ಕಂಬಳ ವಿವಾದ ಕಲಕಂಬಳವಾಗಿದೆ ಏಕೆ?


Team Udayavani, Jan 24, 2017, 3:50 AM IST

Kambala-Painting-600.jpg

ದಸರಾದಲ್ಲಿ ಅಂಬಾರಿ ಹೊರುವ ಆನೆಗಳನ್ನು ಪಳಗಿಸಲು ಆನೆಗಳಿಗೆ ಕೊಡುವ ಅಂಕುಶದ ಪೆಟ್ಟು, ತಿವಿತಕ್ಕೆ ಏನೆನ್ನಬೇಕು? ಕಂಬಳದಲ್ಲಿ ಓಟದ ಕೋಣಗಳಿಗೆ ಕೋಣ ಓಡಿಸುವವನು ಕೊಡುವ ಏಟು ಹಿಂಸೆ ಎನಿಸಿದರೆ ಗದ್ದೆ, ಹೊಲ ಉಳುವಾಗ ಎತ್ತುಗಳಿಗೆ ಬಾರುಕೋಲಿನಿಂದ ಥಳಿಸುವುದು ಹಿಂಸೆಯಾಗುವುದಿಲ್ಲವೇ? ಪ್ರಾಣಿಹಿಂಸೆಯ ವ್ಯಾಖ್ಯಾನದಲ್ಲಿಯೇ ಏನೋ ಸರಿಯಿಲ್ಲ ಅನ್ನಿಸುತ್ತದೆ.

ಒಂದು ಕಾಲು ಕೆಸರಿನಲ್ಲಿ ಹೂತುಕೊಂಡರೆ ಮತ್ತೂಂದು ಕಾಲನ್ನು ಪ್ರಯಾಸಪಟ್ಟು ಮುಂದಕ್ಕಿಟ್ಟು ಹಿಂದಿನ ಕಾಲನ್ನು ಮೇಲಕ್ಕೆತ್ತಬೇಕು. ಇಂಥ ಕೆಸರಿನ ಗದ್ದೆಯಲ್ಲಿ ಕೋಣಗಳು ಓಡುತ್ತವೆ, ಅವುಗಳ ಹಿಂದೆ ಕೋಣ ಓಡಿಸುವವನೂ ಓಡುತ್ತಾನೆ. ಕೋಣಗಳು ಕೆಸರು ಚಿಮ್ಮಿಸುತ್ತಾ ಓಡುವ ನಾಗಾಲೋಟದ ಕ್ಷಣವೇ ರೋಚಕ. ಕೂಡಿದ ಸಹಸ್ರಾರು ಮಂದಿ ಓಡುವ ಕೋಣ-ಓಡಿಸುವವನನ್ನು ಹುರಿದುಂಬಿಸುವ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು. ಆ ಸ್ಪರ್ಧೆ ಕೊಡುವ ಅನನ್ಯತೆಯನ್ನು ಅನುಭವಿಸಬೇಕು. ನವೆಂಬರ್‌ ತಿಂಗಳಿನಿಂದ ಮಾರ್ಚ್‌ವರೆಗೆ ಕರಾವಳಿಯ ಉದ್ದಗಲಕ್ಕೆ ಇಂಥ ಕಂಬಳಗಳ ಭರಾಟೆ ವರ್ಣನಾತೀತ. ಗದ್ದೆಯನ್ನು ಉಳಲು ಬಳಸುತ್ತಿದ್ದ ಕೋಣಗಳೇ ಕಂಬಳದ ಗದ್ದೆಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಂಜಿಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಕಂಬಳಕ್ಕೆಂದೇ ಕೋಣಗಳನ್ನು ಸಾಕಲಾಗುತ್ತದೆ. ಕಂಬಳದ ಕೋಣಗಳನ್ನು ಓಡಿಸಲೆಂದೇ ಅನುಭವಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಕಂಬಳದ ಓಟಕ್ಕೆ ಮಾಲಕನ ಮನೆಯಿಂದ ಲಾರಿಯೇರುವ ಕೋಣಗಳಿಗೆ ಮಾಡುವ ಶೃಂಗಾರವೇ ಕಣ್ಣು ಕೋರೈಸುವಂತಿರುತ್ತದೆ. ಆರತಿ ಬೆಳಗಿ ತಿಲಕವಿಟ್ಟು ಅವುಗಳನ್ನು ಕಂಬಳಕ್ಕೆ ಕಳುಹಿಸಿ ಕೊಡುವ ಮತ್ತು ಅವುಗಳನ್ನು ಕಂಬಳದ ಗದ್ದೆಗೆ ಕರೆತರುವ ಸನ್ನಿವೇಶದಲ್ಲಿ ಭಕ್ತಿ, ಶ್ರದ್ಧೆ, ಹೆಮ್ಮೆ ಮತ್ತು ಮನಸ್ಸಿನಲ್ಲಿ ಗೆಲ್ಲಲೆಂಬ ಹಾರೈಕೆಯಿರುತ್ತದೆ. ಕಂಬಳದಲ್ಲಿ ಸ್ಪರ್ಧೆ ನಡೆಯುವುದು ಎರಡು ಕೋಣಗಳ ಜೋಡಿ ಮಧ್ಯೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳ ಜತೆಗೆ ಓಡಿಸುವಾತನೂ ಸೇರಿದರೆ ಅದು ಒಂದು ಜೋಡಿಯೆನಿಸುತ್ತದೆ. ಇಂತಹ ಜೋಡಿಗಳ ಮಧ್ಯ ಸ್ಪರ್ಧೆ ನಡೆಯುತ್ತದೆ. ಹಗ್ಗದ ಓಟ, ನೇಗಿಲು ಓಟ, ಅಡ್ಡ ಹಲಗೆ, ಕೆನೆ ಹಲಗೆ ಇವು ಕಂಬಳ ಸ್ಪರ್ಧೆಯ ವಿಭಾಗಗಳು. ಹಗ್ಗ, ನೇಗಿಲು ಮತ್ತು ಹಲಗೆ ಓಟಗಳಲ್ಲಿ ವೇಗವೇ ಪ್ರಧಾನ. ಆದರೆ ಕೆನೆ ಹಲಗೆ ಓಟ ಸ್ವಲ್ಪ ಭಿನ್ನ. ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ನಿಶಾನೆ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತೀ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೋ ಅದು ವಿಜಯಿಯಾಗುತ್ತದೆ. ಈ ರೀತಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಾದ ಕೋಣಗಳ ಜೋಡಿಗಳಿಗೆ ಬಹುಮಾನ ನೀಡಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಪದಕ ಸೇರುವುದು ವಿಜೇತ ಜೋಡಿಯ ಯಜಮಾನನಿಗೆ. ಕೋಣಗಳ ಜೋಡಿಯನ್ನು ಓಡಿಸಿದಾತನಿಗೂ ಪ್ರತ್ಯೇಕ ಬಹುಮಾನವಿದೆ. ಜೋಡುಕರೆ ಕಂಬಳಗಳಲ್ಲಿ ಅಕ್ಕ-ಪಕ್ಕ ಎರಡು ಕಣಗಳಿದ್ದು ಎರಡರಲ್ಲೂ ಏಕಕಾಲಕ್ಕೆ ಕೋಣಗಳನ್ನು ಓಡಿಸಿ ಅವುಗಳ ಮಧ್ಯೆ ಸ್ಪರ್ಧೆ ನಡೆಸಲಾಗುತ್ತದೆ. 

ವಿವಾದದ ಮೂಲ ಏನು?
ಕರಾವಳಿಯ ಜಾನಪದ ಕ್ರೀಡೆ ಈಗ ವಿವಾದದ ಕೇಂದ್ರಬಿಂದುವಾಗಿರುವುದು ದುರಂತವೇ ಸರಿ. ಕೃಷಿ ಕೆಲಸಗಳಿಗೆ ಬಳಸುವ ಕೋಣಗಳು ಅನಾದಿ ಕಾಲದ ಕಂಬಳ ಕ್ರೀಡೆಯ ಕೇಂದ್ರ ಬಿಂದುಗಳೂ ಹೌದು. ಅರಸೊತ್ತಿಗೆ ಕಾಲದಿಂದಲೂ ಈ ಕ್ರೀಡೆಗೆ ರಾಜಮನ್ನಣೆಯಿತ್ತು. ಇದನ್ನು ವಿಜಯನಗರ ಕಾಲದ ಶಾಸನಗಳೂ ಸಮರ್ಥಿಸುತ್ತವೆ. ಅರಸೊತ್ತಿಗೆ ಅಳಿದ ಮೇಲೆ ಕಂಬಳಗಳು ಜನಾಶ್ರಯದಲ್ಲಿ ನಡೆಯುತ್ತಾ ಬಂದವು. ಇದು ಕಾಲ ಕಾಲದ ಬದಲಾವಣೆಯೂ ನಿಜ. ಕಂಬಳದಲ್ಲಿ ಕೋಣಗಳು ಓಡುವ ಓಟವೇ ಅಂತಿಮ ಮತ್ತು ಗೆಲುವು ಸೋಲು ನಿರ್ಧಾರವಾಗುವುದೂ ಕೂಡ ಅದೇ ಮಾನದಂಡದಿಂದ. ಈ ಕಾರಣಕ್ಕಾಗಿ ಕಂಬಳದ ಕರೆಯಲ್ಲಿ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವುದು ಅನಿವಾರ್ಯ. ಈ ಕೋಣಗಳನ್ನು ಓಡಿಸುವಾತನ ಕೌಶಲವೂ ಮುಖ್ಯ. ಇದು ಅವನ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕ್ಷಣವೂ ಹೌದು. ಈ ಕಾರಣಕ್ಕಾಗಿ ಕಂಬಳದ ಕೋಣಗಳು ವೇಗವಾಗಿ ಓಡಲು ಬಾರುಕೋಲು ಮೂಲಕ ಕೋಣಗಳ ಬೆನ್ನಿಗೆ ಬಾರಿಸುತ್ತಾನೆ. ಆ ಏಟು ನಿಜಕ್ಕೂ ಯಾರನ್ನೇ ಆದರೂ ಒಂದು ಕ್ಷಣಕ್ಕೆ ಬೆಚ್ಚಿಬೀಳಿಸುತ್ತದೆ. ಬಾರುಕೋಲಿನ ಏಟಿಗೆ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಓಟದ ಮೂಲಕ ಪ್ರದರ್ಶಿಸುತ್ತವೆ. ಕೋಣಗಳನ್ನು ಕಂಬಳದ ಕರೆಗೆ ತರುವುದರಿಂದ ಹಿಡಿದು ಮಂಜೊಟ್ಟಿಯಲ್ಲಿ ಓಟಕ್ಕೆ ಅಣಿಗೊಳಿಸುವ ತನಕ ಕೋಣಗಳಿಗೆ ಸಹಜವಾಗಿಯೇ ಬಾರುಕೋಲಿನ ಏಟುಗಳು ಸಂದರ್ಭಕ್ಕೆ ತಕ್ಕಂತೆ ಬೀಳುತ್ತವೆ. ಕೋಣಗಳಿಗೆ ಕಂಬಳ ಓಡಿಸುವವನು ಹೊಡೆಯುವುದೇ ಕಂಬಳದಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎನ್ನುವುದಕ್ಕೆ ಕಾರಣ.

ಕೋಣಗಳು ಬಾರುಕೋಲಿಗೆ ಮಾತ್ರ ಸ್ಪಂದಿಸುತ್ತವೆ ಎನ್ನುವುದೂ ನಿರಾಕರಿಸಲಾಗದ ಸತ್ಯ. ಕೋಣಗಳಿಗೆ ಓಟದ ಸಂದರ್ಭದಲ್ಲಿ ಥಳಿಸಲಾಗುತ್ತದೆ, ಇದು ಪ್ರಾಣಿಹಿಂಸೆ ಎನ್ನುವುದೇ ಮುಖ್ಯ ಆರೋಪ. ಸರಿಸುಮಾರು ಎರಡು ದಶಕಗಳಿಂದಲೂ ಈ ಆರೋಪ ಕಂಬಳ ನಿಷೇಧಕ್ಕೆ ಪೂರಕವಾಗುತ್ತಲೇ ಬಂದದ್ದು ಕೂಡ ನಿಜ. ಮೇನಕಾ ಗಾಂಧಿ ಅವರು ಕಂಬಳದಲ್ಲಿ ಕೋಣಗಳಿಗೆ ಥಳಿಸುವುದರ ವಿರುದ್ಧ ಧ್ವನಿ ಎತ್ತಿದ್ದರು ಮತ್ತು ಅದರ ವಿರುದ್ಧ ಗಟ್ಟಿಯಾಗಿಯೇ ಮಾತನಾಡುತ್ತಿದ್ದರು. ಈ ಆರೋಪವನ್ನು ಕಂಬಳ ಆಯೋಜಕರು ನಿರಾಕರಿಸಲಿಲ್ಲ. ಕಂಬಳದ ಕರೆಯಲ್ಲಿ ಮಾತ್ರ ಕೋಣಗಳಿಗೆ ಚುರುಕು ಮುಟ್ಟಿಸಲು ಬಾರುಕೋಲು ಬಳಸುವಂತೆ ಕಂಬಳ ಓಡಿಸುವವರಿಗೂ ಸೂಚನೆ ಕೊಟ್ಟಿದ್ದರು. ಈ ಎಚ್ಚರಿಕೆ ಮಾತುಗಳನ್ನು ಕಂಬಳದ ಕೋಣ ಓಡಿಸುವವರೂ ಮನನ ಮಾಡಿಕೊಂಡು ತಮ್ಮ ಚಾಚಕ್ಯತೆ ತೋರಿಸುತ್ತಿದ್ದರು. ಈಗ ಸುಪ್ರೀಂ ಕೋರ್ಟ್‌ ಮೂಲಕ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ಉಂಟು ಮಾಡಲಾಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಈ ಕ್ರೀಡೆಯನ್ನೇ ನಿಷೇಧಿಸಲು ನಿರ್ದೇಶನ ಕೊಡಿಸಲಾಗಿದೆ.

ಹಾಗೆ ನೋಡಿದರೆ ಕಂಬಳದ ಕೋಣಗಳನ್ನು ಸಾಕುವ ಬಗೆಯನ್ನು ಗಮನಿಸಿದರೆ ಕೋಣಗಳ ಯಜಮಾನನಿಗೆ ಇರುವ ಪ್ರಾಣಿ ದಯೆ ಮತ್ತು ಅವುಗಳಿಗೆ ಕೊಡುವ ಆದರ ಆತಿಥ್ಯ ಬೆಚ್ಚಿ ಬೀಳಿಸುತ್ತದೆ. ಕಂಬಳದಲ್ಲಿ ಓಡುವ ಕೋಣಗಳನ್ನು ಲಕ್ಷಾಂತರ ರೂ. ಕೊಟ್ಟು ಖರೀದಿಸುತ್ತಾರೆ. ಅವುಗಳನ್ನು ಸಾಕಲು ಆಳುಗಳನ್ನು ನಿಯೋಜಿಸಿರುತ್ತಾರೆ. ನಿತ್ಯವೂ ಮನುಷ್ಯರು ಸ್ನಾನಕ್ಕಿಂತಲೂ ಹೆಚ್ಚು ಆತ್ಮೀಯವಾಗಿ ಮೈತೊಳೆದು ಎಣ್ಣೆ ಉಜ್ಜಿ ಸ್ನಾನ ಮಾಡಿಸುತ್ತಾರೆ. ಆ ಕೋಣಗಳಿಗೆ ದುಬಾರಿ ಆಹಾರ ಪದಾರ್ಥಗಳನ್ನು ತಿನ್ನಿಸುತ್ತಾರೆ. ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಸಾಕುತ್ತಾರೆ. ಕಂಬಳ ಓಡಿಸುವವನಿಗೆ ವರ್ಷಪೂರ್ತಿ ವೇತನ ಕೊಟ್ಟು ಒಬ್ಬ ಕ್ರೀಡಾಳುವನ್ನು ಪೋಷಣೆ ಮಾಡುವುದಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ಸಾಕುತ್ತಾನೆ.

ಕಂಬಳ ಸ್ಪರ್ಧೆಯಲ್ಲಿ ತನ್ನ ಕೋಣಗಳು ಗೆಲ್ಲಬೇಕು ಎನ್ನುವುದನ್ನು ಬಿಟ್ಟರೆ ತಾವು ಮಾಡುವ ಖರ್ಚು ನಗಣ್ಯವೆನ್ನುತ್ತಾರೆ. ಕೋಣಗಳ ಯಜಮಾನರು. ಕಂಬಳದಲ್ಲಿ ಗೆದ್ದ ಕೋಣಗಳ ಮೆರವಣಿಗೆ, ಅದರ ಮೈಮೇಲೆ ಹೊದಿಸುವ ಬಟ್ಟೆ, ಕಂಬಳ ಓಡಿಸಿದವನಿಗೆ ಮಾಡುವ ಸಮ್ಮಾನ, ಕೊಡುವ ಮನ್ನಣೆಗೆ ಲೆಕ್ಕದ ಮಿತಿಯಿಲ್ಲ, ಅದರ ಚಿಂತೆಯೂ ಯಜಮಾನನಿಗಿರುವುದಿಲ್ಲ. ಕಂಬಳದಲ್ಲಿ ಗೆಲ್ಲುವುದು ಎಂದರೆ ಅದು ಕೋಣಗಳ ಯಜಮಾನನಿಗೆ ಪ್ರತಿಷ್ಠೆ, ಮನೆತನದ ಗೌರವದ ಪ್ರಶ್ನೆ. ಕೋಣಗಳ ಯಜಮಾನರು ಲಕ್ಷಾಂತರ ರೂ. ವೆಚ್ಚ ಮಾಡಿದರೆ ಲಕ್ಷಾಂತರ ಜನರು ಹಗಲೂ ರಾತ್ರಿ ನೂರಾರು ಕೋಣಗಳು ಓಡುವುದನ್ನು; ಅವು ಗೆಲ್ಲುವುದು, ಸೋಲುವುದನ್ನು ಕಣ್ತುಂಬಿಕೊಳ್ಳುತ್ತಾರೆ. ದೇವರುಗಳಿಗೆ ಹರಕೆ ರೂಪದಲ್ಲಿ ಕಂಬಳ ಸೇವೆ ಮಾಡುವುದು ಕೂಡ ಪರಂಪರಾಗತವಾಗಿ ನಡೆದು ಬಂದಿದೆ. ದೇವರು, ದೈವಗಳಿಗೆ ಕಂಬಳದ ಹರಕೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು.

ಯಾವುದು ಹಿಂಸೆ – ಯಾವುದು ಅಲ್ಲ?
ಪ್ರಾಣಿ ಹಿಂಸೆಯನ್ನು ಯಾರೂ ಪ್ರೋತ್ಸಾಹಿಸಬಾರದು ಎನ್ನುವುದನ್ನು ಮಾನವೀಯತೆಯಿರುವವರು ಒಪ್ಪಿಕೊಳ್ಳುತ್ತಾರೆ. ಒಂದು ಕಾಲವಿತ್ತು, ಶಾಲೆಗಳಲ್ಲಿ ಮಕ್ಕಳಿಗೆ ಮೇಸ್ಟ್ರೆ ಥಳಿಸಿದರೆ ಹೆತ್ತವರು ‘ತಪ್ಪು ಮಾಡಿದರೆ ಮುಲಾಜಿಲ್ಲದೆ ಥಳಿಸಿ’ ಎನ್ನುತ್ತಿದ್ದರು. ಮಕ್ಕಳು ಚೆನ್ನಾಗಿ ವಿದ್ಯೆ ಕಲಿಯಬೇಕು, ಅದಕ್ಕಾಗಿ ಥಳಿಸುವುದು ಅನಿವಾರ್ಯವಾದರೆ ಅಪರಾಧವಲ್ಲ ಎನ್ನುತ್ತಿದ್ದರು. ಈಗ ಮಗುವಿನ ಕಿವಿ ಹಿಂಡಿದರೂ, ಕೆನ್ನೆ ಚಿವುಟಿದರೂ ಹಿಂಸೆ ಅನ್ನಿಸಿಕೊಳ್ಳುತ್ತದೆ. ಇಂಥ ಹಿಂಸೆ ಕೊಡಲು ಶಿಕ್ಷಕರಿಗೆ ಏನು ಅಧಿಕಾರವೆಂದು ಹೆತ್ತವರು ಪ್ರಶ್ನೆ ಮಾಡುತ್ತಾರೆ. ಇದನ್ನು ಬದಲಾವಣೆಯ ಪ್ರಭಾವ ಎನ್ನಬೇಕೋ ಅಥವಾ ಹೆತ್ತವರಿಗಿರುವ ಮಕ್ಕಳ ಮೇಲಿನ ವ್ಯಾಮೋಹವೆನ್ನಬೇಕೋ? ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಗಳನ್ನು ಪಳಗಿಸಲು ಆನೆಗಳಿಗೆ ಕೊಡುವ ಅಂಕುಶದ ಪೆಟ್ಟು, ತಿವಿತಕ್ಕೆ ಏನೆನ್ನಬೇಕು? ಆನೆಯ ಬೆನ್ನ ಮೇಲೆ ಹೊರಿಸುವ ಅಂಬಾರಿಯ ತೂಕವೂ ಅದಕ್ಕೆ ಕೊಡುವ ಹಿಂಸೆಯಲ್ಲವೇ? ಮಣ ಭಾರದ ಅಂಬಾರಿ ಹೊರಲಾಗದೆ ಆನೆ ಸುಸ್ತಾಗಿ ನಿಂತಿತು ಎನ್ನುವುದನ್ನು ಸುದ್ದಿ ಮಾಡುವ ಮಾಧ್ಯಮಗಳು, ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಲಕ್ಷಾಂತರ ಜನರು ಇದಕ್ಕೆ ಯಾಕೆ ಪ್ರತಿಕ್ರಿಯಿಸುವುದಿಲ್ಲ? ಮಾವುತ ಅಂಕುಶ ಹಿಡಿಯದಿದ್ದರೆ ಆನೆ ಪಳಗಲು ಸಾಧ್ಯವೇ? ಕಂಬಳದಲ್ಲಿ ಓಟದ ಕೋಣಗಳಿಗೆ ಕೋಣ ಓಡಿಸುವವನು ಕೊಡುವ ಏಟು ಹಿಂಸೆ ಎನಿಸಿದರೆ ಗದ್ದೆ, ಹೊಲ ಉಳುವಾಗ ಎತ್ತುಗಳಿಗೆ ಬಾರುಕೋಲಿನಿಂದ ಥಳಿಸುವುದು ಹಿಂಸೆಯಾಗುವುದಿಲ್ಲವೇ? ಎತ್ತಿನ ಗಾಡಿ ಓಡಿಸುವವರು ಎತ್ತುಗಳಿಗೆ ಥಳಿಸುವುದು ಭಯಾನಕ ಹಿಂಸೆಯೆನಿಸದೇ? ಗಾಣ ತಿರುಗುವ ಎತ್ತುಗಳಿಗೆ ಥಳಿಸುವುದು, ಕತ್ತೆಗಳ ಮೇಲೆ ಅಗಸ ಬಟ್ಟೆ ಸಾಗಿಸುವುದು, ಕುದುರೆಗಾಡಿಗಳಿಗೆ ಕುದುರೆ ಕಟ್ಟುವುದು ಕೂಡ ಪ್ರಾಣಿ ಹಿಂಸೆಯಾಗುವುದಿಲ್ಲವೇ?

– ಚಿದಂಬರ ಬೈಕಂಪಾಡಿ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.