ಪಂಜಾಬ್ ಆಪ್ ಆಶ್ವಾಸನೆ: 5 ರೂ.ಗೆ ಊಟ, ಉಚಿತ ವೈಫೈ, 25 ಲಕ್ಷ ಉದ್ಯೋಗ
Team Udayavani, Jan 27, 2017, 4:10 PM IST
ಅಮೃತಸರ : 2017ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು ಹಲವಾರು ಭಾರೀ ದೊಡ್ಡ ಆಶ್ವಾಸನೆಗಳನ್ನು ರಾಜ್ಯದ ಜನರಿಗೆ ನೀಡಿದೆ.
ಜನರ ಕೈಗೆ ಅಧಿಕಾರ ನೀಡುವುದು ಈ ಆಶ್ವಾಸನೆಗಳಲ್ಲಿ ಅತೀ ದೊಡ್ಡದಾಗಿದೆ. ಇತರ ಕೆಲವು ಆಶ್ವಾಸನೆಗಳು ಹೀಗಿವೆ :
1. ಪಂಜಾಬನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವುದು.
2. ರಾಜ್ಯದ ಯುವಕರಿಗೆ ಸಾಗರೋತ್ತರ ಉದ್ಯೋಗಗಳನ್ನು ದೊರಕಿಸಲು ಪಂಜಾಬ್ ಸಾಗರೋತ್ತರ ಉದ್ಯೋಗ ನಿಗಮವನ್ನು ಸ್ಥಾಪಿಸುವುದು.
3. ನರ್ಸಿಂಗ್ ಮತ್ತು ಅರೆ ವೈದ್ಯಕೀಯ ತರಬೇತಿ ಸೌಕರ್ಯಗಳೊಂದಿಗೆ 3 ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವುದು.
4. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸುವುದು.
5. ಎಲ್ಲ ಪಂಜಾಬಿಗಳಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಒದಗಿಸುವುದು.
6. ವೃದ್ಧರು, ದಿವ್ಯಾಂಗರು ಮತ್ತು ವಿಧವೆಯರ ಪಿಂಚಣಿಯನ್ನು ಈಗಿನ 500 ರೂ.ಗಳಿಂದ 2,500 ರೂ.ಗೆ ಏರಿಸುವುದು.
7. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತ್ತು ಉಪ ವಿಭಾಗೀಯ ಪಟ್ಟಣಗಳಲ್ಲಿ 5 ರೂ.ಗೆ ಆಮ್ ಆದ್ಮಿ ಕ್ಯಾಂಟೀನ್‌ಗಳಲ್ಲಿ ಊಟ ಒದಗಿಸುವುದು.
8. ಪಂಜಾಬನ್ನು ಡ್ರಗ್ ಮುಕ್ತ ಗೊಳಿಸುವುದು.
9. 25 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು. 2018ರ ಡಿಸೆಂಬರ್ ಒಳಗೆ ಪಂಜಾಬ್ ರೈತರನ್ನು ಋಣ ಮುಕ್ತಗೊಳಿಸುವುದು.
10. ಧಾರ್ಮಿಕ ಅಪವಿತ್ರ ಕೃತ್ಯಗಳಲ್ಲಿ ಶಾಮೀಲಾಗುವವರಿಗೆ ಅತ್ಯಂತ ಕಠಿನ ಶಿಕ್ಷೆ ನೀಡುವುದು.
“ಪಂಜಾಬ್ ನ ಜನಸಾಮಾನ್ಯರು ಸಾಂಪ್ರದಾಯಿಕ ರಾಜಕಾರಣದಿಂದ ಬೇಸತ್ತು ಹೋಗಿದ್ದಾರೆ. ಈಗಿನ್ನು ಜನರೇ ಅಧಿಕಾರವನ್ನು ಕೈಗೆತ್ತಿಕೊಳ್ಳಲಿದ್ದಾರೆ’ ಎಂದು ಪಂಜಾಬ್ ಆಪ್ ಘಟಕ ಟ್ವಿಟರ್‌ನಲ್ಲಿ ಹೇಳಿದೆ.
ಆಪ್ ನೀಡಿರುವ ಆಶ್ವಾಸನೆಗಳು ಅನುಷ್ಠಾನಗೊಂಡಲ್ಲಿ ಪಂಜಾಬ್ ರಾಜ್ಯವು ತನ್ನ ಎಲ್ಲ ನಿವಾಸಿಗಳಿಗೆ ಅತ್ಯುತ್ತಮ ರಾಜ್ಯ ಎನಿಸಲಿದೆ. ಆದರೆ ಈಗ ಈ ಬರಿಯ ಆಶ್ವಾಸನೆಗಳು ಮತಗಳನ್ನು ತರಬಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.