ಗೋ ರಕ್ಷಣೆಗೆ ಅಭೇದ್ಯ ಕೋಟೆ: ರಾಘವೇಶ್ವರ ಶ್ರೀ
Team Udayavani, Jan 28, 2017, 3:50 AM IST
ಪಣಂಬೂರು: ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯ ಪರಿಕಲ್ಪನೆಯ ದಶರಥಗಳ ಮಹಾಭಿಯಾನ ‘ಮಂಗಲಗೋಯಾತ್ರೆ’ಯ ಮಹಾಮಂಗಲ ಕಾರ್ಯಕ್ರಮವು ಶುಕ್ರವಾರ ಗೋಧೂಳಿ ಲಗ್ನದಲ್ಲಿ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ‘ಮಂಗಲಭೂಮಿ’ಯಲ್ಲಿ ಆರಂಭಗೊಂಡಿತು. ಬೆಳಗ್ಗೆ 7.30ಕ್ಕೆ ಕಾಮಧೇನು ಹವನ, ಗೋವರ್ಧನ ಪೂಜೆ, ಗೋಪೂಜೆ, ಗೋದಾನ, ಗೋ ತುಲಾಭಾರ, ಸಂಜೆ ಮಂಗಳೂರು ಪಡೀಲ್‌ನಿಂದ ಹಸಿರುಕಾಣಿಕೆ ಸಹಿತ ಶೋಭಾಯಾತ್ರೆ ಪ್ರಾರಂಭವಾಗಿ ಸಂಜೆ 6.30ರ ಗೋಧೂಳಿ ಸಮಯ ಕೂಳೂರಿನ ಮಂಗಲಭೂಮಿಗೆ ಪ್ರವೇಶವಾಯಿತು. ಬಳಿಕ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಇತರ ಮಠಾಧೀಶರ ಉಪಸ್ಥಿತಿಯಲ್ಲಿ ಗೋಯಾತ್ರಾ ಮಹಾಮಂಗಲವನ್ನು ಉದ್ಘಾಟಿಸಿದರು. ಬಳಿಕ ಗೋಜ್ಯೋತಿ ಪ್ರಜ್ವಲನ, ಗೋದೀಪೋತ್ಸವ ನಡೆಯಿತು.
ಗೋ ಹತ್ಯೆ ನಿಲ್ಲುವ ವಿಶ್ವಾಸ
ಈ ಸಂದರ್ಭ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮಾತನಾಡಿ, ಜ. 29ರಂದು ಸಂತ ಸಂಗಮ ಹಾಗೂ ಲಕ್ಷಾಂತರ ಗೋ ಪ್ರೇಮಿಗಳ ಸಂಗಮದಿಂದ ಗೋ ರಕ್ಷಣೆಯ ಅಭೇದ್ಯ ಕೋಟೆ ನಿರ್ಮಾಣವಾಗಲಿದ್ದು ಗೋ ಹತ್ಯೆ ನಿಲ್ಲುವ ಕುರಿತಾಗಿ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದರು. ಭಾರತವನ್ನು ಗೋ ಸೂತ್ರ ಒಂದಾಗಿಸಬಲ್ಲುದು. ವಿವಿಧ ಜಾತಿ ಪಂಗಡಗಳಿದ್ದರೂ ಗೋ ರಕ್ಷಣೆಗಾಗಿ ಒಂದಾದಾಗ ಗೋ ಸಂಹಾರ ನಿಲ್ಲುತ್ತದೆ. ಗೋ ಹತ್ಯಾ ಕಳಂಕದಿಂದ ದೇಶವನ್ನು ರಕ್ಷಿಸುವುದು ಸಂತರಾದ ನಮ್ಮಿಂದ ಮಾತ್ರ ಸಾಧ್ಯ. ಗೋ ಪ್ರೇಮಿಗಳಿಗೆ, ಗೋ ಭಕ್ತರಿಗೆ ಶಕ್ತಿಯಾಗಿ ಸಂತರು ನಿಂತಾಗ ಗೋಹತ್ಯಾ ಮುಕ್ತ ದೇಶವನ್ನಾಗಿ ಮಾಡಬಹುದಾಗಿದೆ ಎಂದರು.
ಗೋವು ರಾಷ್ಟ್ರೀಯ ಪ್ರಾಣಿಯಾಗಲಿ
ಹುಲಿಯ ಬದಲು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ದೇಶ ಘೋಷಿಸಬೇಕು. ಹೀಗಾದಾಗ ಮಾತ್ರ ಗೋ ಹತ್ಯೆ ನಿಲ್ಲಲಿದೆ. ರಾಷ್ಟ್ರ ಪಕ್ಷಿ ನವಿಲು, ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಕೊಲ್ಲಲು ಹೇಗೆ ನಿಷೇಧವಿದೆಯೋ ಹಾಗೆಯೇ ಗೋ ಹತ್ಯೆಗೂ ನಿಷೇಧ ಅಗತ್ಯ ಎಂದು ಮೂಡಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಸರಕಾರ ಗೋ ಹತ್ಯಾ ನಿಷೇದ ಕಾನೂನು ತರುವ ಮೂಲಕ ಲಕ್ಷಾಂತರ ಸಂತರ, ಕೋಟ್ಯಂತರ ಗೋ ಪ್ರೇಮಿಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ವಿಖ್ಯಾತಾನಂದ ಸ್ವಾಮೀಜಿ, ಚೆನ್ನಕೇಶವ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ವಾಗತ ಸಮಿತಿ ಅಧ್ಯಕ್ಷ ನಿಟ್ಟೆ ವಿನಯ ಹೆಗ್ಡೆ ಮತ್ತು ಮಾರ್ಗದರ್ಶಕ ಮಂಡಳಿ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
81 ದಿನ; ಸಪ್ತರಾಜ್ಯ ಸಂಚರಿಸಿದ ಯಾತ್ರೆ
ಅಳಿವಿನ ಅಂಚಿನಲ್ಲಿರುವ ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಗಾಗಿ, ಪ್ರಕೃತಿ – ಪರಿಸರದ ಉಳಿವಿಗಾಗಿ, ಜೀವ ಜಗತ್ತಿನ ಒಳಿತಿಗಾಗಿ, ಮನುಕುಲದ ಸ್ವಸ್ಥ ಬದುಕಿಗಾಗಿ, ಗೋಮಾತೆಯ ಹಾಲುಂಡ ಹೃದಯಗಳಲ್ಲಿ ಭಾವ ಜಾಗೃತಿಗಾಗಿ ಗೋವಿಗಾಗಿ ಆತ್ಮಾರ್ಪಣೆ ಮಾಡಿದ ಗೋ ಪ್ರೇಮಿ ಮಂಗಲಪಾಂಡೆಯ ಪ್ರೇರಣೆಯೊಂದಿಗೆ ನಾಡಿನ ಮಠಾಧೀಶರ ನೇತೃತ್ವದಲ್ಲಿ 2016ರ ನವಂಬರ್ 08 ಗೋಪಾಷ್ಟಮಿಯಂದು ಪ್ರಾರಂಭಿಸಿದ ಮಂಗಲ ಗೋಯಾತ್ರೆಯು 81 ದಿನಗಳ ಕಾಲ ಸಪ್ತರಾಜ್ಯಗಳ ಪರ್ಯಂತ ಸಂಚರಿಸಿ ಜನಮಾನಸದಲ್ಲಿ ಗೋಜಾಗರಣಾ ಜ್ಯೋತಿಯನ್ನು ಪ್ರಜ್ವಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.