ಬಾ ಬಾ ಸೈಕಲ್!
Team Udayavani, Jan 25, 2017, 2:28 PM IST
ಬೈಸಿಕಲ್ ತುಳಿಯುವುದು ಎಲ್ಲಾ ವ್ಯಾಯಾಮಗಳಿಗಿಂತ ಬಹಳ ಉತ್ತಮ ವ್ಯಾಯಾಮವಾಗಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ಸತ್ಪರಿಣಾಮಗಳು ಉಂಟಾಗುತ್ತವೆ. ಒಂದು ಗಂಟೆ ಕಾಲ ಬೈಸಿಕಲ್ ತುಳಿಯುವುದರಿಂದ ನಾವು 500 ಕ್ಯಾಲರಿಗಳಷ್ಟನ್ನು ಬರ್ನ್ ಮಾಡಬಹುದು. ಆದರೆ ಈ ವ್ಯಾಯಾಮವನ್ನು ನಮ್ಮ ವಯಸ್ಸಿಗನುಗುಣವಾಗಿ ಮಾಡಬೇಕಾಗುತ್ತದೆ.
ನೀವು ವ್ಯಾಯಾಮಕ್ಕೆ ಹೊಸಬರಾದರೆ ಇದನ್ನು ಕಡಿಮೆ ಸಮಯದಿಂದ ಆರಂಭಿಸಬೇಕಾಗುತ್ತದೆ. ನಿಮ್ಮ ದೇಹ ಈಗಾಗಲೇ ಒಳ್ಳೆಯ ಆಕಾರದಲ್ಲಿದ್ದರೆ ಬೈಸಿಕಲ್ ತುಳಿಯುವುದು ನಿಮ್ಮ ದೇಹವನ್ನು ಇನ್ನಷ್ಟು ಹುರಿಗಟ್ಟಿಸುವಲ್ಲಿ
ಸಹಕಾರಿಯಾಗುತ್ತದೆ. ನೀವು ಈ ವ್ಯಾಯಾಮವನ್ನು ಮೊದಲು 10-15 ನಿಮಿಷಗಳಿಂದ ಪ್ರಾರಂಭಿಸಿ ನಿಧಾನವಾಗಿ
40-60 ನಿಮಿಷಗಳವರೆಗೂ ವಿಸ್ತರಿಸಬಹುದು.
ಒಂದು ಒಳ್ಳೆಯ ಸೈಕಲ್ಲನ್ನು ಖರೀದಿಸಿ ವಾಹನ ದಟ್ಟಣೆಯಿಂದ ದೂರವಿರುವ ಪ್ರದೇಶವನ್ನು ಆಯ್ದು ಕೊಂಡು ನಿಮ್ಮ ವ್ಯಾಯಾಮವನ್ನು ಪ್ರಾರಂಭಿಸಿ. ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ. ಆದಷ್ಟು ಹಗಲಿನಲ್ಲಿ ಅಭ್ಯಾಸ ನಡೆಸಿ. ಒಂದು ಬಾಟಲ್‌ನಲ್ಲಿ ನೀರನ್ನು ಕೊಂಡೊಯ್ಯಲು ಮರೆಯಬೇಡಿ. 20 ನಿಮಿಷಕ್ಕೊಮ್ಮೆ ನೀರು ಕುಡಿಯಿರಿ. ಏಕೆಂದರೆ ಸೈಕ್ಲಿಂಗ್ ನಿಮ್ಮ ದೇಹದಲ್ಲಿರುವ ನೀರಿನಂಶವನ್ನು ಕಡಿಮೆ ಮಾಡುತ್ತದೆ.
ನೀವು 35 ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದರೆ ನಿಮಗೆ ಯಾವುದಾದರೂ ಶಸ್ತ್ರಚಿಕಿತ್ಸೆ ಅಥವಾ ಗಾಯ ಗಳಾಗಿದ್ದರೆ
ನೀವು ವೈದ್ಯರ ಸಲಹೆಯನ್ನು ಪಡೆದು ಈ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಹಿರಿಯ ನಾಗರೀಕರು
ಸೈಕ್ಲಿಂಗ್ ಮಾಡಬೇಕಿದ್ದರೆ ಒಳಾಂಗಣ ಪ್ರದೇಶವನ್ನು ಆಯ್ದುಕೊಳ್ಳುವುದು ಸೂಕ್ತ. ಹೊರಗೆ ಮಾಡಬೇಕಾದರೆ ಅವರ
ಜೊತೆ ರಕ್ಷಣೆಗಾಗಿ ಯಾರಾದರೂ ಇದ್ದರೆ ಒಳ್ಳೆಯದು.
ಸೈಕ್ಲಿಂಗ್‌ನ ಲಾಭಗಳು
ಸೈಕ್ಲಿಂಗ್ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನಿಯಂತ್ರಿಸುತ್ತದೆ. ದಿನಕ್ಕೆ 30-40 ನಿಮಿಷದ ಸೈಕ್ಲಿಂಗ್ ನಿಮ್ಮ ಹೃದಯದ ಹಾಗೂ ಶ್ವಾಸಕೋಶದ ಸ್ವಾಸ್ಥÂವನ್ನು ಕಾಪಾಡುತ್ತದೆ. ಹೃದಯಕ್ಕೆ ರಕ್ತಸಂಚಾರ ಸರಿಯಾಗಿ ಆಗುವಲ್ಲಿ
ಮುಖ್ಯ ಪಾತ್ರ ವಹಿಸುತ್ತದೆ. ಸೈಕ್ಲಿಂಗ್ ನಿಮ್ಮ ದೇಹವನ್ನು ಒಂದು ಒಳ್ಳೆಯ ಆಕಾರಕ್ಕೆ ತರುವಲ್ಲಿ ಸಹಕರಿಸುತ್ತದೆ. ದೇಹವನ್ನು ಹುರಿಗಟ್ಟಿಸುತ್ತದೆ. ಮೊಳಕಾಲು, ತೊಡೆ ಹಾಗೂ ನಿತಂಬಗಳನ್ನು ಗಟ್ಟಿಗೊಳಿಸುತ್ತದೆ. ಕೀಲುಸಂಬಂಧಿ ನೋವುಗಳಿಂದ ಬಳಲುತ್ತಿರುವವರು ಸಹ ಈ ವ್ಯಾಯಾಮ ಮಾಡಿ ಉತ್ತಮ ಫಲಿತಾಂಶ ಪಡೆಯಬಹುದು. ದೇಹದ ತೂಕದಲ್ಲಿ ಸಮತೋಲನೆಯನ್ನು ಸಾಧಿಸಬಹುದು.
ಮೊದಲೇ ಹೇಳದಂತೆ ಸೈಕ್ಲಿಂಗ್ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ದೇಹದಲ್ಲಿ ಅನಗತ್ಯವಾಗಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸುತ್ತದೆ. ದೇಹವನ್ನು ಹಗುರವಾಗಿಸುತ್ತದೆ, ಆರೋಗ್ಯವಾಗಿರಿಸುತ್ತದೆ. ಸೈಕ್ಲಿಂಗ್ ಮಾಡಿದರೆ ನಮ್ಮ ದೇಹ ಗಟ್ಟಿಯಾಗುವುದೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸೈಕ್ಲೈಂಗ್ ಮಾಡುವುದರಿಂದ ಅನೇಕ ಬಗೆಯ ಕ್ಯಾನ್ಸರನ್ನೂ ಸಹ ತಡೆಗಟ್ಟಬಹುದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು, ಸೈಕ್ಲಿಂಗ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು
ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.