![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 23, 2017, 3:45 AM IST
– ಮೂರನೇ ಪಂದ್ಯದಲ್ಲಿ ಇಂಗ್ಲೆಂಡಿಗೆ 5 ರನ್ ಜಯ
– ಭಾರತಕ್ಕೆ 2-1 ಅಂತರದಿಂದ ಏಕದಿನ ಸರಣಿ
– ಇಂಗ್ಲೆಂಡ್ 8ಕ್ಕೆ 321; ಭಾರತ 9 ವಿಕೆಟಿಗೆ 316
ಕೋಲ್ಕತಾ: ರೋಮಾಂಚಕವಾಗಿ ಸಾಗಿದ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಭಾರತವನ್ನು 5 ರನ್ನುಗಳಿಂದ ಸೋಲಿಸಿ ವೈಟ್‌ವಾಷ್ ಭೀತಿಯಿಂದ ಪಾರಾಯಿತು. ಈ ಪಂದ್ಯದಲ್ಲಿ ಸೋತರೂ ಸರಣಿಯ ಮೊದಲೆರಡು ಪಂದ್ಯ ಗೆದ್ದ ಭಾರತವು 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 8 ವಿಕೆಟಿಗೆ 321 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮತ್ತೆ ಆರಂಭಿಕ ಕುಸಿತ ಕಂಡರೂ ಕೊಹ್ಲಿ, ಯುವರಾಜ್, ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಉಪಯುಕ್ತ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದ ಭಾರತ ಅಂತಿಮ ಓವರಿನಲ್ಲಿ ಕುಸಿತ ಕಂಡು 9 ವಿಕೆಟಿಗೆ 316 ರನ್ ಗಳಿಸಲಷ್ಟೇ ಶಕ್ತವಾಯಿತು.
6 ಎಸೆತ 16 ರನ್
ಅಂತಿಮ ಓವರ್‌ನಲ್ಲಿ ಭಾರತ ಗೆಲುವಿಗೆ 16 ರನ್ ಬೇಕಿತ್ತು. ಜಾಧವ್ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದಾಗ ಭಾರತ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಮುಂದಿನ 4 ಎಸೆತಗಳಲ್ಲಿ ಆರು ರನ್ ಬೇಕಿತ್ತು. ಆದರೆ ಮುಂದಿನೆರಡು ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಐದನೇ ಎಸೆತದಲ್ಲಿ 90 ರನ್ ಗಳಿಸಿದ ಜಾಧವ್ ಔಟಾಗುವುದರೊಂದಿಗೆ ಭಾರತದ ಸೋಲು ಖಚಿತವಾಯಿತು.
ಭಾರತ
ಅಜಿಂಕ್ಯ ರಹಾನೆ ಬಿ ವಿಲ್ಲೆ 1
ಕೆಎಲ್ ರಾಹುಲ್ ಸಿ ಬಟ್ಲರ್ ಬಿ ಬಾಲ್ 11
ವಿರಾಟ್ ಕೊಹ್ಲಿ ಸಿ ಬಟ್ಲರ್ ಬಿ ಸ್ಟೋಕ್ಸ್ 55
ಯುವರಾಜ್ ಸಿಂಗ್ ಸಿ ಬಿಲ್ಲಿಂಗ್ಸ್ ಬಿ ಪ್ಲಂಕೆಟ್ 45
ಎಂಎಸ್ ಧೋನಿ ಸಿ ಬಟ್ಲರ್ ಬಿ ಬಾಲ್ 25
ಕೇದಾರ್ ಜಾಧವ್ ಸಿ ಬಿಲ್ಲಿಂಗ್ಸ್ ಬಿ ವೋಕ್ಸ್ 90
ಹಾರ್ದಿಕ್ ಪಾಂಡ್ಯ ಬಿ ಸ್ಟೋಕ್ಸ್ 56
ರವೀಂದ್ರ ಜಡೇಜ ಸಿ ಬೇರ್‌ಸ್ಟೋ ಬಿ ವೋಕ್ಸ್ 10
ಆರ್. ಅಶ್ವಿನ್ ಸಿ ವೋಕ್ಸ್ ಬಿ ಸ್ಟೋಕ್ಸ್ 1
ಭುವನೇಶ್ವರ್ ಕೆ. ಔಟಾಗದೆ 0
ಜಸ್‌ಪ್ರೀತ್ ಬೂಮ್ರಾ ಔಟಾಗದೆ 0
ಇತರ: 22
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 316
ವಿಕೆಟ್ ಪತನ: 1-13, 2-37, 3-102, 4-133, 5-173, 6-277, 7-291, 8-297, 9-316
ಬೌಲಿಂಗ್:
ಕ್ರಿಸ್ ವೋಕ್ಸ್ 10-0-75-2
ಡೇವಿಡ್ ವಿಲ್ಲೆ 2-0-8-1
ಜ್ಯಾಕ್ ಬಾಲ್ 10-0-56-2
ಲಿಯಮ್ ಪ್ಲಂಕೆಟ್ 10-0-65-1
ಬೆನ್ ಸ್ಟೋಕ್ಸ್ 10-0-63-3
ಮೋಯಿನ್ ಅಲಿ 8-0-41-0
ಪಂದ್ಯಶ್ರೇಷ್ಠ :ಬೆನ್ ಸ್ಟೋಕ್ಸ್
ಸರಣಿಶ್ರೇಷ್ಠ: ಕೇದಾರ್ ಜಾಧವ್
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.