ತಮಿಳುನಾಡಲ್ಲಿ ಮಾ.1ರಿಂದ ಪೆಪ್ಸಿ, ಕೋಲಾ ಮಾರಾಟವಿಲ್ಲ?
Team Udayavani, Jan 26, 2017, 3:45 AM IST
ಚೆನ್ನೈ: ಹಾಲಿ ವರ್ಷದ ಮಾರ್ಚ್ 1 ರಿಂದ ತಮಿಳುನಾಡಿನಲ್ಲಿ ಪೆಪ್ಸಿ ಮತ್ತು ಕೋಕಕೋಲಾದ ಉತ್ಪನ್ನಗಳನ್ನು ಮಾರದೇ ಇರಲು ಅಲ್ಲಿನ ವ್ಯಾಪಾರಿಗಳ ಸಂಘಟನೆ ನಿರ್ಧರಿಸಿದೆ. ಈ ಬಗ್ಗೆ “ದ ಹಿಂದೂ’ ವರದಿ ಮಾಡಿದೆ. ರಾಜ್ಯದಲ್ಲಿ ದೇಶಿಯ ಉತ್ಪನ್ನಗಳಿಗೇ ಹೆಚ್ಚಿನ ಆದ್ಯತೆ ನೀಡಲು ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ನಿರ್ಧರಿಸಿದೆ.
ಸದಸ್ಯರಿಗೆ ದೇಶಿಯ ಬ್ರಾಂಡ್ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಬೇಕು ಎಂದು ಅದು ಸೂಚನೆ ನೀಡಿದೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘದ ಅಧ್ಯಕ್ಷ ಎ.ಎಂ.ವಿಕ್ರಮರಾಜ ಹೇಳುವ ಪ್ರಕಾರ ಮುಂದಿನ ತಿಂಗಳು ಪೂರ್ತಿ ವಿದೇಶಿ ಬ್ರಾಂಡ್ಗಳಿಂದ ಉಂಟಾಗುವ ಹಾನಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜನಪ್ರಿಯ ವಿದೇಶಿ ಬ್ರಾಂಡ್ ಒಂದು ಮಕ್ಕಳಿಗೆ ಉಪಯೋಗಿಸಲು ಯೋಗ್ಯವಲ್ಲ ಎಂಬ ಬಗ್ಗೆ ಕಂಪನಿಯೇ ಒಪ್ಪಿಕೊಂಡಿತ್ತು ಎಂದು ವಿಕ್ರಮರಾಜ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.