ಅತ್ತೆ ಜೊತೆ ಜಗಳ;ಮಲಗಿದ್ದ 2 ವರ್ಷದ ಮಗುವನ್ನೇ ಮೆಟ್ಟಿಲಿಂದ ಎಸೆದ ತಾಯಿ
Team Udayavani, Jan 27, 2017, 4:05 PM IST
ನವದೆಹಲಿ:ಅತ್ತೆಯೊಂದಿಗೆ ಶರಂಪರ ಕಿತ್ತಾಟ ಮಾಡಿಕೊಳ್ಳುತ್ತ ತಾಳ್ಮೆ ಕಳೆದುಕೊಂಡ ಸೊಸೆ ಮಲಗಿದ್ದ ತನ್ನ ಎರಡು ವರ್ಷದ ಮಗುವನ್ನು ಮೆಟ್ಟಿಲಿನಿಂದ ಕೆಳಗೆ ಎಸೆದ ಘಟನೆ ದೆಹಲಿಯಲ್ಲಿ ನಡೆದಿದೆ. ಮಗುವನ್ನು ಎಸೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪತ್ನಿ ಸೋನು ಗುಪ್ತಾ(26ವರ್ಷ)ಳ ವಿರುದ್ಧ ಪತಿ ನಿತಿನ್ ಗುಪ್ತಾ ನೀಡಿದ ದೂರಿನ ಮೇರೆಗೆ ಪೊಲೀಸರು, ಸೋನು ವಿರುದ್ಧ ಕೊಲೆ ಯತ್ನ ಆರೋಪದ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದ್ದು, ಘಟನೆ ನಡೆದ ಬಳಿಕ ಸೋನು ಗುಪ್ತಾ ನಾಪತ್ತೆಯಾಗಿದ್ದಾಳೆ.
ಸೋನು ಕೂಗಾಡುತ್ತಾ ಮಲಗಿದ್ದ ಮಗುವನ್ನು ತೆಗೆದುಕೊಂಡು ಮೆಟ್ಟಿಲಿನಿಂದ ಎಸೆಯುತ್ತಿರುವ ದೃಶ್ಯ ನಿಮ್ಮ ಮನಕಲಕುತ್ತದೆ. ಘಟನೆಯಲ್ಲಿ ಮಗು ಅಂಶು ತಲೆಗೆ ಗಂಭೀರವಾದ ಗಾಯವಾಗಿದ್ದು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿ ಜಗಳಗಂಟಿಯಾಗಿದ್ದು, ಆಕೆಯ ನಡವಳಿಕೆಗೆ ಸಾಕ್ಷಿ ಎಂಬಂತೆ ಎರಡು ಕ್ಯಾಮರಾಗಳಲ್ಲಿ ದೃಶ್ಯಗಳು ಸೆರೆಯಾಗಿರುವುದಾಗಿ ಪತಿ ಹೇಳಿದ್ದಾರೆ. ಈ ಘಟನೆ ನಡೆದಿರುವುದು ಶನಿವಾರ, ಆದರೆ ದೂರನ್ನು ಮಂಗಳವಾರ ನೀಡಲಾಗಿತ್ತು.
ನಿತಿನ್ ಗುಪ್ತಾ ಕಾಸ್ಮೆಟಿಕ್ ಅಂಗಡಿ ಮಾಲೀಕ, ಸೋನು ಅವರನ್ನು ಕಳೆದ 5 ವರ್ಷದ ಹಿಂದೆ ವಿವಾಹವಾಗಿದ್ದು, ಆಕೆ ಜಗಳಗಂಟಿ ಸ್ವಭಾವದವಳೆಂದು ನಿತಿನ್ ಮತ್ತು ಪೋಷಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.