ದೇಶಪಾಂಡೆ ಪ್ರತಿಷ್ಠಾನದಿಂದ ಉ.ಕ.ದಲ್ಲಿ ಬದಲಾವಣೆ ಪರ್ವ


Team Udayavani, Jan 26, 2017, 12:39 PM IST

hub2.jpg

ಹುಬ್ಬಳ್ಳಿ: ಉದ್ಯಮಕ್ಕೆ ಉತ್ತೇಜನ ಜತೆಗೆ ಸಾಮಾಜಿಕ ಸೇವೆಗಳೊಂದಿಗೆ ಉತ್ತರ ಕರ್ನಾಟಕದಲ್ಲಿ ಬದಲಾವಣೆ ಪರ್ವಕ್ಕೆ ದೇಶಪಾಂಡೆ ಪ್ರತಿಷ್ಠಾನ ಮಹತ್ವದ ಹೆಜ್ಜೆ ಇರಿಸಿದ್ದು, ಕಳೆದ ಹತ್ತು ವರ್ಷಗಳಲ್ಲಿ ಈ ಯತ್ನದ ಫ‌ಲ ದೊರೆಯತೊಡಗಿದೆ ಎಂದು ವಿಧಾನಸಭೆಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.

ದೇಶಪಾಂಡೆ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಸಣ್ಣ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿ ಹಾಗೂ ಜನರ ಮನೋಭಾವ ಬದಲಾವಣೆ ನಿಟ್ಟಿನಲ್ಲಿ ಡಾ| ಗುರುರಾಜ ದೇಶಪಾಂಡೆ ಅವರು ಹೊಂದಿರುವ ಕನಸುಗಳು ಹಂತ-ಹಂತವಾಗಿ ನನಸಾಗತೊಡಗಿವೆ. ಸಣ್ಣ-ಸಣ್ಣಉದ್ಯಮಿಗಳಿಗೆ ಉತ್ತೇಜನ ಮೂಲಕ ಉದ್ಯಮ ವಲಯ ವೃದ್ಧಿಗೆ ಪ್ರತಿಷ್ಠಾನ ಮುಂದಾಗಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಕೌಶಲ ಅಭಿವೃದ್ಧಿ ಹಾಗೂ ನವೋದ್ಯಮಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ಡಾ| ದೇಶಪಾಂಡೆಯವರು ಕೆಲ ವರ್ಷಗಳ ಹಿಂದೆಯೇ ಈ ಕಾರ್ಯ ಕೈಗೊಂಡಿದ್ದಾರೆ. ಕೌಶಲ ಅಭಿವೃದ್ಧಿ ಹಾಗೂ ಇನ್‌ಕುಬೇಷನ್‌ ಕೇಂದ್ರ ಆರಂಭಿಸಿದ್ದಾರೆ. ಕೃಷಿ ಕ್ಷೇತ್ರಕ್ಕೂ ಮಹತ್ವ ನೀಡಿದೆ ಎಂದರು. 

ಮೌನ ಕ್ರಾಂತಿ: ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶಪಾಂಡೆ ಪ್ರತಿಷ್ಠಾನ  ಈ ಭಾಗದ ಅಭಿವೃದ್ಧಿ, ಕೌಶಲ ತರಬೇತಿ, ನವೋದ್ಯಮ ದೃಷ್ಟಿಯಿಂದ ಮೌನಕ್ರಾಂತಿಗೆ ಮುಂದಾಗಿದೆ ಎಂದರು. ದೇಶದ ಒಟ್ಟು ಆಂತರಿಕ ಬೆಳವಣಿಗೆ ದರದಲ್ಲಿ ಕೈಗಾರಿಕಾ ವಲಯದ ಪಾಲಿನಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮದ ಪಾಲು ಶೇ.45ರಷ್ಟು ಆಗಿದ್ದರೆ, ರಫ್ತು ವಹಿವಾಟಿನಲ್ಲಿ ಶೇ.45ರಷ್ಟು ಪಾಲು ಹೊಂದಿದೆ.

ಇಂತಹ ಸಣ್ಣ ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಕಾರ್ಯವನ್ನು ದೇಶಪಾಂಡೆ ಪ್ರತಿಷ್ಠಾನ ಮಾಡುತ್ತಿದೆ ಎಂದರು. ಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಮಾತನಾಡಿ, 40 ವರ್ಷದ ಹಿಂದೆ ನಾನು ಒಬ್ಬ ನವೋದ್ಯಮಿಯಾಗಿದ್ದೆ. ಇಂದು ಎಂಬಿಎ ಪದವೀಧರರು ಉದ್ಯಮ ಕೌಶಲ ಇದೆ ಎಂದು ಹೇಳುತ್ತಿದ್ದು, ಉದ್ಯಮ ಯೋಜನೆಗೆ ಮುಂದಾಗಿ ಎಂದರೆ ಅದು ಕೊಡಿ, ಇದು ಕೊಡಿ ಎಂದು ಹೇಳುತ್ತಾರೆ.

ಅವರಿಗೆ ನೋವು ಸಹಿಸುವ ಶಕ್ತಿ ಅವರಿಗಿಲ್ಲ. ಆದರೆ, ಸಣ್ಣ-ಪುಟ್ಟ ಉದ್ಯಮದಾರರು ಇರುವ ಸಂಪನ್ಮೂಲದಲ್ಲೇ, ಎದುರಾಗುವ ನೋವು ನುಂಗಿಕೊಂಡು ಉದ್ಯಮ ಕಟ್ಟುತ್ತಾರೆ. ಅವರಿಗೆ ಉತ್ತೇಜನ ನೀಡಿಕೆಗೆ ಪ್ರತಿಷ್ಠಾನ ಮುಂದಾಗಿದೆ ಎಂದರು. ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಇಂದ್ರನಿಲ್‌ ಭಾಂಜಾ ಮಾತನಾಡಿ, ನವೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಎಸ್‌ಬಿಐ ಗೋಕುಲರಸ್ತೆಯಲ್ಲಿ ನೂತನ ಶಾಖೆ ಆರಂಭಿಸಿದೆ.

ಇಲ್ಲಿ ಮಾರ್ಗದರ್ಶನ, ಆರ್ಥಿಕ ನೆರವು ಇನ್ನಿತರ ಸಹಕಾರಗಳ ಮಾಹಿತಿ ಲಭ್ಯವಾಗುತ್ತದೆ ಎಂದರು.  ವಿಜಯಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಯಳ್ಳೂರ ಮಾತನಾಡಿದರು. ದೇಶಪಾಂಡೆ ಪ್ರತಿಷ್ಠಾನದ ಜಯಶ್ರೀ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ಡಾ| ನೀಲಂ ಮಹೇಶ್ವರಿ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ನವೋದ್ಯಮಿಗಳಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಲಾಯಿತು. ನವೋದ್ಯಮ ಸಾಧಕರು, ಮಾರ್ಗದರ್ಶಕರನ್ನು ಸನ್ಮಾನಿಸಲಾಯಿತು.  

ಟಾಪ್ ನ್ಯೂಸ್

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Bommai BJP

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

Sheik Hasina

Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

12

Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

Will do Maratha Reservation Model protest for Reservation: Panchmasali Shri

ಮೀಸಲಾತಿಗಾಗಿ ಮರಾಠ ಮೀಸಲು ಮಾದರಿ ಉಗ್ರ‌ ಹೋರಾಟ: ಪಂಚಮಸಾಲಿ ಶ್ರೀ

Hubli: ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ: ಶೆಟ್ಟರ್

Hubli: ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ: ಶೆಟ್ಟರ್

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

ನ.7ರಿಂದ ರಾಜ್ಯಾದ್ಯಂತ ‘ಅಕ್ಷರ ಜ್ಯೋತಿ’ ಯಾತ್ರೆ

Bidar: ನ.7ರಿಂದ ರಾಜ್ಯಾದ್ಯಂತ ‘ಅಕ್ಷರ ಜ್ಯೋತಿ’ ಯಾತ್ರೆ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Bommai BJP

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

ಬಾಗಲಕೋಟೆ:ಕೋಟೆಕಲ್ಲದಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

Sheik Hasina

Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.