ಉ.ಪ್ರ.ಮತದಾರರಿಗೆ ಸ್ಮಾರ್ಟ್‌ ಕನಸು ತೋರಿದ ಸಿಎಂ ಅಖೀಲೇಶ್‌


Team Udayavani, Jan 23, 2017, 10:11 AM IST

AKILESH.jpg

ಲಕ್ನೋ: ನಮ್ಮದು ಬಾಯಿಮಾತಿನ ಸರಕಾರವಲ್ಲ, “ಕೆಲಸವಷ್ಟೇ ಮಾತನಾಡುತ್ತದೆ’ ಎಂಬ ಘೋಷವಾಕ್ಯದೊಂದಿಗೆ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ರಾಷ್ಟ್ರೀಯ ಅಧ್ಯಕ್ಷ ಅಖೀಲೇಶ್‌ ಯಾದವ್‌. ಪಕ್ಷದ ಪರಮೋಚ್ಚ ನೇತಾರರಾದ ಮುಲಾಯಂ ಸಿಂಗ್‌ ಯಾದವ್‌, ಶಿವಪಾಲ್‌ ಯಾದವ್‌ ಮತ್ತು ರಾಮ್‌ ಗೋಪಾಲ್‌ ಯಾದವ್‌ ಅವರ ಅನುಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಬಾಲಕಿಯರಿಗೆ ಸೈಕಲ್‌ ಆಸೆ ತೋರಿಸಿ, ಉತ್ತರ ಪ್ರದೇಶದ ಜನರಿಗೆಲ್ಲಾ ಸ್ಮಾರ್ಟ್‌ ಕನಸುಗಳನ್ನು ಬಿತ್ತಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನ್‌ ಘೋಷಣೆ ಕುರಿತು ಟೀಕೆ ನಡೆಸಿದ್ದೂ ಅಲ್ಲದೇ, ನಮ್ಮದು ಮಾತನಾಡುವ ಸರಕಾರವಲ್ಲ, ಕೆಲಸ ಮಾಡುವ ಸರಕಾರ ಎಂದು ಪ್ರತಿಪಾದಿಸಿದ್ದಾರೆ. ಸಮಾಜವಾದಿ ಪಕ್ಷದ ಹೆಸರಲ್ಲೇ ನಾನಾ ಯೋಜನೆಗಳನ್ನು ಘೋಷಿಸಿದ್ದಾರೆ. 

ಲ್ಯಾಪ್‌ಟಾಪ್‌, ಕನ್ಯಾ ವಿದ್ಯಾ ಯೋಜನೆ, ಸಮಾಜವಾದಿ ಪಿಂಚಣಿ, ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಮತ್ತು ಜ್ಞಾನೇಶ್ವರ್‌ ಮಿಶ್ರಾ ಮಾದರಿ ಗ್ರಾಮಗಳ ರಚನೆಯ ಘೋಷಣೆ ಮಾಡಿದ್ದಾರೆ. ರೈತರಿಗೆ ಭಿತ್ತನೆ ಬೀಜ ಮತ್ತು ರಸಗೊಬ್ಬರ ನೀಡುವ ಸಲುವಾಗಿ ಸಮಾಜವಾದಿ ಕಿಸಾನ್‌ ಕೋಶ್‌ ಯೋಜನೆ ಪ್ರಕಟಿಸಿದ್ದಾರೆ. ಹಿಂದಿನ ಐದು ವರ್ಷದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸಿ ಎಂದು ಆಯಾ ಅಭ್ಯರ್ಥಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. 

32 ಪುಟಗಳ ಪ್ರಣಾಳಿಕೆಯ ಮುಖಪುಟದಲ್ಲಿ ಮುಲಾಯಂ ಮತ್ತು ಅಖೀಲೇಶ್‌ಗೆ ಸ್ಥಾನ ಸಿಕ್ಕಿದೆ. ಆದರೆ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಭಾವಚಿತ್ರದ ಬಳಕೆ ಮಾಡಿಲ್ಲ. ಘೋಷಣೆ ವೇಳೆ ಮುಲಾಯಂ ಸಿಂಗ್‌ ಯಾದವ್‌ ಕಾಣಿಸಿಕೊಳ್ಳದೇ ಹೋದರೂ, ಎಲ್ಲ ಮುಗಿದ ಮೇಲೆ ಬಂದರು. ಟ್ರಾಫಿಕ್‌ ಕಿರಿಕಿರಿಯಿಂದಾಗಿ ನಿಗದಿತ ಸಮಯಕ್ಕೆ ಬರಲಾಗಲಿಲ್ಲವೆಂಬ ಸಬೂಬು ಅವರದ್ದಾಗಿತ್ತು. ಅಲ್ಲದೆ ಆರಂಭದಿಂದಲೂ ಆಂತರಿಕ ಭಿನ್ನಮತದ ಶಮನಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಜಂ ಖಾನ್‌ ಅವರೇ ರವಿವಾರ ಕೂಡ ನೇತಾಜಿ ನಿವಾಸಕ್ಕೆ ಹೋಗಿ ಅವರನ್ನು ಕರೆತಂದರು. 

ಪಂಜಾಬ್‌ನಲ್ಲಿ ಬಿಜೆಪಿಯ ಪ್ರಣಾಳಿಕೆ: ಉತ್ತರ ಪ್ರದೇಶದ ಜತೆಗೆ ಪಂಜಾಬ್‌ನ ವಿಧಾನಸಭೆ ಚುನಾವಣಾ ರಂಗು ಕೂಡ ಏರುತ್ತಿದ್ದು, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ ಅವರು, ರವಿವಾರ ಪ್ರಣಾಳಿಕೆಗಳಲ್ಲಿನ ಭರವಸೆಗಳ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಕಡಿಮೆ ದರದಲ್ಲಿ ಸಕ್ಕರೆ ಮತ್ತು ತುಪ್ಪ, ಬಡವರಿಗೆ ಮನೆ, ದಲಿತರು ಮತ್ತು ಹಿಂದುಳಿದವರಿಗೆ ಭೂಮಿ, ಉಗ್ರಗಾಮಿಗಳ ಉಪಟಳದಿಂದ ನಿಧನ ಹೊಂದಿದವರಿಗೆ 5 ಲಕ್ಷ ರೂ. ಪರಿಹಾರದಂಥ ಘೋಷಣೆ ಮಾಡಿದ್ದಾರೆ. 

ಬಿಜೆಪಿ ಪಟ್ಟಿಯಲ್ಲಿ ರಾಜನಾಥ್‌ ಪುತ್ರ, ರೀಟಾ ಬಹುಗುಣ ಜೋಶಿ
ಲಕ್ನೋ
: ಉತ್ತರ ಪ್ರದೇಶ ಚುನಾವಣೆಗಾಗಿ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪುತ್ರ ಪಂಕಜ್‌ ಸಿಂಗ್‌ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ರೀಟಾ ಬಹುಗುಣ ಜೋಶಿ ಅವರಿಗೆ ಟಿಕೆಟ್‌ ನೀಡಲಾಗಿದೆ. ರವಿವಾರ ಒಟ್ಟಾರೆಯಾಗಿ 149 ಸ್ಥಾನಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ. 

ಪಂಕಜ್‌ ಸಿಂಗ್‌ಗೆ ನೊಯ್ಡಾ, ಸ್ಥಳೀಯ ಬಿಜೆಪಿ ನಾಯಕ ಹುಕುಂ ಸಿಂಗ್‌ ಪುತ್ರಿ ಮೃಗಾಂಕಾ ಅವರಿಗೆ ಕೈರಾಣಾ, ರೀಟಾ ಬಹುಗುಣ ಜೋಶಿಗೆ ಲಕ್ನೋ ವಿಧಾನಸಭೆ ಕ್ಷೇತ್ರಗಳಲ್ಲಿ ಟಿಕೆಟ್‌ ಒದಗಿಸಲಾಗಿದೆ. ಇತ್ತೀಚೆಗೆ ಪ್ರಧಾನಿ  ಮೋದಿ, ಕುಟುಂಬ ಸದಸ್ಯರಿಗೆ ಟಿಕೆಟ್‌ ಕೇಳಬೇಡಿ ಎಂದು ಹುಕುಂ ಹೊರಡಿಸಿದ್ದರು. 

ಪ್ರಣಾಳಿಕೆಯ ಪ್ರಮುಖ ಅಂಶಗಳು
– ರೈತರ ನಿಧಿ ಸ್ಥಾಪನೆ, ಸಮಾಜವಾದಿ ಕಿಸಾನ್‌ ಕೋಶ್‌ನಲ್ಲಿ ಬೀಜ, ಗೊಬ್ಬರ ಖರೀದಿಗೆ ಅವಕಾಶ
– ಗ್ರಾಮೀಣ ಪ್ರದೇಶಗಳಿಗೆ 24 ಗಂಟೆ ವಿದ್ಯುತ್‌
– ಸಮಾಜವಾದಿ ಸ್ಮಾರ್ಟ್‌ಫೋನ್‌ ಯೋಜನೆಯಡಿ ಎಲ್ಲರಿಗೂ ಸ್ಮಾರ್ಟ್‌ಫೋನ್‌
– ಸಮಾಜವಾದಿ ಪಿಂಚಣಿ ಯೋಜನೆಯಡಿ ಒಂದು ಕೋಟಿ ಮಂದಿಗೆ 1 ಸಾವಿರ ರೂ. ಪಿಂಚಣಿ
– 9ರಿಂದ 12ನೇ ತರಗತಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತ ಬೈಸಿಕಲ್‌
– ಬಡ ಮಹಿಳೆಯರಿಗೆ ಉಚಿತ ಪ್ರಶರ್‌ ಕುಕ್ಕರ್‌
– ಬಡ ವಿದ್ಯಾರ್ಥಿಗಳಿಗೆ ಉಚಿತ ತುಪ್ಪ, ಹಾಲಿನ ಪೌಡರ್‌
– ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೌಲಭ್ಯ
– ಆಗ್ರಾ, ಕಾನ್ಪುರ, ವಾರಾಣಸಿ ಮತ್ತು ಮೀರತ್‌ನಲ್ಲಿ ಮೆಟ್ರೋ ವ್ಯವಸ್ಥೆ
– 60 ಲಕ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರು ದಿಢೀರ್‌ ನಿಧನ ಹೊಂದಿದರೆ 10 ಲಕ್ಷ ರೂ.
– ಕ್ರೀಡಾ ಉತ್ತೇಜನಕ್ಕೆ ಸಮಾಜವಾದಿ ಕ್ರೀಡಾ ಶಾಲೆ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.