ನಿಯಮ ಪಾಲನೆಯಿಂದ ಸಾನ್ನಿಧ್ಯ ವೃದ್ಧಿ: ಸುಬ್ರಹ್ಮಣ್ಯ ಭಟ್
Team Udayavani, Jan 22, 2017, 3:45 AM IST
ಮಲ್ಪೆ: ದೇವಸ್ಥಾನದ ನಿಯಮ, ಕಟ್ಟುಕಟ್ಟಳೆಗಳನ್ನು ಆಡಳಿತ ವರ್ಗ ಮತ್ತು ಭಕ್ತರು ಯಥಾವತ್ತಾಗಿ ಪಾಲಿಸಿದರೆ ದೇವಸ್ಥಾನದ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ವಾಸ್ತುತಜ್ಞ, ಅವಧಾನಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಕೋಡಿಬೆಂಗ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಯಲ್ಲಿ ಶನಿವಾರ ಧಾರ್ಮಿಕ ಪ್ರವಚನ ನೀಡಿದರು.
ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ನಾಗರಾಜ ಬಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಜಿ. ಪಂ. ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಮತೊÕ éàದ್ಯಮಿ ಸದಾನಂದ ಸಾಲಿಯಾನ್, ಕೋಡಿ ಗ್ರಾ.ಪಂ. ಅಧ್ಯಕ್ಷೆ ರಂಜನಿ, ಉಡುಪಿ ವಕ್ಫ್ ಬೋರ್ಡ್ ಮಾಜಿ ಚೇರ್‌ಮನ್ ಬುಡಾನ್ ಭಾಷಾ ಸಾಹೇಬ್, ಅಂಚೆ ಇಲಾಖೆ ನಿವೃತ್ತ ಮೇಲ್ವಿಚಾರಕ ಶೀನಪ್ಪ ಡಿ. ಅಮೀನ್, ಕೋಡಿಬೆಂಗ್ರೆ ಶ್ರೀ ಕ್ಷೇತ್ರದ ಆಡಳಿಯ ಸಮಿತಿಯ ಉಪಾಧ್ಯಕ್ಷರಾದ ಸುಧಾಕರ ಎ. ಕುಂದರ್, ಮನೋಹರ್ ಎ. ಕುಂದರ್, ಕೋಡಿ ಬೆಂಗ್ರೆ ಶ್ರೀ ಕ್ಷೇತ್ರದ ಆಡಳಿಯ ಸಮಿತಿಯ ಕೋಶಾಧಿಕಾರಿ ಜಯ ಎಸ್. ಕುಂದರ್, ಕೋಡಿಬೆಂಗ್ರೆ ಶ್ರೀ ವಿಠಲ ರುಖುಮಾಯಿ ದೇವಸ್ಥಾನದ ಅಧ್ಯಕ್ಷ ರವಿ ಎಸ್. ಕರ್ಕೇರ, ಬೆಂಗ್ರೆ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಿ. ಗಂಗಾಧರ್ ಪಾಲನ್, ಬೆಂಗ್ರೆ ಪಡುತೋನ್ಸೆ ಶ್ರೀ ರಾಮ ಭಜನ ಮಂದಿರದ ಅಧ್ಯಕ್ಷ ಸತೀಶ್ ಕುಂದರ್, ಕೋಡಿಬೆಂಗ್ರೆ ಶ್ರೀ ದುರ್ಗಾದೇವಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಸಂದೀಪ್ ಎಸ್. ನಾಯ್ಕ ಉಪಸ್ಥಿತರಿದ್ದರು.
ಸಮ್ಮಾನ: ಈ ಸಂದರ್ಭದಲ್ಲಿ ದೇಗುಲದಲ್ಲಿ ಹಿಂದೆ ನಿಷ್ಠಾವಂತವಾಗಿ ಸೇವೆ ಸಲ್ಲಿಸಿದ ಪ್ರಮುಖರಾದ ದಾಸು ತಿಂಗಳಾಯ, ಭೋಜು ಮೆಂಡನ್, ಕಂಡಜರ ತಿಂಗಳಾಯ, ಸೋಮಯ್ಯ ಮೆಂಡನ್, ನಾಗೇಶ್ ಬೆನ್ನು, ಗುಣರಾಜ್ ಕುಂದರ್, ಸದಾಶಿವ ಎನ್. ಕುಂದರ್, ಜನಾರ್ದನ್ ಪಟೇಲ್, ದಿ| ಕೊಗ್ಗು ಪೂಜಾರಿ ಅವರ ಸ್ಮರಣಾರ್ಥ ಪುತ್ರ ವಾಸುದೇವ ಕೋಟ್ಯಾನ್, ದಿ| ಆನಂದ ಜತ್ತನ್ನ ಸ್ಮರಣಾರ್ಥ ಪುತ್ರ ರಾಮದಾಸ್ ಎ. ಜತ್ತನ್ನ ಅವರನ್ನು ಗೌರವಿಸಲಾಯಿತು. ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಶ್ರೀಯಾನ್ ವಂದಿಸಿದರು.
ಇಂದು ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ
ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇ ಶ್ವರೀ ಅಮ್ಮನವರ ವಿಶುದ್ಧ ಸಾನ್ನಿಧ್ಯ ಸಮೃದ್ಧಿಗೋಸ್ಕರ ಜ. 22ರಂದು ಬ್ರಹ್ಮ ಕುಂಭಾಭಿಷೇಕವು ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿದೆ. ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಧಾರ್ಮಿಕ ಸಭೆ ಜರಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.