ಸಂಗೀತ ಕ್ಷೇತ್ರದ ಮೇರು ಪರ್ವತ ಭೀಮಸೇನ ಜೋಶಿ
Team Udayavani, Jan 26, 2017, 12:03 PM IST
ಬೆಂಗಳೂರು: ಭಾರತರತ್ನ ದಿ.ಭೀಮಸೇನ ಜೋಶಿಯವರು ದೇಶ, ವಿದೇಶಗಳಲ್ಲಿ ಹಿಂದೂಸ್ತಾನಿ ಸಂಗೀತದ ಅಲೆ ಸೃಷ್ಟಿಸಿದ ಸಂಗೀತ ಸಾರ್ವಭೌಮ ಹಾಗೂ ನಮ್ಮ ಕನ್ನಡ ನಾಡಿನ ಅತ್ಯುತ್ತಮ ಕಲಾವಿದರು ಎಂಬುದು ನಮಗೆಲ್ಲ ಹೆಮ್ಮೆ ಎಂದು ನಿರ್ಮಾಣ್ ಸಮೂಹ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಭೀಮಸೇನ ಜೋಶಿ ಅವರ 6ನೇ ಪುಣ್ಯ ತಿಥಿಯ ಪ್ರಯುಕ್ತ, ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ಮಂಗಳವಾರ ನಿರ್ಮಾಣ್ ಶೆಲ್ಟರ್ಸ್ (ಬೆಂ) ಪ್ರ„.ಲಿ., ಹಾಗೂ ಎಲ್.ಎನ್. ನಿರ್ಮಾಣ ಪುರಂದರ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಭೀಮನಮನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿವಂಗತ ಭೀಮಸೇನ ಜೋಶಿ ಅವರ ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡು ದೇಶ- ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವುದು ಜೋಶಿಯವರಿಗೆ ಸಲ್ಲತಕ್ಕ ಗೌರವ.
ಇಂತಹ ಮಹಾನ್ ವ್ಯಕ್ತಿಗೆ ನಮನ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎಂಬುದರಲ್ಲಿ ಎರಡು ಮಾತಿಲ್ಲ. ಡಾ. ನಾಗರಾಜ್‌ರಾವ್ ಹವಾಲ್ದಾರ್, ಭೀಮಸೇನ ಜೋಶಿ ಅವರು ಸಮಕಾಲೀನ ಕವಿಗಳ ರಚನೆಗಳನ್ನು ಹಿಂದೂಸ್ತಾನಿ ಶೈಲಿಯಲ್ಲಿ ಹಾಡುವ ಅತ್ಯುತ್ತಮ ಸಂಗೀತ ದಿಗ್ಗಜರು ಎನಿಸಿಕೊಂಡಿದ್ದರು ಎಂದು ಹೇಳಿದರು. ಭೀಮಸೇನ ಜೋಶಿಯವರ ಶಿಷ್ಯ ಪಂಡಿತ್ ಮಾಧವ ಗುಡಿಯವರ ಶಿಷ್ಯ ಡಾ. ನಾಗರಾಜ್‌ರಾವ್ ಹವಾಲ್ದಾರ್ ಮತ್ತು ತಂಡದವರಿಂದ ದಾಸವಾಣಿ ಹಾಗೂ ಸಂತವಾಣಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.