ಕೊರಟಗೆರೆ ಬಿಟ್ಟು ಬೆಂಗಳೂರಿಂದ ಸ್ಪರ್ಧಿಸಲು ಪರಮೇಶ್ವರ್ ಇಂಗಿತ
Team Udayavani, Jan 28, 2017, 3:45 AM IST
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಧಾನಸಭೆ ಕ್ಷೇತ್ರವನ್ನು ಭದ್ರಮಾಡಿಕೊಳ್ಳಲು ಬೆಂಗಳೂರು ನಗರದ ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸಲು ಈಗಿನಿಂದಲೇ ಕಾರ್ಯೋನ್ಮುಖವಾಗಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ಕೊರಟಗೆರೆಯಿಂದ ಇಲ್ಲಿಯ ತನಕ ರಾಜಕಾರಣ ಮಾಡುತ್ತಾ ಬಂದಿದ್ದ ಪರಮೇಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡು ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದ ನಂತರ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ.
ಕೊರಟಗೆರೆಯಲ್ಲಿ ಕಾಂಗ್ರೆಸ್ಸಿಗರು ಹಾಗೂ ವಿರೋಧಿಗಳು ಸಕ್ರಿಯವಾಗಿ ತಮ್ಮ ಸೋಲಿಗೆ ಸಂಚು ರೂಪಿಸುತ್ತಿರುವುದರ ಹಿನ್ನೆಲೆಯಲ್ಲಿ ಕೊರಟಗೆರೆಯಿಂದ ಬೆಂಗಳೂರಿನ ಕ್ಷೇತ್ರಗಳತ್ತ ಸ್ಥಳಾಂತರಗೊಳ್ಳಲು ಪರಮೇಶ್ವರ್ ನಿರ್ಧರಿಸಿದ್ದಾರೆ.
ತುಮಕೂರು ಜಿಲ್ಲೆಯ ಅದರಲ್ಲೂ ಕೊರಟಗೆರೆ ಕ್ಷೇತ್ರದ ಒಳ ರಾಜಕಾರಣದಿಂದ ಹಾಗೂ ಪಕ್ಷದೊಳಗಿನ ಹಿತಶತೃಗಳ ರಾಜಕೀಯ ದಾಳಕ್ಕೆ ಬೇಸತ್ತಿರುವ ಪರಮೇಶ್ವರ್ ಅವರು ಆಪ್ತರೊಂದಿಗೆ ಬೆಂಗಳೂರು ನಗರದ ವಿಧಾನಸಭೆ ಕ್ಷೇತ್ರಗಳಲ್ಲಿ ತಮಗೆ ಯಾವ ಕ್ಷೇತ್ರ ಹೆಚ್ಚು ಅನುಕೂಲಕರವಾಗಿದೆ ಎನ್ನುವ ಬಗ್ಗೆ ಈಗಾಗಲೇ ಮಾಹಿತಿಯನ್ನು ಪರಮೇಶ್ವರ್ ಪಡೆದಿದ್ದಾರೆ.
ದಲಿತರು, ಹಿಂದುಳಿದ ವರ್ಗದವರು, ಅಲ್ಪಂಖ್ಯಾತರು, ಕೊಳಗೇರಿ ನಿವಾಸಿಗಳೇ ನಿರ್ಣಾಯಕರಾಗಿರುವ ಬೆಂಗಳೂರಿನ ಮಹದೇವಪುರ, ಸರ್.ಸಿ.ವಿ.ರಾಮನ್‌ನಗರ ಹಾಗೂ ಪುಲಿಕೇಶಿನಗರ ಈ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪರಮೇಶ್ವರ್ ಆಸಕ್ತಿ ಹೊಂದಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಮತದಾರರ ಒಲವು, ಅವರ ಮನಸ್ಥಿತಿ, ತಮ್ಮ ಸ್ಪರ್ಧೆಯಿಂದ ಉದ್ಭವಿಸುವ ಪರಿಣಾಮಗಳನ್ನು ಈಗಿನಿಂದಲೇ ಊಹಿಸಿ ಅಗತ್ಯ ಭೂಮಿಕೆಯನ್ನು ಪರಮೇಶ್ವರ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೇ ಹೆಚ್ಚಿದ್ದು ಸೂಕ್ತ ಕಾಂಗ್ರೆಸ್ ಅಭ್ಯರ್ಥಿಯ ಕೊರತೆಯಿಂದಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಹದೇವಪುರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಾಗಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯರು ಸಲಹೆ ನೀಡಿದ್ದರು. ಆದರೆ, ಪರಮೇಶ್ವರ್, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸ್ವಕ್ಷೇತ್ರದಿಂದಲೇ ಸ್ಪರ್ಧಿಸಿ ರಾಜಕೀಯ ಶಿಶುವಾಗಿದ್ದ ಜೆಡಿಎಸ್‌ನ ಸುಧಾಕರ್‌ಲಾಲ್ ವಿರುದ್ಧ 18155 ಮತಗಳ ಅಂತರದಿಂದ ಸೋಲು ಅನುಭವಿಸಿ ಪರಮೇಶ್ವರ್ ರಾಜಕೀಯ ಹಿನ್ನೆಡೆಯನ್ನು ಅನುಭವಿಸಿದ್ದರು.
ಕೊರಟಗೆರೆ ಕ್ಷೇತ್ರವನ್ನು ಕಳೆದುಕೊಂಡ ನಂತರ ಪರಮೇಶ್ವರ್ ತುಮಕೂರಿನಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮರುಸ್ಥಾಪಿಸಲು ಪ್ರಯತ್ನಿಸಿದರಾದರೂ ಟಿ.ಬಿ.ಜಯಚಂದ್ರ ಅವರ ಅಸಹಕಾರ ಮತ್ತು ಜೆಡಿಎಸ್‌ನ ಪ್ರಾಬಲ್ಯದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೇರೂರಲು ಸಾಧ್ಯವಾಗುತ್ತಿಲ್ಲ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ತಮ್ಮನ್ನು ನೇಮಿಸುವಂತೆ ಪರಮೇಶ್ವರ್, ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರೂ ಈಗಾಗಲೇ ಉಸ್ತುವಾರಿ ಸಚಿವರಾಗಿರುವ ಟಿ.ಬಿ.ಜಯಚಂದ್ರ ಅವರಿಗೆ “ಡಿಸ್ಟರ್ಬ್’ ಮಾಡುವುದು ಬೇಡ ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಪರಮೇಶ್ವರ್ ಅವರಿಗೆ ನೀಡಲಾಯಿತು.
ಒಲ್ಲದ ಮನಸ್ಸಿನಿಂದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಪರಮೇಶ್ವರ್ ಒಪ್ಪಿಕೊಂಡಿದ್ದರಾದರೂ ತುಮಕೂರು ಜಿಲ್ಲೆಯ ಉಸ್ತುವಾರಿ ಪಡೆಯಲು ಇಂದಿಗೂ ಪ್ರಯತ್ನ ಮುಂದುವರಿಸಿದ್ದಾರೆ. ಈ ನಡುವೆ, ತುಮಕೂರು ಜಿಲ್ಲೆಯ ರಾಜಕಾರಣವನ್ನು ಬೆಂಗಳೂರಿಗೆ ಸ್ಥಳಾಂತರವಾಗಿ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಕನಸು ಕಾಣುತ್ತಿದ್ದಾರೆ.
*ಕೊರಟಗೆರೆಯಲ್ಲಿ ಕುಂಚಟಿಗ ಒಕ್ಕಲಿಗರು ಮತ್ತು ಲಿಂಗಾಯಿತರ ಪ್ರಾಬಲ್ಯ ಹೆಚ್ಚಾಗಿರುವುದು ಪರಮೇಶ್ವರ್ ತಲೆನೋವಿಗೆ ಕಾರಣ. ಆದರೂ ಕೊರಟಗೆರೆ ಮುಖಂಡರು ಪರಮೇಶ್ವರ್ ಬೆಂಗಳೂರಿಗೆ ಸ್ಥಳಾಂತರಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿ ಈ ಬಾರಿ ಕೊರಟಗೆರೆಯಿಂದಲೇ ಗೆಲ್ಲಿಸುತ್ತೇವೆ ಎಂದು ಒತ್ತಡ ಹಾಕತೊಡಗಿದ್ದಾರೆ. ಒಂದೊಮ್ಮೆ ಪರಮೇಶ್ವರ್ ಕೊರಟಗೆರೆಯಿಂದ ಸ್ಪರ್ಧಿಸದಿದ್ದರೆ ಅವರಿಗೆ ಆಪ್ತರಾದ ಅಭ್ಯರ್ಥಿ ನಿಲ್ಲಿಸಿ ಆ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಚಿಂತನೆ ನಡೆಸಿದ್ದಾರೆ.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.