ದಂತಮಂದಿರದ ನಿಜಕತೆ


Team Udayavani, Jan 22, 2017, 3:45 AM IST

danta-mandira.jpg

ಸಂಜೆಯ ಹೊತ್ತು;ಬೆಣ್ಣೆ ಮು¨ªೆಯಂತೆ ಆಕಾಶದಲ್ಲಿ ಪೂರ್ಣ ಚಂದ್ರ ಮೇಲೇರುತ್ತಿದ್ದ.ಶ್ವೇತ ವಸ್ತ್ರಧಾರಿಗಳಾಗಿ ಜನರು ಗುಂಪಿನಲ್ಲಿ ಕೈಯಲ್ಲಿ ಬಿಳಿ ಮಲ್ಲಿಗೆ-ನೇರಳೆ ಕಮಲ ಹಿಡಿದು ಏನೋ ಮಣಮಣಿಸುತ್ತಾ ಮುನ್ನಡೆಯುತ್ತಿದ್ದರು. ಪಕ್ಕದಲ್ಲಿ ಕೆರೆ,ಅಲ್ಲಲ್ಲಿ ಮರಗಳ ನಡುವೆ ಭವ್ಯ ಬಿಳಿ ಕಟ್ಟಡ. ಮೊದಲ ನೋಟಕ್ಕೆ ಪಕ್ಕಾ ತೋಟದ ಅರಮನೆ ! ದೂರದಿಂದ ನೋಡಿದಾಗ ವಾಸ್ತುಶಿಲ್ಪದಲ್ಲಿ ಅಂಥಾ ವಿಶೇಷವೇನೂ ಕಾಣಿಸಲಿಲ್ಲ. ಆದರದು ಬೌದ್ಧರಿಗೆ ಪರಮ ಪವಿತ್ರವಾದ, ದಂತ ದೇಗುಲ.

1988ರಲ್ಲಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂಬ ಮಾನ್ಯತೆ ಪಡೆದ ನಗರ, ಶ್ರೀಲಂಕಾದ ಕ್ಯಾಂಡಿ. ರಾಜಧಾನಿ ಕೊಲೊಂಬೋ ನಂತರದ ಅತಿ ದೊಡ್ಡ ನಗರ. ರಾಜಸೊತ್ತಿಗೆಯ ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಕ್ಯಾಂಡಿ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಮುಖ ನಗರ. ನಗರದ ಹೃದಯ ಭಾಗದಲ್ಲಿರುವ ಕ್ಯಾಂಡಿ ಕೆರೆಯ ಅಂಚಿನಲ್ಲಿ ವಿಶಾಲವಾದ ಬಹು ಕಟ್ಟಡ ಸಮುಚ್ಚಯವಿದೆ. ರಾಜರ ಅರಮನೆ, ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಅಂತಾರಾಷ್ಟ್ರೀಯ ಬೌದ್ಧ ವಸ್ತು ಸಂಗ್ರಹಾಲಯಗಳ ನಡುವೆ ಎದ್ದು ಕಾಣುವುದು, ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರ ದಲದ ಮಾಲಿಗವಾ(ಪವಿತ್ರ ದಂತ ದೇಗುಲ)    

ದಂತದ ಕತೆ
ಈ ದೇಗುಲದಲ್ಲಿ ಇರುವುದು ಬುದ್ಧನ ದಂತ ಎಂದು ನಂಬಲಾಗಿದೆ. ನಮ್ಮ ಭಾರತದ ಬುದ್ಧನ ದಂತ ಕ್ಯಾಂಡಿಗೆ ಹೋಗಿದ್ದರ ಹಿಂದೆ ದೊಡ್ಡ ಕತೆಯೇ ಇದೆ. ಭಾರತದ ಕುಶಾನಗರದಲ್ಲಿ ಬುದ್ಧನ ಪರಿನಿರ್ವಾಣದ ನಂತರ ಚಿತೆಯಲ್ಲಿ ಉಳಿದ ನಾಲ್ಕು ಪವಿತ್ರ ದಂತಗಳಲ್ಲಿ ಒಂದನ್ನು ಕಳಿಂಗದ ರಾಜ ಪಡೆದು,ದಂತಪುರಿಯಲ್ಲಿ ಇಟ್ಟು ಪೂಜಿಸುತ್ತಾನೆ. ಅತ್ಯಂತ ಮಹಿಮೆಯುಳ್ಳ ಈ ದಂತದ ಮೇಲೆ ಎಲ್ಲರ ಕಣ್ಣು,ತಮ್ಮದಾಗಿಸಿಕೊಳ್ಳಲು ಹೋರಾಟ. ಏಳೆಂಟು ಶತಮಾನಗಳ ಕಾಲ ಹಲ್ಲಿಗಾಗಿ ಯುದ್ಧ ! ಕಡೆಗೆ ರಾಜ ಗುಹಶಿವನ ಮಗಳು ಹೇಮಮಾಲಿ ಮತ್ತು ಅಳಿಯ ದಂತ ಪವಿತ್ರ ದಂತವನ್ನು ಲಂಕೆಯ ಅನುರಾಧಪುರಕ್ಕೆ ತರುತ್ತಾರೆ. ದಕ್ಷಿಣಭಾರತದ ಪಾಂಡ್ಯ ಹಾಗೂ ಚೋಳ ರಾಜರಿಂದ ಸತತವಾಗಿ ಲಂಕೆಯ ಮೇಲೆ ದಾಳಿ ನಡೆದರೂ ಅಲ್ಲಿನ ಅರಸರು ಅತ್ಯಂತ ಭಕ್ತಿ ಮತ್ತು ಕಾಳಜಿಯಿಂದ ಪವಿತ್ರ ದಂತದ ರಕ್ಷಣೆ ಮಾಡುತ್ತಾರೆ. ಹೀಗೆ, ದಂತ ಒಂದು ಸ್ಥಳದಿಂದ ಇನ್ನೊಂದೆಡೆ ವರ್ಗಾವಣೆಯಾಗುತ್ತಲೇ ಇರುತ್ತದೆ.ಅಂತೂ ಹಲವಾರು ರಾಜಮನೆತನದವರ ಪ್ರತಿಷ್ಠೆ -ಪೂಜಾವಸ್ತುವಾಗಿದ್ದ ಈ ದಂತವನ್ನು ಹದಿನೇಳನೇ ಶತಮಾನದಲ್ಲಿ ಇಂದಿನ ಕ್ಯಾಂಡಿಯಲ್ಲಿ ದೇಗುಲ ಕಟ್ಟಿಸಿ ಭದ್ರವಾಗಿಟ್ಟ ಕೀರ್ತಿ, ದೊರೆ ವೀರ ನರೇಂದ್ರ ಸಿಂಹನದ್ದು. 
ವಾರದ ಏಳೂ ದಿನಗಳೂ ಬೆಳಿಗ್ಗೆ ಐದೂವರೆಯಿಂದ ರಾತ್ರಿ ಎಂಟರವರೆಗೆ ದೇಗುಲ ತೆರೆದಿರುತ್ತದೆ. 

ಸಂಗೀತ ಸೇವೆ
    ಮಹಾದ್ವಾರದಲ್ಲಿ ಸುಂದರವಾದ ಮಕರತೋರಣವಿದ್ದು ಇಕ್ಕೆಲಗಳಲ್ಲಿ ಗಜರಾಜನ ಕೆತ್ತನೆಗಳಿವೆ. ಪವಿತ್ರ ದಂತವನ್ನು ದೇಗುಲದೊಳಗೆ ದೊಡ್ಡ ಆನೆ ದಂತದ ಹಿಂದೆ ಎರಡು ಮಹಡಿಯ ಗರ್ಭಗುಡಿಯಲ್ಲಿ ಇರಿಸಲಾಗಿದೆ. ಕೆಳಗಿನ ಅಂತಸ್ತಿನಲ್ಲಿ ವಾದ್ಯಗಾರರ ಅಂಗಳವಿದ್ದು ದಿನಕ್ಕೆ ಮೂರು ಬಾರಿ ಪವಿತ್ರ ದಂತಕ್ಕೆ ವಾದ್ಯ ಸೇವೆ ಸಲ್ಲುತ್ತದೆ. ತೆವಾವಾ ಎಂದು ಕರೆಯಲಾಗುವ ಈ ಸೇವೆಯಲ್ಲಿ ಐದು ಬಗೆಯ ಸಂಗೀತ ವಾದ್ಯಗಳನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿ ಮತ್ತು ಆವೇಶದಿಂದ ಕಲಾವಿದರು ಬಡಿಯುತ್ತಿದ್ದರೆ ನೆರೆದವರಲ್ಲಿ ಭಾವ ಸಂಚಾರ.  

ಗರ್ಭಗುಡಿ
      ಸುತ್ತಲೂ ಚಿನ್ನದ ಲೇಪನ ಮತ್ತು ಆನೆದಂತದ ಕೆತ್ತನೆ ಕಾಣಬಹುದು. ಮೇಲಿನ ಅಂತಸ್ತಿನಲ್ಲಿ ಬೆಳ್ಳಿ- ಬಂಗಾರದ ಬಾಗಿಲಿನ ಬಿಗಿ ಭದ್ರತೆಯ ಒಳಕೋಣೆ. ಅದರೊಳಗೆ ಪೀಠದ ಮೇಲಿರುವ ಸ್ವರ್ಣಕಮಲದ ಮೇಲೆ ಒಂದರ ಒಳಗೆ ಏಳು ಪೆಟ್ಟಿಗೆಗಳು.ಅವು ಮುತ್ತು ರತ್ನ ವಜ್ರಗಳಿಂದ ಮಾಡಲ್ಪಟ್ಟಿವೆ.ಅದರೊಳಗೆ ಕರಂಡಕದಲ್ಲಿ ಬುದ್ಧನ ಪವಿತ್ರ ದಂತವಿದೆ. ಪವಿತ್ರ ದಂತದ ಸಮೀಪ ದರ್ಶನ ಸಾಧ್ಯವಿಲ್ಲ, ಬಾಗಿಲು ತೆರೆದಾಗ ಕಾಣುವುದು ನವರತ್ನಗಳಿಂದ ಥಳಥಳ ಹೊಳೆವ ಕಿರೀಟದಾಕಾರದ ಕರಂಡಕ ಮಾತ್ರ. ಪ್ರತಿ ಬುಧವಾರ ಪವಿತ್ರ ದಂತಕ್ಕೆ ಗಿಡಮೂಲಿಕೆಗಳು,ಸುಗಂಧಿತ ಜಲ ಮತ್ತು ಪರಿಮಳಯುಕ್ತ ಪುಷ್ಪಗಳಿಂದ ಸಾಂಕೇತಿಕ ಮಜ್ಜನ (ನನುಮುರ ಮಂಗಲ್ಯಾ) ನಡೆಯುತ್ತದೆ. ಈ ಪುಣ್ಯ ತೀರ್ಥ, ರೋಗಹರ ಎಂದು ಜನರು ಅದನ್ನು ಪಡೆಯಲು ಸರದಿಯಲ್ಲಿ ನಿಂತು ಕಾಯುತ್ತಾರೆ. ದೇಗುಲದ ಸುತ್ತಲ ಪ್ರಾಕಾರದ ಮೇಲೆ ಬುದ್ಧನ ಜನನದಿಂದ ಪರಿನಿರ್ವಾಣ ಮತ್ತು ಪವಿತ್ರ ದಂತದ ಕತೆಯನ್ನು ದೊಡ್ಡ ಚಿತ್ರಗಳ ಮೂಲಕ ನಿರೂಪಿಸಲಾಗಿದೆ.ಅದರಲ್ಲಿ ಗಮನ ಸೆಳೆಯುವ ಚಿತ್ರ ದಂತ ಮತ್ತು ರಾಜಕುಮಾರಿ ಹೇಮಮಾಲಿಯರದ್ದು.  ಆಕೆ ತನ್ನ ತಲೆಯ ತುರುಬಿನಲ್ಲಿ ಈ ಪವಿತ್ರ ದಂತವನ್ನು ಅಡಗಿಸಿ ಭಾರತದಿಂದ ಲಂಕೆಗೆ ಸಾಗಿಸುತ್ತಿರುವ ದೃಶ್ಯ ಮನೋಹರವಾಗಿದೆ.

ಎಸಲ ಪೆರೇರ
ತಮ್ಮ ಮನೋಕಾಮನೆ ಪೂರ್ತಿಯಾಗಲೆಂದು ಪ್ರಾರ್ಥಿಸಿ ಇಲ್ಲಿ ಬರುವ   ಸಿಂಹಳೀಯರಷ್ಟೇ ಅಲ್ಲ, ಚೀನಿಯರು, ಜಪಾನೀಯರು, ಪೋರ್ಚುಗೀಸರು, ಬ್ರಿಟಿಷರು, ಭಾರತೀಯರು ಎಲ್ಲರಿಗೂ ಪವಿತ್ರ ದಂತದಶಕ್ತಿಯಲ್ಲಿ ಅಪಾರ ನಂಬಿಕೆ. ಈ ಪವಿತ್ರ ದಂತ ಇದ್ದಲ್ಲಿ ಸುಖ-ಶಾಂತಿ-ನೆಮ್ಮದಿ ಇರುತ್ತದೆ ಎಂದು ಹೇಳಲಾಗುತ್ತದೆ.ಕ್ಯಾಂಡಿಯಲ್ಲಿ ಜೂನ್‌- ಜುಲೈನಲ್ಲಿ ನಡೆಯುವ ಎಸಲ ಪೆರೇರ ಉತ್ಸವದಲ್ಲಿ ಪವಿತ್ರ ದಂತದ ಮೆರವಣಿಗೆಯೇ ಪ್ರಮುಖ ಆಕರ್ಷಣೆ. ಹಿಂದೆಂದೋ ಲಂಕೆಯಲ್ಲಿ ಭೀಕರ ಬರಗಾಲ ಬಂದಿತ್ತು. ಮಳೆ-ಬೆಳೆಯಿಲ್ಲದೇ ಜನರು ತತ್ತರಿಸುತ್ತಿದ್ದರು.ಆಗ ಧರ್ಮಗುರುಗಳ ಆದೇಶದಂತೆ ಬುದ್ಧನ ಪವಿತ್ರ ದಂತವನ್ನು ಏಳು ದಿನ ಪೂಜಿಸಿದರು. ಆಗ ಮಳೆಯಾಗಿ ನಾಡು ಸುಭಿಕ್ಷವಾಯಿತು. ಅಂದಿನಿಂದ ಈ ಉತ್ಸವವನ್ನು ಪ್ರತಿ ವರ್ಷ ನಡೆಸಲಾಗುತ್ತದೆ . 

ಆನೆಗೂ ಸ್ಥಾನ
ದೇಗುಲದ ಎಡಭಾಗದಲ್ಲಿರುವ ಕಟ್ಟಡದಲ್ಲಿ ಮಾಲಿಗವಾ ತಸ್ಕರ್‌ ರಾಜಾ ಎಂಬ ಅತ್ಯುನ್ನತ ಗೌರವ ಪಡೆದ ಆನೆಯ ಪಳೆಯುಳಿಕೆಯನ್ನು ಇಡಲಾಗಿದೆ. 1925 ರಲ್ಲಿ ಎರಾವುರ್‌ ಕಾಡಿನಿಂದ ಹಿಡಿಯಲ್ಪಟ್ಟ ಗಂಡಾನೆ ರಾಜಾ, ಭಕ್ತರಿಂದ ದೇಗುಲಕ್ಕೆ ದಾನವಾಗಿ ಬಂದು ಸೇರಿತು. ಸುಮಾರು ಐವತ್ತು ವರ್ಷಗಳ ಕಾಲ ಬುದ್ಧನ ದಂತವಿರುವ ಕರಂಡಕವನ್ನು ಹೊತ್ತು ಮೆರವಣಿಗೆ ನಡೆಸಿದ್ದು ಇದೇ ರಾಜಾ. 1984ರಲ್ಲಿ ರಾಜಾನನ್ನು ರಾಷ್ಟ್ರೀಯ ನಿಧಿ ಎಂದು ಘೋಷಿಸಲಾಯಿತು. 1988ರಲ್ಲಿ ನಿಧನದ ಬಳಿಕ ಚರ್ಮಪ್ರಸಾಧನ ಬಳಸಿ ನೈಜವಾಗಿ ಕಾಣುವಂತೆ ಸಂರಕ್ಷಿಸಿಡಲಾಗಿದೆ.

– ಡಾ. ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.