು. ಅದೇ ಕಾರಣದಿಂದ ನಾನು ಕೂಡಾ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ. ಈಗಾಗಲೇ ಕೂಚುಪುಡಿ ಅಭ್ಯಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕುದುರೆ ಸವಾರಿ ಕೂಡಾ ಕಲಿಯುತ್ತೇನೆ. ಎಲ್ಲ ವಿಷಯದಲ್ಲಿ ಪಫೆìಕ್ಟ್ ಆಗಿರಬೇಕೆಂಬುದು ನನ್ನ ಆಸೆ” ಎಂಬುದು ನೇಹಾ ಅವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.