ಹೊಸಕೆರೆಹಳ್ಳಿ ಕೆರೆಯಲ್ಲಿ ಮಂಟಪ ಪತ್ತೆ
Team Udayavani, Jan 24, 2017, 11:37 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹೊಸಕೆರೆಹಳ್ಳಿ ಕೆರೆಯಲ್ಲಿ ಸೋಮವಾರ ಹೂಳೆತ್ತುವ ಕಾಮಗಾರಿ ವೇಳೆ ಪುರಾತನ ಕಾಲದ ಎರಡು ಮಂಟಪಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ವೇಳೆ ಮೊದಲಿಗೆ ಕೋಡಿ ಬಳಿ ಮಂಟಪ ಪತ್ತೆಯಾಗಿತ್ತು. ಹೂಳಿನಲ್ಲಿ ಬಹುತೇಕ ಹೂತು ಹೋಗಿದ್ದ ಮಂಟಪ ಗಮನಕ್ಕೆ ಬಾರದೆ ಜೆಸಿಬಿ ಚಾಲಕ ಅವುಗಳನ್ನು ಸಂಪೂರ್ಣ ನೆಲಸಮ ಮಾಡಿದ್ದ.
ಇದೀಗ ಸೋಮವಾರದ ಕಾರ್ಯಾಚರಣೆ ವೇಳೆ ಮತ್ತೂಂದು ಮಂಟಪ ಪತ್ತೆಯಾಗಿದೆ. ಮಂಟಪ ಪುರಾತನ ಕಾಲದ್ದಾಗಿರುವುದರಿಂದ ಪುರಾತತ್ವ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಮಂಟಪದ ಸುತ್ತಲೂ ಹೂಳೆತ್ತುವ ಕಾಮಗಾರಿ ನಡೆಸದೆ ಅಂತರ ಕಾಯ್ದುಕೊಂಡು ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಹನುಮಂತಪ್ಪ, ಮಂಟಪಗಳು ನಾವು ಚಿಕ್ಕ ಹುಡುಗರಾಗಿದ್ದಾಗ ಕಣ್ಣಿಗೆ ಕಾಣುತ್ತಿದ್ದವು. ಈ ಮಂಟಪದ ಮಟ್ಟಕ್ಕೆ ನೀರು ತುಂಬಿದರೆ ಕೋಡಿ ಹರಿಯುತ್ತದೆ ಎಂದು ಹೇಳುತ್ತಿದ್ದರು. ಕ್ರಮೇಣ ಹೂಳು ತುಂಬಿಕೊಂಡು ಮಂಟಪಗಳು ಕಣ್ಮರೆಯಾಗಿದ್ದವು ಎನ್ನುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.