ಎರಡನೇ ಸಲ ಚಿತ್ರದ ತರ್ಲೆ ಹುಡುಗಿ ಮಾತಿಗೆ ಹುಡುಗರ ಲೈಕ್ಸ್!
Team Udayavani, Jan 23, 2017, 11:18 AM IST
ನಿರ್ದೇಶಕ ಗುರುಪ್ರಸಾದ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಷ್ಟೇ ಅಲ್ಲ, ಅವರ ನಿರ್ದೇಶನದ “ಎರಡನೇ ಸಲ’ ಚಿತ್ರ ಕೂಡ ಈಗ ಟ್ರೇಲರ್ ಮೂಲಕ ಸಖತ್ ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಹಾಡುಗಳ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ವಾರದ ಹಿಂದಷ್ಟೇ ಯೂ ಟ್ಯೂಬ್ನಲ್ಲಿ ಕಾಣಿಸಿಕೊಂಡಿರುವ “ಎರಡನೇ ಸಲ’ ಚಿತ್ರದ ಟ್ರೇಲರ್ ನೋಡಿದ ಮಂದಿ, ಲೈಕ್ ಹೊತ್ತಿದ್ದಾರೆ. ಕಾಲೇಜ್ ಹುಡುಗಿಯೊಬ್ಬಳು ಸರಾಗವಾಗಿ ಹರಿಬಿಡುವ ಡಬ್ಬಲ್ ಮೀನಿಂಗ್ವುಳ್ಳ ಮಾತುಗಳೇ ಅಷ್ಟಕ್ಕೆಲ್ಲ ಕಾರಣ.
ಸದ್ಯಕ್ಕೆ ಆ ಡೈಲಾಗ್, ಸದ್ಯಕ್ಕೆ ವೈರಲ್ ಆಗಿರೋದಂತೂ ನಿಜ. ಹಾಗಾದರೆ, “ಎರಡನೇ ಸಲ’ ಚಿತ್ರದ ಟ್ರೇಲರ್ನೊಳಗಿರುವ ಡೈಲಾಗ್ಗಳು ಹೇಗಿವೆ ಗೊತ್ತಾ? ಹುಡುಗಿ ಹೇಳ್ತಾಳೆ, “ನಾನು ಕಾಲೇಜ್ನಲ್ಲಿರುವಾಗ ಸಖತ್ “ಕಾಫಿ’ ಕುಡಿತಾ ಇದ್ದೆ. ಗೊತ್ತಿರೋರೇ ಕುಡಿಸ್ತಾ ಇದ್ರು. ಈಗ ನನ್ ಗಂಡನಿಗೆ “ಕಾಫಿ’ ಅಂದ್ರೇನೆ ಆಗಲ್ಲ…’ ಇನ್ನೊಬ್ಬ ಹುಡುಗಿ ಹೇಳ್ತಾಳೆ..”ಹೋಗಿ ಸಾರ್, ನೀವು ಹೀರೋಯಿಸಂ ತೋರಿÕ ಅಂದ್ರೆ, ಏನೇನೋ ತೋರ್ಸಿ ಬಿಟ್ರಲ್ಲ..’
ಎಂಬ ಡೈಲಾಗ್ ಸೇರಿದಂತೆ, ನಾಯಕಿ ಸಂಗೀತಾ ಭಟ್, ತಮ್ಮ ಬೆನ್ನು ತೋರಿಸಿರುವ ದೃಶ್ಯದ ಹಿನ್ನೆಲೆಯಲ್ಲಿ ಬರುವ “ಗೋದಿ ಬಣ್ಣ ಮುದ್ದಾದ ಮೈಕಟ್ಟು’ ಇಂತಹ ಅನೇಕ ಡಬ್ಬಲ್ ಮೀನಿಂಗ್ ಮತ್ತು ಫನ್ನೀ ಮಾತುಗಳಿರುವ ಟ್ರೇಲರ್ಗೆ ಲೈಕ್ಸ್ ಸಿಕ್ಕಿದೆ. ನಿರ್ದೇಶಕ ಗುರುಪ್ರಸಾದ್ ಬರೆದಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಬೆಳವಣಿಗೆ ಕಂಡ ನಿರ್ಮಾಪಕ ಯೋಗೇಶ್ ನಾರಾಯಣ್ಗೆ ಸಹಜವಾಗಿಯೂ ಖುಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.