ಮೆದುಳು ಗಡ್ಡೆ: 2020ರಲ್ಲಿ ಶಸ್ತ್ರಚಿಕಿತ್ಸೆ; ಏಮ್ಸ್ ವೈದ್ಯರು!
Team Udayavani, Jan 22, 2017, 9:32 AM IST
ಹೊಸದಿಲ್ಲಿ: ಮೆದುಳು ಗಡ್ಡೆ (ಬ್ರೈನ್ ಟ್ಯೂಮರ್) ಕಾಯಿಲೆಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಬಿಹಾರದ ಮಹಿಳೆಗೆ 2020ರ ಫೆ.20ಕ್ಕೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆ ಬೇಜವಾಬ್ದಾರಿತನ ಪ್ರದರ್ಶಿಸಿದೆ! ಇದಕ್ಕೆ ಆಸ್ಪತ್ರೆ ನೀಡಿರುವ ಕಾರಣ ಇನ್ನೂ ವಿಚಿತ್ರವಾಗಿದೆ. ತನ್ನಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿಲ್ಲ, ಈಗಾಗಲೇ ವಿಪರೀತ ಸಂಖ್ಯೆಯಲ್ಲಿ ರೋಗಿಗಳು ಕಾದು ಕುಳಿತ್ತಿದ್ದಾರೆ. ಆದ್ಯತೆ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಹೇಳಿದೆ.
ಬಿಹಾರದ ಛಾಪ್ರಾ ಜಿಲ್ಲೆಯ ರಮಾರತಿ ದೇವಿ (65) ಮೆದುಳು ಗಡ್ಡೆಯಂಥ ಅಪಾಯಕಾರಿ ಕಾಯಿಲೆಗೆ ತುತ್ತಾಗಿದ್ದಾರೆ. ಪಟನಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಹೇಳಿದ್ದರು. ಅದರಂತೆ ರಮಾರತಿ ಪುತ್ರ, ಅವರನ್ನು ಏಮ್ಸ್ಗೆ ಕರೆ ತಂದ ವೇಳೆ ಆಸ್ಪತ್ರೆಯಿಂದ ಇಂಥ ಪ್ರತಿಕ್ರಿಯೆ ವ್ಯಕ್ತವಾಗಿದೆ.”ನನ್ನ ತಾಯಿಯ ಆರೋಗ್ಯ ಕ್ಷೀಣಿಸುತ್ತಿದೆ. ಅವರಿಗೆ ಮರೆವು ಮತ್ತು ವಿಪರೀತ ತಲೆನೋವಿದೆ. ನಾನು ಬಡವ. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವಷ್ಟು ನನ್ನ ಬಳಿ ಹಣವಿಲ್ಲ. ಚಿಕಿತ್ಸೆ ಇನ್ನೂ ತಡವಾದರೆ ನನ್ನ ತಾಯಿ ಸಾಯುವುದು ಖಾತ್ರಿ’ ಎಂದು ಪುತ್ರ ಗುಲಾಬ್ ಠಾಕೂರ್ ಅಲವತ್ತುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.