ಕಂಬಳ: ಸಾಂಸ್ಕೃತಿಕ ಏಕೀಕರಣಕ್ಕೆ ಸ್ಫೂರ್ತಿ?
Team Udayavani, Jan 27, 2017, 8:55 AM IST
ರಾಜ್ಯಾದ್ಯಂತ ಜಾಗೃತಿ, ಸರಕಾರದ ಅಸ್ಪಷ್ಟ ನಿಲುವು, ಜ. 28ಕ್ಕೆ ಕಂಬಳ
ಮಂಗಳೂರು: ಕಂಬಳದ ಕುರಿತು ಮೂಡಿರುವ ಜಾಗೃತಿ ಪರ್ಯಾಯವಾಗಿ, ಕರ್ನಾಟಕದ ಸಾಂಸ್ಕೃತಿಕ ಏಕೀಕರಣಕ್ಕೆ ಸ್ಫೂರ್ತಿಯಾಗಲಿದೆಯೇ? ಕಳೆದ ಒಂದು ವಾರದಿಂದ “ಕಂಬಳ’ದ ವೃತ್ತಾಂತ ಸಮೂಹ ಮಾಧ್ಯಮಗಳಲ್ಲಿ ಚಿಂತನೆ. ಸಂಘಟಕರ ನಿಲುವು ಜನತೆಯ ಹಕ್ಕೊತ್ತಾಯಕ್ಕೆ ರಾಜ್ಯ ಸರಕಾರದ ಸ್ಪಂದನೆ ಗಮನಿಸಿದರೆ; ಈ ಪ್ರಶ್ನೆಗೆ ದೊರೆಯುವ ಸರ್ವಾನುಮತಿ ಉತ್ತರ-“ಹೌದು’.
ಕಂಬಳಕ್ಕೆ ನಿಷೇಧ ವಿಧಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ಹಿಂಸಾಚಾರ ನಡೆಯುತ್ತಿದೆ ಎಂಬುದು ಕಾರಣವಾಗಿತ್ತು. ಕಂಬಳದ ಬಗ್ಗೆ ಅರಿವೇ ಇಲ್ಲದವರು ಮೊಕದ್ದಮೆ ಹೂಡಿದ್ದರು. ವಿಶೇಷ ಎಂದರೆ ಕಂಬಳದ ಜತೆ ಬೆರೆತುಕೊಂಡಿದ್ದ ಧಾರ್ಮಿಕ ಆಚರಣೆಗಳು, ಭಾವನಾತ್ಮಕ ಸಂಬಂಧಗಳ ಬಗ್ಗೆ ಅವರಿಗೆ ಕಿಂಚಿತ್ ಅರಿವೂ ಇರಲಿಲ್ಲ.
ಕರಾವಳಿಯ ಈ ಪ್ರದೇಶದ ಜನತೆ ಕಂಬಳ ನಿಷೇಧ ಹಿಂದೆಗೆತಕ್ಕೆ ನ್ಯಾಯಾಂಗದ ಮೊರೆ ಹೋಗಿದ್ದು, ಈ ಪ್ರದೇಶದ ಪರಂಪರೆಗೆ ಅನುಗುಣವಾಗಿ ಪ್ರತಿಭಟನೆ ಶಾಂತಿಯುತ, ಕಾನೂನಾತ್ಮಕವಾಗಿತ್ತು. ಆದರೆ ಜಲ್ಲಿಕಟ್ಟು ಪ್ರಕರಣ ಕಂಬಳ ಪ್ರೇಮಿಗಳನ್ನೂ ಬಡಿದೆಬ್ಬಿಸಿದೆ.
ಒಗ್ಗಟ್ಟಿಲ್ಲದ ಸಂಗತಿ
ಕರ್ನಾಟಕ (ಆಗ ಮೈಸೂರು) ರಾಜ್ಯ ಈಗಿನ ಭೌಗೋಳಿಕ ಸ್ವರೂಪ ಪಡೆದು 60 ವರ್ಷವಾಗಿದೆ. ಇದರಿಂದ ಭೌಗೋಳಿಕ ಏಕೀಕರಣ ನಡೆಯಿತೇ ಹೊರತು, ಅದು ಭಾವನಾತ್ಮಕ ಅಥವಾ ಸಾಂಸ್ಕೃತಿಕ ಏಕೀಕರಣ ಆಗಲೇ ಇಲ್ಲ. ಇಷ್ಟು ವರ್ಷ ಹೀಗೆಯೇ ಇದ್ದ ಕಟುವಾಸ್ತವ ಕಂಬಳ ನಿಷೇಧದ ಸಂದರ್ಭ ಹೊರ ಹೊಮ್ಮಿತು.
ಶಕ್ತಿ ಸಂಚಯನ
ಕಂಬಳಕ್ಕೆ ನಿಷೇಧ ವಿಧಿಸಲಾದ ಸಂದರ್ಭ ಕರಾವಳಿಯ ಸಂಘಟನೆಗಳವರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ನಿಷೇಧ ತೆರವಿನ ಬಗ್ಗೆ ಸರಕಾರ ಕ್ಷಿಪ್ರ ಕ್ರಮ ಕೈಗೊಳ್ಳಲಿಲ್ಲ. ಆದರೆ ಹೋರಾಟ ರಾಜ್ಯವ್ಯಾಪಿ ಸ್ವರೂಪ ಪಡೆಯ
ಬಹುದು ಎಂದಾದಾಗ ಸರಕಾರವೂ ಎಚ್ಚೆತ್ತಿದೆ. ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದೆ.
ಜ. 28: ಐತಿಹಾಸಿಕ ದಿನ
ಕಂಬಳ ಉಳಿಸಿ ಎಂದು ದೊಡ್ಡ ಅಭಿಯಾನವೇ ಈಗ ನಡೆಯುತ್ತಿದೆ. ಕೃಷಿಯೊಂದಿಗೆ ನೇರ ನಂಟಿರುವ ಕಂಬಳದ ಮೂಲಕ ಕರಾವಳಿಯಲ್ಲಿ ಅಪಾರ ಕೃಷಿಭೂಮಿ ಉಳಿಯುವಂತಾಗಿದೆ. ಈ ಹಿನ್ನೆಲೆಧಿಯಲ್ಲಿ ಜ. 28ರಂದು ಮೂಡಬಿದಿರೆಯಲ್ಲಿ “ಕಂಬಳ’ ನಡೆಸಲು ಕಂಬಳ ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಇದು ವಿಜಯೋತ್ಸವ ಅಥವಾ ಪ್ರತಿಭಟನೆಯ ಕಂಬಳವಾಗಲಿದೆ.
ಇದು ಅವರ ಕಲೆ; ಅದು ಇವರ ಕಲೆ
ಕಂಬಳ ಉಳಿಸಿ ಎಂಬ ಹೋರಾಟ ಈಗ ನಿರ್ಣಾಧಿಯಕ ಹಂತ ತಲುಪಿದೆ. ರಾಜ್ಯ-ಕೇಂದ್ರ ಸರಕಾರಗಳ ನಿರ್ಧಾರದಿಂದ, ನಿಷೇಧ ಕೈಬಿಡಬಹುದೆಂಬ ತಾರ್ಕಿಕ ಅಂತ್ಯವೂ ಲಭ್ಯವಾಗಿದೆ. ಈ ನಿರ್ಧಾರ ತುರ್ತು ನೆಲೆಯಲ್ಲಿ ನಡೆಯಬೇಕೆಂಬುದೇ ಹೋರಾಟಧಿಗಾರರ ನಿಲುವು. ಕರ್ನಾಟಕ ಅಪೂರ್ವ ಸಾಂಸ್ಕೃತಿಕ ವೈವಿಧ್ಯ ಹೊಂದಿದೆ. ಆದರೆ ದುರಂತಧಿವೆಂದರೆ ಅವೆಲ್ಲವನ್ನು ಆಯಾ ಪ್ರದೇಶಕ್ಕೆ ಸೀಮಿತಧಿಗೊಳಿಸಲಾಗಿದೆ. ಉದಾ: ಕಂಬಳ, ಯಕ್ಷಧಿಗಾನಧಿವೆಂದರೆ ಕರಾವಳಿಗೆ; ಡೊಳ್ಳು ಕುಣಿತ, ವೀರಗಾಸೆ ಎಂದರೆ ಮಲೆನಾಡಿಗೆ; ಎತ್ತಿನಬಂಡಿ ಓಟ ಗಡಿನಾಡಿಗೆ ಎಂದೆಲ್ಲ ಸೀಮಿತಗೊಳಿಸುವ ಮನೋಭಾವವಿದೆ. ಈ ಎಲ್ಲ ಜನಪದ, ಸಾಂಸ್ಕೃತಿಕ ಕಲೆಗಳು ಕರ್ನಾಟಕ ರಾಜ್ಯದ್ದು ಎಂಬ ಸಾರ್ವತ್ರಿಕ ಭಾವನೆ ಮೂಡಿದಾಗ ಮಾತ್ರ ಇದು ಸಾಧ್ಯ.
ಪರಸ್ಪರ ಸಾಂಸ್ಕೃತಿಕ ತಿಳಿವಳಿಕೆ ಬೆಸೆಯಬೇಕಾದ ಹಂಪಿ ಉತ್ಸವ, ಕರಾವಳಿ ಉತ್ಸವ, ಕದಂಬ ಉತ್ಸವಗಳು ಕೂಡ ಸರಕಾರಿ ಉತ್ಸವಗಳಾಗಿವೆ. ಈಗ ರಾಜ್ಯದ ಸಾಂಸ್ಕೃತಿಕ ಬೆಸುಗೆಗೆ ಕಂಬಳ ಪ್ರಕರಣ ತಳಹದಿ ನಿರ್ಮಿಸಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.