ನಾನೇ ಬುದ್ಧಿವಂತನೆನ್ನುವ ಮನೋಭಾವ ತೊರೆಯಿರಿ


Team Udayavani, Jan 22, 2017, 3:45 AM IST

210117Astro01.jpg

ಉಡುಪಿ: “ನಾನೇ ಬುದ್ಧಿವಂತ’ ಎನ್ನುವ ಮನೋಭಾವನೆ ಅದೆಷ್ಟೋ ಪತ್ರಕರ್ತರಲ್ಲಿದೆ. ಆ ಭಾವವನ್ನು ತೊರೆಯಿರಿ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ, ಪರಿಸರ ತಜ್ಞ ಡಾ| ಎಚ್‌.ಸಿ. ಶರತ್‌ಚಂದ್ರ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ,ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಉಡುಪಿಯ ಐಎಂಎ ಭವನದಲ್ಲಿ ನಡೆಯುತ್ತಿರುವ “ಕರಾವಳಿ ಸಮಸ್ಯೆಗಳು-ಪರಿಹಾರ’ ಮಾಧ್ಯಮಗಳ ಪಾತ್ರದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅರ್ಥ ಮಾಡಿಕೊಳ್ಳದೆ ವರದಿ ಮಾಡುವುದರಿಂದ ಸಮಸ್ಯೆಯನ್ನು ನಾವೇ ಎಳೆದುಕೊಳ್ಳುತ್ತಿದ್ದೇವೆ. ಪರಿಣತಿಹೊಂದಿದ ಪತ್ರಕರ್ತರ ಕೊರತೆ ಇದೆ. ಸಮಸ್ಯೆಯ ಬಗ್ಗೆ ಅರಿತು ವರದಿ ಮಾಡುವುದು ಒಂದು ದೃಷ್ಟಿಕೋನವಾದರೆ, ಆ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯಗಳೇನು ಅನ್ನುವುದನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡಿ ವರದಿ ಮಾಡಬೇಕು. ಸಮಸ್ಯೆಗಳನ್ನೇ ಹೆಚ್ಚೆಚ್ಚು ತೋರಿಸುವುದು ಒಂದೇ ವರದಿಗಾರಿಕೆಯಲ್ಲ. ಒಳ್ಳೆಯ ವಿಚಾರಗಳ ಮೇಲೂ ಬೆಳಕು ಚೆಲ್ಲುತ್ತಲಿರಬೇಕು. ಪರಿಸರ ಸಮಸ್ಯೆ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರದಿ ಮಾಡಬೇಕು ಎಂದರು.

“ಪರಿಸರ ಮತ್ತು ಅಭಿವೃದ್ಧಿ-ತದ್ವಿರುದ್ಧ ಮುಖಗಳು’
ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿ, ಕಾಡು ನಾಶವಾಗುತ್ತಿದೆ. ಕೈಗಾರೀಕರಣ, ನಗರೀಕರಣವೇ ಅಭಿವೃದ್ಧಿ ಎನ್ನುವಂತಾಗಿ ಬಿಟ್ಟಿದೆ. ಹೀಗೆಯೇ ಮುಂದುವರಿದರೆ ನಮ್ಮ ಬದುಕೇ ಮುಂದೆ ನಾಶವಾಗ ಬಹುದು. ಕರಾವಳಿಯು ಸೂಕ್ಷ್ಮ ವಲಯವಾಗಿದೆ. ಇದನ್ನು ಉಳಿಸಿಕೊಳ್ಳದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ. ಮೂಲಸೌಕರ್ಯ ಕೊರತೆ ಇಲ್ಲದ ಕಾರಣ ಬೃಹತ್‌ ಕೈಗಾರಿಕೆಗಳು ಕರಾವಳಿಯ ಮೇಲೆ ಕಣ್ಣಿಟ್ಟಿವೆ. ಪರಿಸರ ಮತ್ತು ಅಭಿವೃದ್ಧಿ ಒಂದೇ ಅಲ್ಲ. ಒಂದೇ ನಾಣ್ಯದ 2 ಮುಖಗಳೂ ಅಲ್ಲ. ಅವುಗಳು ವಿರುದ್ಧ ಮುಖಗಳು ಎಂದು ಶರತ್‌ಚಂದ್ರ ಅವರು ತಿಳಿಸಿದರು.

ಮಾಧ್ಯಮ ಅಕಾಡೆಮಿ ಸದಸ್ಯರಾದ ವೆಂಕಟ ಸಿಂಗ್‌, ಮುತ್ತು ನಾಯಕ್‌, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ, ಅಕಾಡೆಮಿ ಕಾರ್ಯದರ್ಶಿ ಎಸ್‌. ಶಂಕರಪ್ಪ, ಸಂಘದ ಅಧ್ಯಕ್ಷ ಜಯಕರ ಸುವರ್ಣ ಉಪಸ್ಥಿತರಿದ್ದರು.

ಕೋಶಾಧಿಕಾರಿ ರಾಜೇಶ್‌ ಶೆಟ್ಟಿ ಸ್ವಾಗತಿಸಿದರು. ನಾಗರಾಜ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು. “ಕರಾವಳಿ ಅಭಿವೃದ್ಧಿ ಸಮಸ್ಯೆಗಳ ಕುರಿತು ಮಾಧ್ಯಮಗಳ ಪಾತ್ರ’ ಮತ್ತು  “ಮತೊÕéàದ್ಯಮ ಸಮಸ್ಯೆ- ಸವಾಲು’ ಇವುಗಳು ಕುರಿತು ಹಿರಿಯ ಪತ್ರಕರ್ತರಿಂದ ವಿಷಯ ಮಂಡನೆ ನಡೆಯಿತು. ಉಡುಪಿಯ ಮಾಧ್ಯಮದ ಸದಸ್ಯರಿಂದ “ನಳ ಕಾರ್ಕೋಟಕ’ ಯಕ್ಷಗಾನ ಮತ್ತು ಸೆಕೆಂಡ್‌ಹ್ಯಾಂಡ್‌ ಸದಾಶಿವ ನಾಟಕ ಪ್ರದರ್ಶನಗೊಂಡಿತು.

ನೈಸರ್ಗಿಕ, ಸಾಮಾಜಿಕ ಸಮಸ್ಯೆ: ಡಿಸಿ
ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕರಾವಳಿಯಲ್ಲಿ ನೈಸರ್ಗಿಕವಾಗಿ ಕಡಲ್ಕೊರೆತ, ಮತ್ಸé ಸಂಪತ್ತು ನಾಶದ ಸಮಸ್ಯೆ ಇದ್ದರೆ ಸಾಮಾಜಿಕವಾಗಿ ವಲಸೆ ಕಾರ್ಮಿಕರಿಗೆ ಶಿಕ್ಷಣ, ವಸತಿ ಸಮಸ್ಯೆ ಇದೆ. ಇದನ್ನು ಮಾಧ್ಯಮಗಳು ಬಿತ್ತರಿಸಬೇಕು. ಕೆಟ್ಟ ವಿಚಾರಗಳಿಗೆ ಮಾಧ್ಯಮಗಳು ಆದ್ಯತೆಯನ್ನು ನೀಡದೆ ಸಮಾಜಮುಖೀ, ಅಭಿವೃದ್ಧಿಪರ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು. 

ಮಹಿಳಾ ಪತ್ರಕರ್ತರ ಸಮಾವೇಶ: ಸಿದ್ಧರಾಜು
ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ಧರಾಜು ಅವರು ಮಾತನಾಡಿ, ಮಹಿಳಾ ಪತ್ರಕರ್ತರ ರಾಜ್ಯಮಟ್ಟದ ಸಮಾವೇಶವನ್ನು ವಿಜಯಪುರದಲ್ಲಿ ನಡೆಸಲು ಚಿಂತಿಸಲಾಗಿದೆ. ಸ್ನಾತಕೋತ್ತರ ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳಲ್ಲಿ ತರಬೇತಿ ನೀಡುವ ಕುರಿತಾಗಿ 10 ತಿಂಗಳು ತಲಾ 10,000 ರೂ. ಶಿಷ್ಯವೇತನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.