ಟನ್‌ಗಟ್ಟಲೆ ಹಿಮ ಬಿದ್ದರೂ ಬದುಕಿ ಬಂದ ಬೆಳಗಾವಿಯ ವೀರ ಯೋಧರು
Team Udayavani, Jan 27, 2017, 9:18 AM IST
ಶ್ರೀನಗರ: ಕಾಶ್ಮೀರದ ಗುರೇಜ್ ವಲಯದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗ ಯೋಧರು ಪವಾಡ ಸದೃಶವಾಗಿ ಬದುಕಿ ಬಂದಿದ್ದಾರೆ.
ಬುಧವಾರ ಬೆಳಗ್ಗೆ ಸಂಭವಿಸಿನ ಭಾರಿ ಹಿಮಪಾತದ ವೇಳೆ ಸೇನಾ ಬಂಕರ್‌ನೊಳಗೆ ಸಿಲುಕಿದ್ದ ಬೆಳಗಾವಿಯ ಯೋಧ ಮೇಜರ್ ಶ್ರೀಹರಿ ಕುಗಜಿ ಮತ್ತು ಬಂಡಿವಡ್ಡರ್ ಅವರ ಮೇಲೆ ಟನ್‌ಗಟ್ಟಲೆ ಹಿಮದ ಗಡ್ಡೆಗಳು ಬಿದ್ದಿವೆ.
ಹಿಮದಲ್ಲಿ ಹೂತು ಹೋಗಿ ಸಾವಿನ ದವಡೆಗೆ ಸಿಲುಕಿದ್ದ ಇಬ್ಬರನ್ನೂ ಯೋಧರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೇಜರ್ ಶ್ರೀಹರಿ ಕುಗಜಿ
ಬೆಳಗಾವಿಯ ಸೇನಾ ಬೆಟಾಲಿಯನ್‌ನ ಮೇಜರ್ ಶ್ರೀಹರಿ ಕುಗಜಿ 115ನೇ ಮಹರ್ ಬೆಟಾಲಿಯನ್ಗೆ 3 ತಿಂಗಳ ಹಿಂದೆಯಷ್ಟೇ ವರ್ಗಾವಣೆ ಯಾಗಿದ್ದರು. ಶ್ರೀಹರಿ ಅವರ ತಂದೆಯೂ ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸಹೋದರಿ ಪಂಕಜಾ ಅವರು ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 3 ದಿನಗಳ ಒಳಗೆ ಕಾಶ್ಮೀರದಲ್ಲಿ ಹಿಮಪಾತಗಳಿಂದ ಮೃತರಾದ ಯೋಧರ ಸಂಖ್ಯೆ 11ಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.